ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಭವಾನಿ ಎಂಬ ಹೆಸರಿನ ಮನೆಯಲ್ಲಿ ನಡೆಸುತ್ತಿದ್ದ ಅನೈತಿಕ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಐವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಉಡುಪಿ (ಜು.22): ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಭವಾನಿ ಎಂಬ ಹೆಸರಿನ ಮನೆಯಲ್ಲಿ ನಡೆಸುತ್ತಿದ್ದ ಅನೈತಿಕ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಐವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಂಧಿತರನ್ನು ಅಬ್ದುಲ್‌ ಸಲಾಮತ್‌ ಮತ್ತು ಚಂದ್ರಹಾಸ ಎಂದು ಗುರುತಿಸಲಾಗಿದೆ. 

5 ಜನ ನೊಂದ ಮಹಿಳೆಯರಲ್ಲಿ ಮೂವರು ಬೆಂಗಳೂರು ಮೂಲದ ನಿವಾಸಿಗಳಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್‌ ಹಾಗೂ ಮುಂಬೈ ವಾಸಿಗಳಾಗಿದ್ದಾರೆ. ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ ಕಾಂಡೋಮ್‌ಗಳು, 4 ಮೊಬೈಲ್‌ ಫೋನ್‌, 1 ಕಾರು, 2 ಮೋಟಾರ್‌ ಸೈಕಲ್‌ ಹಾಗೂ ನಗದು ರೂ 10,000/- ಯನ್ನು ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೈತಿಕ ಪೊಲೀಸ್‌ಗಿರಿ ನಡೆಸಿದ 18 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

 ಖಾಲಿದ್ ಪರಾರಿ: ಅನೈತಿಕ ಚಟುವಟಿಕೆ ನಡೆಸಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್‌ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಅದೇ ರೀತಿ ಶಾಂತಿನಗರದ ಮನೆಯ ಮೇಲೆ ಬ್ರಹ್ಮಾವರ ಸಿ.ಪಿ.ಐ ದಿವಾಕರ್ ನೇತೃತ್ವದಲ್ಲಿ ದಾಳಿ ಮಾಡಿ, ಮನೆಯನ್ನು ವೇಶ್ಯಾವಾಟಿಕೆಗೆ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಸದರಿ ಮನೆಯನ್ನು ಜಫ್ತು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

ಅಮೆರಿಕದಲ್ಲಿ ತಲೆ ಎತ್ತಲಿದೆ ಕಾಲಭೈರವೇಶ್ವರ ದೇಗುಲ, ನಿರ್ಮಲಾನಂದ ಶ್ರೀಗಳಿಂದ

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ ನಿರ್ದೇಶನದಂತೆ ಬ್ರಹ್ಮಾವರ ಸಿ.ಪಿ.ಐ ದಿವಾಕರ್‌ ಹಾಗೂ ಮಣಿಪಾಲ ಠಾಣಾ ನಿರೀಕ್ಷಕ ದೇವರಾಜ್ ನೇತೃತ್ವದಲ್ಲಿ ಪಿ.ಎಸ್.ಐ ಅಬ್ದುಲ್‌ ಖಾದರ್, ಹೆಚ್‌ ಸಿ ಸುಕುಮಾರ್‌ ಶೆಟ್ಟಿ, ಹೆಚ್ ಸಿ ಇಮ್ರಾನ್‌, ಹೆಚ್‌ ಸಿ ಸುರೇಶ್‌ ಕುಮಾರ್‌, ಮ.ಹೆಚ್‌ಸಿ ಜ್ಯೋತಿ ನಾಯಕ್, ಪಿ ಸಿ ಅರುಣ, ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.