ಚಾಮರಾಜನಗರ: ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ

ಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪ ವಿಭಾಗದ ಹನೂರು ಬಫರ್‌ ವಲಯದ ಹನೂರು ಶಾಖೆಯ ಎಲ್ಲೇಮಾಳ ಗಸ್ತಿನ ಅರಕನಹಳ್ಳ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿ ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುವ ವೇಳೆ ದಾಳಿ. 

Two Arrested for Hunted Deer in Chamarajanagara grg

ಹನೂರು(ಆ.09): ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಕಾಂಚಳ್ಳಿ ಗ್ರಾಮದ ನಾಗರಾಜು (38), ತೇಜಸ್‌ (21) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ: 

ಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪ ವಿಭಾಗದ ಹನೂರು ಬಫರ್‌ ವಲಯದ ಹನೂರು ಶಾಖೆಯ ಎಲ್ಲೇಮಾಳ ಗಸ್ತಿನ ಅರಕನಹಳ್ಳ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿ ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುವ ವೇಳೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್‌ ಕುಮಾರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್‌ ಬಿ.ಎಸ್‌ ಅವರ ಮಾರ್ಗದರ್ಶನದಲ್ಲಿ ಹನೂರು ಬಫರ್‌ ವಲಯದ ವಲಯ ಅರಣ್ಯ ಅಧಿಕಾರಿ ಪ್ರವೀಣ್‌ ಬಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಜಿಂಕೆ ಮಾಂಸ, ಎರಡು ಮೊಬೈಲ್‌, ಒಂದು ಮಚ್ಚು ಒಂದು ಕತ್ತಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಪಂದನಾ ವಿಜಯ್‌ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಕಾರ್ಯಾಚರಣೆಯಲ್ಲಿ ವಲಯ ಉಪ ಅರಣ್ಯಾಧಿಕಾರಿ ಆರ್‌ ಸಾಲನ್‌, ಗಸ್ತು ಅರಣ್ಯ ಪಾಲಕರಾದ ಅನಿಲ್‌ ಕುಮಾರ್‌ ಗಣೇಶ್‌ ಕೆಎನ್‌ ಅರಣ್ಯ ವೀಕ್ಷಕರಾದ ಪ್ರಭು ವಿ ವಾಹನ ಚಾಲಕರಾದ ಮುಕುಂದ ವರ್ಮ, ರಾಜೇಶ್‌ ಹಾಗೂ ಪಿಲಾಕ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios