Asianet Suvarna News Asianet Suvarna News

Markscard Fraud: ವೆಬ್‌ಸೈಟ್‌ನಲ್ಲೇ ನಕಲಿ ಅಂಕಪಟ್ಟಿ ನೀಡುತ್ತಿದ್ದ ಖದೀಮರು..!

*   ಕೇರಳ ಮೂಲದ ಇಬ್ಬರು ಆರೋಪಿಗಳ ಬಂಧನ
*   ಇಂಗ್ಲೆಂಡ್‌ಗೆ ತೆರಳಲು ಅಕಲಿ ಅಂಕಪಟ್ಟಿ ಸೃಷ್ಟಿ
*   ಏರ್‌ಪೋರ್ಟ್‌ನಲ್ಲಿ ದಾಖಲೆ ಪರಿಶೀಲಿಸಿದಾಗ ಅನುಮಾನ
 

Two Arrested For Duplicate Marks card Fraud Case in Bengaluru grg
Author
Bengaluru, First Published Dec 24, 2021, 5:36 AM IST

ಬೆಂಗಳೂರು(ಡಿ.24):  ನಕಲಿ ಶೈಕ್ಷಣಿಕ ದಾಖಲೆ(Duplicate Academic Record) ಬಳಸಿ ವೀಸಾ(VISA) ಪಡೆದು ವಿದೇಶಕ್ಕೆ ತೆರಳಲು ಯತ್ನಿಸಿದ ಯುವಕ ಸೇರಿದಂತೆ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕೇರಳ(Kerala) ಮೂಲದ ಸೋಜು ಹಾಗೂ ಅನುರಾಗ್‌ ಬಂಧಿತರಾಗಿದ್ದು(Arrest), ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ಗೆ(England) ತೆರಳಲು ಸೋಜು ಸಲ್ಲಿಸಿದ್ದ ದಾಖಲೆಗಳನ್ನು ಕೆಐಎ ವಲಸೆ ವಿಭಾಗದ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ಶೈಕ್ಷಣಿಕ ದಾಖಲೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ವಲಸೆ ವಿಭಾಗದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಲಂಡನ್‌ಗೆ(London) ಹೊರಟ್ಟಿದ್ದ ಸೋಜು ಹಾಗೂ ಆತನಿಗೆ ನಕಲಿ ಅಂಕಪಟ್ಟಿ ಸೇರಿದಂತೆ ದಾಖಲೆ ಸೃಷ್ಟಿಸಿಕೊಂಡಿದ್ದ ಅನುರಾಗ್‌ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಲ್ಯಾಬ್‌ನಲ್ಲಿ ಪೋರ್ನ್‌ ವಿಡಿಯೋ ತೋರಿಸಿ, ಪದೇ ಪದೇ ಸಂತಾನೋತ್ಪತ್ತಿ ಪಾಠ ಹೇಳುತ್ತಿದ್ದ ಶಿಕ್ಷಕ ಅರೆಸ್ಟ್!

ಕಲುಬರಗಿ ವಿವಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ

ಕೇರಳದ ಸೋಜು, ಸ್ಥಳೀಯವಾಗಿ ಖಾಸಗಿ ಕಂಪನಿಯ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಹೆಚ್ಚಿನ ಹಣ ಸಂಪಾದಿಸುವ ಸಲುವಾಗಿ ವಿದೇಶಕ್ಕೆ ತೆರಳು ಉದ್ದೇಶಿಸಿದ ಆತ, ವೀಸಾ ಮತ್ತು ಪಾಸ್‌ಪೋರ್ಟ್‌ ಪಡೆಯಲು ಅಗತ್ಯವಿರುವ ಶೈಕ್ಷಣಿಕ ದಾಖಲೆಗಾಗಿ ಅನುರಾಗ್‌ನನ್ನು ಸಂಪರ್ಕಿಸಿದ್ದ. ನಂತರ ಅನುರಾಗ್‌, ಸೋಜುನಿಂದ ಹಣ ಪಡೆದು ಆತನಿಗೆ ನಕಲಿ ದಾಖಲೆ ಮಾತ್ರವಲ್ಲದೆ ಅವುಗಳನ್ನು ಬಳಸಿ ಇಂಗ್ಲೆಂಡ್‌ಗೆ ತೆರಳಲು ವೀಸಾ ಮತ್ತು ಪಾಸ್‌ಪೋರ್ಟ್‌ ಒದಗಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ ಡಿ.17ರಂದು ಕೆಐಎ ಮೂಲಕ ಬ್ರಿಟಿಷ್‌ ಏರ್‌ವೇಸ್‌(British Airways) ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಲು ಸೋಜು ಟಿಕೆಟ್‌ ಬುಕ್‌ ಮಾಡಿದ್ದ. ಆಗ ಆತನ ದಾಖಲೆಗಳನ್ನು ಪರಿಶೀಲಿಸಿದಾಗ ವಲಸೆ ವಿಭಾಗದ ಅಧಿಕಾರಿಗಳು, ಸೋಜುನ ಅಂಕಪಟ್ಟಿ ಬಗ್ಗೆ ಶಂಕೆ ಮೂಡಿದೆ. ಬಳಿಕ ಅಮೂಲಾಗ್ರವಾಗಿ ಪರಿಶೀಲಿಸಿದಾಗ ಕಲಬುರಗಿ ವಿಶ್ವವಿದ್ಯಾಲಯ ಹೆಸರಿನಲ್ಲಿ ನಕಲಿ ಪದವಿ ಅಂಕಪಟ್ಟಿ(Markscard) ಎಂಬುದು ಗೊತ್ತಾಗಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಕಲಿ ಅಂಕಪಟ್ಟಿದಂಧೆಯ ಅನುರಾಗ್‌ನ ಕುರಿತು ಮಾಹಿತಿ ಸಿಕ್ಕಿತು. ಈ ದಂಧೆಯಲ್ಲಿ ತಪ್ಪಿಸಿಕೊಂಡಿರುವ ಇನ್ನುಳಿದ ಮೂವರ ಪತ್ತೆಗೆ ಕೇರಳಕ್ಕೆ ವಿಶೇಷ ತಂಡ ತೆರಳಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆನ್‌ಲೈನ್‌ನಲ್ಲೇ ನಕಲಿ ಅಂಕಪಟ್ಟಿ ವ್ಯವಹಾರ!

ನಕಲಿ ಅಂಕಪಟ್ಟಿ ದಂಧೆ ಸಲುವಾಗಿಯೇ ‘ಒನ್‌ ಸಿಟ್ಟಿಂಗ್‌ ಡಾಟ್‌ಕಾಮ್‌’(One Sitting.com) ಎಂಬ ಹೆಸರಿನಲ್ಲಿ ಆರೋಪಿ ಅನುರಾಗ್‌ ವೆಬ್‌ಸೈಟ್‌ ತೆರೆದಿದ್ದ. ಕೇರಳ, ಆಂಧ್ರಪ್ರದೇಶ(Andhra Pradesh) ಹಾಗೂ ಕರ್ನಾಟಕ(Karnataka) ಸೇರಿದಂತೆ ಇತರೆ ರಾಜ್ಯಗಳ ಈ ಜಾಲ ಹರಡಿದೆ. ಜನರಿಂದ ಹಣವನ್ನು ‘ಟ್ರೂ ವೇ ಗ್ಲೋಬಲ್‌ ಎಜುಕೇಷನ್‌ ಇನ್‌ಸ್ಟಿಟ್ಯೂಟ್‌’(True Way Global Education Institute) ಹೆಸರಿನಲ್ಲಿ ಪಡೆದು ನಕಲಿ ಅಂಕಪಟ್ಟಿಯನ್ನು ತಯಾರಿಸಿ ಆರೋಪಿಗಳು ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಿವಿಗಳ ಹೆಸರು ಬಳಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಕಲಿ ಶೈಕ್ಷಣಿಕ ದಾಖಲೆಗಳನ್ನು ಬಳಸಿ ಕೆಲವರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ವಿದೇಶಕ್ಕೂ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಬಾರ್‌ಗೆ ಬೆಂಕಿ ಹಚ್ಚಲು ಬಂದವರು ಅಮಲಲ್ಲಿ ಕಾಂಡಿಮೆಂಟ್ಸ್‌ ಸುಟ್ಟರು

ಅಕ್ರಮ ಮದ್ಯ ವಶ: ಆರೋಪಿ ಬಂಧನ

ಕೋಲಾರ(Kolar): ಶ್ರೀನಿವಾಸಪುರ ವಲಯ ವ್ಯಾಪ್ತಿಯ ನಂಬಿಹಳ್ಳಿ ಗ್ರಾಮದ ವೆಂಕಟಾಚಲಪತಿ ಎಂಬುವವರ ಮನೆಯಲ್ಲಿ ಒಟ್ಟು 44.370 ಲೀಟರ್‌ ಮಧ್ಯ ಹಾಗೂ 28.350 ಲೀಟರ್‌ ಬಿಯರ್‌ ಅಕ್ರಮವಾಗಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಮದ್ಯವನ್ನು ಜಪ್ತಿ ಪಡಿಸಿ ಕೊಂಡು ಆರೋಪಿತ ವೆಂಕಟಾಚಲಪತಿಯನ್ನು ಬಂಧಿಸಲಾಗಿದೆ. 

ದಾಳಿಯ ನೇತೃತ್ವವನ್ನು ಅಬಕಾರಿ ನಿರೀಕ್ಷಕರಾದ ಬಿ.ಎಸ್‌. ರೋಹಿತ್‌ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿ ವೆಂಕಟಾಚಲಪತಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.. ಅಬಕಾರಿ ಉಪ ನಿರೀಕ್ಷಕ ಕೆ.ಎಂ.ಕೃಷ್ಣಪ್ಪ, ಸಿಬ್ಬಂದಿಗಳಾದ ಮಂಜುನಾಥ್‌ ಹಾಗೂ ರಾಘವೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.
 

Follow Us:
Download App:
  • android
  • ios