*  ವಾಹನ ಖರೀದಿಗೆ ನೀಡಿದ್ದ ಹಣ ವಾಪಸ್‌ ಕೇಳಿದ್ದಕ್ಕೆ ಗಲಾಟೆ*  ನರಸಿಂಹ ಶೆಟ್ಟಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿ*  ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು(ಫೆ.01): ಸ್ನೇಹಿತೆಯ ಪತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿ(Accused) ಹಾಗೂ ಆತನ ಸ್ನೇಹಿತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಶ್ರೀನಗರದ ಚಂದ್ರು (32) ಮತ್ತು ಕಿರಣ್‌ (34) ಬಂಧಿತರು. ನಾಗಮಂಗಲ ಮೂಲದ ನರಸಿಂಹ ಶೆಟ್ಟಿ(34)ಚಾಕು ಇರಿತಕ್ಕೆ ಒಳಗಾದವರು.

ಮಂಡ್ಯ ನಾಗಮಂಗಲ ಮೂಲದ ನರಸಿಂಹಶೆಟ್ಟಿ ಊರಿನಲ್ಲಿ ವ್ಯವಸಾಯ ಮಾಡುತ್ತಾನೆ. ಈತನ ಪತ್ನಿ ವರಲಕ್ಷ್ಮಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ ಕತ್ರಿಗುಪ್ಪೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಈ ವರಲಕ್ಷ್ಮಿ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಆರೋಪಿ ಚಂದ್ರು ಸಹೋದರಿಯೂ ಕೆಲಸ ಮಾಡುತ್ತಿದ್ದಳು. ಸಹೋದರಿಯ ಮಾತನಾಡಿಸಲು ಆಗಾಗ ಚಂದ್ರು ಆಸ್ಪತ್ರೆ ಬಳಿ ಹೋಗುತ್ತಿದ್ದಾಗ ವರಲಕ್ಷ್ಮಿ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಸಲುಗೆಯಿಂದ ಇದ್ದರು ಎನ್ನಲಾಗಿದೆ.

Burglar Arrest: 13 ವರ್ಷದ ನಂತರ ಸೆರೆಸಿಕ್ಕ ಹೆಬ್ಬಾಳದ ಚಾಲಾಕಿ, ನೂರಾರು ಮನೆ ಕೀ ಮಾಡಿಟ್ಟುಕೊಂಡಿದ್ದ!

ತಾಕೀತು: 

ಇತ್ತೀಚೆಗೆ ಚಂದ್ರು ಹೊಸ ದ್ವಿಚಕ್ರ ವಾಹನ ಖರೀದಿಸುವಾಗ ವರಲಕ್ಷ್ಮಿ ಹಣ ನೀಡಿದ್ದಳು. ಈ ವಿಚಾರ ನರಸಿಂಹ ಶೆಟ್ಟಿಗೆ ತಿಳಿದು ಪತ್ನಿ ವರಲಕ್ಷ್ಮಿಗೆ ಬೈದಿದ್ದ. ಅಲ್ಲದೆ, ಆರೋಪಿ ಚಂದ್ರುಗೆ ಹಣ ವಾಪಾಸ್‌ ಕೊಟ್ಟು ಪತ್ನಿಯಿಂದ ಅಂತರ ಕಾಯ್ದುಕೊಳ್ಳುವಂತೆ ತಾಕೀತು ಮಾಡಿದ್ದ. ಆದರೂ ಚಂದ್ರು ಹಣ ಹಿಂದಿರುಗಿಸಿರಲಿಲ್ಲ. ಹೀಗಾಗಿ ನರಸಿಂಹ ಶೆಟ್ಟಿ ಹಾಗೂ ಚಂದ್ರು ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ನರಸಿಂಹ ಶೆಟ್ಟಿ ಭಾನುವಾರ ರಾತ್ರಿ ಪತ್ನಿ ನೋಡಲು ನಾಗಮಂಗಲದಿಂದ ಕತ್ರಿಗುಪ್ಪೆಗೆ ಬಂದಿದ್ದ. ಈ ವಿಚಾರ ತಿಳಿದು ಆರೋಪಿ ಚಂದ್ರು ತನ್ನ ಇಬ್ಬರು ಸಹಚರರಾದ ಕಿರಣ್‌ ಮತ್ತು ಪ್ರಮೋದ್‌ ಎಂಬುವವರೊಂದಿಗೆ ವರಲಕ್ಷ್ಮಿ ಮನೆಗೆ ನುಗ್ಗಿ ನರಸಿಂಹ ಶೆಟ್ಟಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಬಳಿಕ ಗಾಯಾಳು ನರಸಿಂಹ ಶೆಟ್ಟಿಯನ್ನು ಸ್ಥಳೀಯರು ಆಸ್ಪತ್ರೆಗೆ(Hospital) ದಾಖಲಿಸಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ(Arrest).

ಮಾರಕಾಸ್ತ್ರದೊಂದಿಗೆ ದರೋಡಗೆ ಹೊಂಚು ಹಾಕಿದ್ದ ಮೂವರ ಸೆರೆ

ಮಾರಕಾಸ್ತ್ರ ಹಿಡಿದು ದರೋಡೆಗೆ ಹೋಚಿ ಹಾಕಿ ಕುಳಿತ್ತಿದ್ದ ಮೂವರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿ ಅಶೋಕ(31), ಮಾರೇನಹಳ್ಳಿಯ ಆದರ್ಶ(21) ಮತ್ತು ವಿಜಯ್‌(23) ಬಂಧಿತರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ .3 ಲಕ್ಷ ಮೌಲ್ಯದ ಆರು ದ್ವಿಚಕ್ರವಾಹನ, ವಿವಿಧ ಕಂಪನಿಗಳ ಆರು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಐವರು ಗೋವಿಂದರಾಜನಗರ ಸರಹದ್ದಿನಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ(Robbery) ಹೊಂಚು ಹಾಕಿ ಕುಳಿತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ. ಈ ವೇಳೆ ತಪ್ಪಿಸಿಕೊಂಡಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನದಿಂದ ವಿಜಯನಗರ, ಅನ್ನಪೂರ್ಣೇಶ್ವರಿ ನಗರ, ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್‌ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ಪಿಯುಸಿಗೆ ವ್ಯಾಸಂಗ ಮೊಟಕುಗೊಳಿಸಿ ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಕಳವು, ದರೋಡೆ ಇತ್ಯಾದಿ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದಾಗಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Bengaluru Drugs Mafia: ಆಫ್ರಿಕನ್‌ ಕಿಚನ್‌ ನೆಪದಲ್ಲಿ ಡ್ರಗ್ಸ್‌ ದಂಧೆ: ಇಬ್ಬರು ನೈಜೀರಿಯನ್‌ಗಳ ಸೆರೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ:

ಆರೋಪಿ ಸೆರೆಮಂಗಳೂರು(Mangaluru): ಕಾವೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ(Bagalkot) ಮೂಲದ ದಯಾನಂದ (32) ಬಂಧಿತ ಆರೋಪಿ. ಈತ ಬಸ್‌ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಈತ ಕಾವೂರಿನಲ್ಲಿ ವಾಸವಾಗಿದ್ದ 13 ವರ್ಷ ಮಗುವನ್ನು ಪುಸಲಾಯಿಸಿ ಖಾಸಗಿ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.