Asianet Suvarna News Asianet Suvarna News

Burglar Arrest: 13 ವರ್ಷದ ನಂತರ ಸೆರೆಸಿಕ್ಕ ಹೆಬ್ಬಾಳದ ಚಾಲಾಕಿ, ನೂರಾರು ಮನೆ ಕೀ ಮಾಡಿಟ್ಟುಕೊಂಡಿದ್ದ!

* 3-6 ತಿಂಗಳಿಗೊಮ್ಮೆ ಕಳ್ಳತನ ಮಾಡಿದ್ತ ಚಾಲಾಕಿ,  ಖತರ್ನಾಕ್‌ ಐಡಿಯಾ
* 13 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಓಡಾಟ
* ಕೊನೆಗೂ ಸಿಕ್ಕಿಬಿದ್ದ  ಖದೀಮ ಕಳ್ಳ
* ಅನುಮಾನ ಬರಬಾರದೆಂದು ಕಾದು ಕಳ್ಳತನ ಮಾಡ್ತಿದ್ದ

Bengaluru Police arrest House burglar after 13 years mah
Author
Bengaluru, First Published Jan 31, 2022, 2:29 AM IST

ಬೆಂಗಳೂರು( ಜ. 31) ಮೂರು-ಆರು ತಿಂಗಳಿಗೊಮ್ಮೆ ಮನೆಗಳವು (Robbery) ಮಾಡಿಕೊಂಡು 13 ವರ್ಷಗಳಿಂದ ಪೊಲೀಸರ (Karnataka Police) ಕೈಗೆ ಸಿಗದೆ ಓಡಾಡುತ್ತಿದ್ದ ಚಾಲಾಕಿ ಕಳ್ಳ (Robber) ಹೆಬ್ಬಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೆಬ್ಬಾಳದ (Bengaluru Hebbal) ನಿವಾಸಿ ಮುರಳಿ(45) ಬಂಧಿತ. ಆರೋಪಿಯ ಬಂಧನದಿಂದ ಆರ್‌.ಟಿ. ನಗರ, ಡಿ.ಜೆ.ಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 13 ಮನೆಗಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳನೇ ತರಗತಿ ವ್ಯಾಸಂಗ ಮಾಡಿರುವ ಆರೋಪಿಯು ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿದ್ದ. 2009ರಿಂದ ಮನೆಗಳವು ನಡೆಸಲು ಆರಂಭಿಸಿದ್ದ ಆರೋಪಿಯು ಪದೇ ಪದೆ ಕಳವು ಮಾಡುತ್ತಿದ್ದರೆ, ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೂರು, ಆರು ತಿಂಗಳು ಹಾಗೂ ಕೆಲವೊಮ್ಮೆ ವರ್ಷಕ್ಕೆ ಒಮ್ಮೆ ಮಾತ್ರ ಮನೆಗಳವು ಮಾಡಿ ಸುಮ್ಮನಾಗುತ್ತಿದ್ದ ಎಂಬುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಮಕ್ಕಳನ್ನು ಶಾಲೆಗೆ ಬಿಡಲು ಮನೆಗೆ ಬೀಗ ಹಾಕಿಕೊಂಡು ಹೋಗುವ ಪೋಷಕರನ್ನು ಹಿಂಬಾಲಿಸಿ ಮನೆಯಿಂದ ಹೊರಟರೆ ಶಾಲೆಗೆ ಹೋಗಿ ಮಕ್ಕಳನ್ನು ಬಿಟ್ಟು ಯಾವಾಗ ಮನೆಗೆ ಬರುತ್ತಾರೆ ಎಂಬುದನ್ನು ತಿಳಿದುಕೊಂಡು ಬಳಿಕ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ. ಕೆಲ ಪ್ರಕರಣಗಳಲ್ಲಿ ಸುಮಾರು ಒಂದು ತಿಂಗಳು ಪೋಷಕರ ಚಲನವಲನ ಗಮನಿಸಿ ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿ ಕಳವು ಮಾಡಿ ಪರಿಯಾಗುತ್ತಿದ್ದ. ಆರೋಪಿ ಕಳ್ಳತನಕ್ಕಾಗಿಯೇ ನೂರಾರು ನಕಲಿ ಕೀ ಮಾಡಿಸಿ ಇರಿಸಿಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Woman Suicide : ವಸತಿ ಗೃಹದಲ್ಲೇ ಕಾನ್ಸ್ಟೇಬಲ್ ಪತ್ನಿ ಸುಸೈಡ್, ಕಾರಣ ನಿಗೂಢ!

ಪತ್ತೆಗೆ ಬೆರಳಚ್ಚು ನೆರವು:   ಆರೋಪಿ ಮುರಳಿ 2009ರಿಂದ ಮನೆಗಳವು ಕೃತ್ಯಗಳಲ್ಲಿ ತೊಡಗಿದ್ದಾನೆ. ಆದರೆ, ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಹೆಬ್ಬಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳವು ಘಟನೆ ವೇಳೆ ಪೊಲೀಸರು ತನಿಖೆ ವೇಳೆ ಘಟನಾ ಸ್ಥಳದಲ್ಲಿ ಬೆರಳಚ್ಚು ಸಂಗ್ರಹಿಸಿದ್ದರು. ಕಳೆದ ಅ.27ರಂದು ಆರೋಪಿಯು ಆರ್‌.ಟಿ.ನಗರದ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಮುಂದಾದ ಪೊಲೀಸರು ಈ ಮನೆಯಲ್ಲಿ ಬೆರಳಚ್ಚು ಸಂಗ್ರಹಿಸಿದ್ದರು. ಈ ವೇಳೆ ಬೆರಳಚ್ಚುಗಳನ್ನು ಹೋಲಿಕೆ ಮಾಡಿ ನೋಡಿದಾಗ ಮುರುಳಿ ಬೆರಳಚ್ಚಿಗೆ ಹೋಲಿಕೆ ಆಗಿದೆ. ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಯುವತಿ ಏಕಾಂಗಿ ಪ್ರತಿಭಟನೆ: ನಂಬಿಸಿ ಕೈಕೊಟ್ಟ ಪೊಲೀಸಪ್ಪನ ವಿರುದ್ಧ ಯುವತಿ ಧರಣಿ ಕುಳಿತುಕೊಂಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್‌ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟಿರುವ ಆರೋಪ ಕೇಳಿ ಬಂದಿದೆ.  ತಿ.ನರಸೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ರವಿ ವಿರುದ್ಧ ಆರೋಪ ಕೇಳಿ ಬಂದಿದ್ದು ಠಾಣೆ ಮುಂದೆ ಯುವತಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ನಿವಾಸಿ ಸಂತ್ರಸ್ತೆ ಯುವತಿ ಧರಣಿ ಆರಂಭಿಸಿದ್ದಾರೆ 2018ರಲ್ಲಿ ಫೇಸ್ಬುಕ್  ಮೂಲಕ  ಇಬ್ಬರ ಸ್ನೇಹ ಶುರುವಾಗಿತ್ತು. ಬಳಿಕ ಪ್ರೇಮಕ್ಕೆ ತಿರುಗಿದ ರವಿ ಮತ್ತು ಯುವತಿಯ ಸ್ನೇಹ ಇವತ್ತು ಈ ಹಂತಕ್ಕೆ ಬಂದು ನಿಂತಿದೆ.  ದೈಹಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ತಿ.ನರಸೀಪುರ ಪೋಲೀಸ್ ಠಾಣೆ ಮುಂಭಾಗ ಸಂತ್ರಸ್ತ ಯುವತಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ದೂರು ಸಹ ದಾಖಲಾಗಿದೆ.

 

 

Follow Us:
Download App:
  • android
  • ios