ಬಂಧಿತ ಆರೋಪಿಗಳಿಂದ ಹಳೆಯ ಕಾಲದ ನಂದಿ ವಿಗ್ರಹ, ಬೈನಾಕುಲರ್‌, ಬಿಂದಿಗೆ ಹಾಗೂ ನಾಣ್ಯಗಳು ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು 

ಬೆಂಗಳೂರು(ಡಿ.02): ಮನೆಗೆ ಅದೃಷ್ಟದ ತರುತ್ತವೆ ಎಂದು ಹೇಳಿ ಪ್ರಾಚೀನ ಕಾಲದ ದೇವರ ವಿಗ್ರಹ ಸೇರಿದಂತೆ ಕೆಲ ವಸ್ತುಗಳ ಮಾರಾಟದ ನೆಪದಲ್ಲಿ ಸಾರ್ವಜನಿಕರಿಗೆ ವಂಚಿಸಲು ಯತ್ನಿಸಿದ್ದ ಇಬ್ಬರನ್ನು ವೈಯಾಲಿಕಾವಲ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಭಾಗ್ಯಜ್ಯೋತಿ ನಗರದ ಮಹಮ್ಮದ್‌ ಮುಸ್ತಾಫ ಹಾಗೂ ಮೊಹಮ್ಮದ್‌ ಮುಬೀನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಳೆಯ ಕಾಲದ ನಂದಿ ವಿಗ್ರಹ, ಬೈನಾಕುಲರ್‌, ಬಿಂದಿಗೆ ಹಾಗೂ ನಾಣ್ಯಗಳು ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಆರೋಪಿಗಳು ಜನರಿಗೆ ವಂಚಿಸಲು ಯತ್ನಿಸಿರುವ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಬೈಕ್‌ ಕಳ್ಳರ ಸುಳಿವು ಕೊಟ್ಟ ಜಿಪಿಎಸ್‌..!

ತಮ್ಮ ಬಳಿ ಇರುವ ಪ್ರಾಚೀನ ಕಾಲದ ನಂದಿ ವಿಗ್ರಹದಲ್ಲಿ ದಿವ್ಯ ಶಕ್ತಿ ಇದೆ. ಅಲ್ಲದೆ ನಾಣ್ಯಗಳು, ಬೈನಾಕುಲರ್‌ ಸೇರಿದಂತೆ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅದೃಷ್ಟಬರುತ್ತ ದೆ ಎಂದು ಹೇಳಿ ಜನರಿಂದ ಕೋಟ್ಯಂತರ ರುಪಾಯಿ ವಸೂಲಿ ಮಾಡಿ ಆರೋಪಿಗಳು ವಂಚಿಸಲು ಯತ್ನಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.