ಹಾಡಹಗಲೇ ಪೊಲೀಸ್ ಮನೆಗೆ ಕನ್ನ ಹಾಕಲು ಬಂದ ಕಳ್ಳರು, ತಪ್ಪಿಸಿಕೊಂಡು ಹೋಗಲಾಗದೇ ಜೈಲು ಸೇರಿದ್ರು
ಹಾಡಹಗಲೇ ಪೊಲೀಸ್ ಮನೆಗೆ ಕನ್ನ ಹಾಕಲು ಯತ್ನ ಮಾಡಿದ ಖದೀಮರು ಮನೆಯ ಒಳಗೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ತುಮಕೂರು (ಅ.29): ಹಾಡಹಗಲೇ ಪೊಲೀಸ್ ಮನೆಗೆ ಕನ್ನ ಹಾಕಲು ಯತ್ನ ಮಾಡಿದ ಖದೀಮರು ಮನೆಯ ಒಳಗೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ವಿದ್ಯಾನಗರದಲ್ಲಿ ನಡೆದಿದೆ.
ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರೋ ಮಹೇಶ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಮನೆ ಬಾಗಿಲು ಬೀಗ ಹಾಕಿಕೊಂಡು ಕುಟುಂಬ ಸಮೇತವಾಗಿ ಹೆಡ್‌ಕಾನ್ಸ್‌ಸ್ಟೇಬಲ್ ಮಹೇಶ್ ಹೊರಗೆ ಹೋಗಿದ್ದರು. ಮನೆಗೆ ಬೀಗ ಹಾಕಿರೋದನ್ನ ಗಮನಿಸಿದ ನಾಲ್ವರು ಖದೀಮರು, ಒಂದು ಕಾರಿನಲ್ಲಿ ಮಾರಕಾಸ್ತ್ರಗಳ ಸಮೇತ ಬಂದಿದ್ದರು. ಈ ಪೈಕಿ ಇಬ್ಬರು ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದರು. ಖದೀಮರ ಫೈಕಿ ಇಬ್ಬರು ಮನೆಯೊಳಗೇ ನುಗ್ಗಿದರೆ, ಮತ್ತಿಬ್ಬರು ಮನೆ ಹೊರಗಡೆ ವಾಚ್ ಮಾಡುತ್ತಿದ್ದರು.
ನಾನು ಎವರೇಜ್ ಸ್ಟೂಡೆಂಟ್ ಆದ್ರೂ ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ
ಪೊಲೀಸರ ಮನೆಗೆ ಅಪರಿಚಿತರು ಕಾರಿನಲ್ಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಖದೀಮರ ಚಲನವಲನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ, ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಎಸ್ಕೇಪ್ ಆಗಿದ್ದಾರೆ. ಆದರೆ, ಮನೆಯೊಳಗಿದ್ದ ಇಬ್ಬರನ್ನ ಪೊಲೀಸರು ಸೀನಿಮಿಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಕಳ್ಳರು, ಪೋಲೀಸರ ಮೇಲೆಯೇ ಡ್ರ್ಯಾಗರ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆದರೂ, ಅವರನ್ನು ಬಿಡದೇ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮನೆಯ ಕಳ್ಳತನಕ್ಕೆ ಬಂದ ಕಳ್ಳರನ್ನು ಹಿಡಿಯಲು ಹೋಗಿದ್ದ ಶಿರಾ ನಗರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಧರ್ಮೇಶ್ ಮತ್ತು ಖಲೀಲ್ ಮೇಲೆ ಕಳ್ಳರು ಹಲ್ಲೆಗೆ ಯತ್ನ ಮಾಡಿದ್ದಾರೆ. ಈ ವೇಳೆ ಪೊಲೀಸರು ಬಂದೂಕಿನಿಂದ ಶೂಟ್ ಮಾಡಿಸುವುದಾಗಿ ಹೇಳಿದ ನಂತರ, ಒಬ್ಬ ಕಳ್ಳ ತಾನೇ ಚಾಕುವಿನಿಂದ ಚುಚ್ಚಿಕೊಂಡು ಹೈಡ್ರಾಮಾ ಮಾಡಲು ಮುಂದಾಗಿದ್ದಾರೆ. ಇದಾದ ನಂತರ ಪೊಲೀಸರಿಗೆ ತಾವು ಶರಣಾಗುತ್ತೇವೆ ನಮ್ಮ ಜೀವಕ್ಕೆ ಏನೂ ಮಾಡಬೇಡಿ ಎಂದು ಒಪ್ಪಿಕೊಂದು, ಶರಣಾಗಿದ್ದಾರೆ. ಬಳಿಕ ಕಳ್ಳತನಕ್ಕೆ ಬಂದಿದ್ದ ರಿಯಾದ್ ಮತ್ತು ಖಾಲಿದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಿ: ಸರ್ಕಾರಕ್ಕೆ ಶಾಸಕ ಅರವಿಂದ ಬೆಲ್ಲದ ಮನವಿ
ಕಳ್ಳರನ್ನು ವಶಕ್ಕೆ ಪಡೆದ ನಂತರ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗೆ ಶಿರಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ. ಇನ್ನು ಕಳ್ಳತನಕ್ಕೆ ಬಂದು ಪೊಲೀಸರು ಬಂದಾಕ್ಷಣ ಪರಾರಿಯಾಗಿರುವ ಇನ್ನಿಬ್ಬರು ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಪ್ಪಿಸಿಕೊಂಡ ಕಳ್ಳರ ಹುಡುಕಾಟಕ್ಕೆ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.