ಸಿದ್ದಗಂಗಾ ಮಠ ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬಂಡೆಪಾಳ್ಯದ 3 ಆರೋಪಿಗಳ ಬಂಧನ!
ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ ಬಾಲಕಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ ನಡೆದಿದೆ.
ತುಮಕೂರು (ಮಾ.07): ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಗೆ ಸ್ನೇಹಿತನೊಂದಿಗೆ ಬಂದಿದ್ದ ಬಾಲಕಿ ನಂತರ ಪಕ್ಕದಲ್ಲಿಯೇ ಇದ್ದ ಬೆಟ್ಟದ ಬಳಿಗೆ ಮಾತನಾಡಲು ಹೋಗಿದ್ದಾರೆ. ಇವರನ್ನು ಹಿಂಬಾಲಿಸಿಕೊಂಡು ಹೋದ ಕಿಡಿಗೇಡಿಗಳು ಅವರು ಕುಳಿತಿದ್ದ ವಿಡಿಯೋವನ್ನು ಮಾಡಿ ತೋರಿಸಿ ಬೆದರಿಸಿದ್ದಾರೆ. ನಂತರ, ಬಾಲಕಿಯನ್ನು ಎಳೆದೊಯ್ದು ಮನೆಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾರೆ.
ಸಿದ್ದಂಗಾ ಜಾತ್ರೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಈ ವೇಳೆ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರಿಗೆ ಬೆಟ್ಟದ ಕಡೆಗೆ ಹೋಗದಂತೆ ಪೊಲೀಸು ನಿಗಾವಹಿಸಿರುತ್ತಾರೆ. ಆದರೂ, ಪೊಲೀಸರ ಕಣ್ಣು ತಪ್ಪಿಸಿ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಹೀಗೆ, ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಜಾತ್ರೆಗೆ ಬಂದ ಬಾಲಕಿಯೂ ಕೂಡ ಬೆಟ್ಟದ ಬಳಿ ಹೋಗಿ ಮಾತನಾಡಲು ಕುಳಿತಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದು ಅದನ್ನು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ನಂತರ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಬಂಡೇಪಾಳ್ಯದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ ಮಾಡಿದ ಕಲಾವಿದ!
ಇನ್ನು ಬಾಲಕಿ ಅಪ್ರಾಪ್ತಳಾಗಿದ್ದು, ಅವರು ಸಮೂಹಿಕ ಅತ್ಯಾಚಾರ ಮಾಡುವ ವಿಡಿಯೋವನ್ನು ಕೂಡ ಮೊಬೈಲ್‌ನಲ್ಲಿ ರೆಕಾರ್ಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ, ಯುವತಿಗೆ ನಿನ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹಾಗೂ ಹಲ್ಲೆ ಮಾಡುವುದಾಗಿ ಬೆದರಿಸಿ ಅಲ್ಲಿಂದ ಕಳಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ವಿಚಾರಣೆ ಮಾಡಿದಾದ ಸಾಮೂಹಿಕ ಅತ್ಯಾಚಾರ ಆಗಿರುವುದನ್ನು ಹೇಳಿದ್ದಾಳೆ. ಕೂಡಲೇ, ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಾಮೂಹಿಕ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬಾತನನ್ನ ಪೊಲೀಸರು ಬಂಧಿಸಿ ಜೈಲಿಹಟ್ಟಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಸೋಷಿಯಲ್ ಮೀಡಿಯಾ ಗೆಳತನಕ್ಕೆ 8 ಲಕ್ಷ ರೂ ಜತೆ ಚಿನ್ನ ಕಳೆದುಕೊಂಡ ಬೆಂಗಳೂರಿನ ವಿವಾಹಿತೆ!
ತುಮಕೂರಿನಲ್ಲಿಯೂ ಬಾಂಬ್ ಸ್ಪೋಟದ ಆರೋಪಿಗಾಗಿ ಶೋಧ:
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್ ತುಮಕೂರಿನಲ್ಲಿ ಓಡಾಡಿದ್ದ ಎಂಬ ಅನುಮಾನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಂಕಿತ ಬಾಂಬರ್ ಮಾರ್ಚ್ 1ರಂದು ತುಮಕೂರಿನಲ್ಲಿ ಓಡಾಡಿದ್ದ ಎಂಬ ಶಂಕೆ ಹಿನ್ನೆಲೆಯಲ್ಲಿ ಆತನ ಸುಳಿವಿಗಾಗಿ ತುಮಕೂರಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಇಬ್ಬರು ಡಿಸಿಪಿ ನೇತೃತ್ವದಲ್ಲಿ 28 ವಾಹನಗಳಲ್ಲಿ ಆಗಮಿಸಿದ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಶಂಕಿತನ ಹೆಜ್ಜೆ ಗುರುತು ಪತ್ತೆ ಹಚ್ಚಲು ಹುಡುಕಾಟ ನಡೆಸಿದ್ದಾರೆ. ನಗರದ ಬೇರೆ ಬೇರೆ ಭಾಗಗಳಲ್ಲಿ ಇರುವ ಹಲವು ಸಿಸಿ ಕ್ಯಾಮರಾಗಳ ದೃಶ್ಯವನ್ನು ಎನ್‌ಐಎ ಅಧಿಕಾರಿಗಳ ತಂಡ ವೀಕ್ಷಿಸಿದ್ದು, ತುಮಕೂರು ಪೊಲೀಸರ ಜೊತೆ ಶೋಧ ನಡೆಸಿದರು.