Asianet Suvarna News Asianet Suvarna News

ಸೋಷಿಯಲ್‌ ಮೀಡಿಯಾ ಗೆಳತನಕ್ಕೆ 8 ಲಕ್ಷ ರೂ ಜತೆ ಚಿನ್ನ ಕಳೆದುಕೊಂಡ ಬೆಂಗಳೂರಿನ ವಿವಾಹಿತೆ!

 ಇನ್ಸ್ ಟಾಗ್ರಾಂ ನಲ್ಲಿ ಪರಿಚಯವಾದ ಮಹಿಳೆಗೆ  ಬ್ಲಾಕ್ ಮೇಲ್ ಮಾಡಿದ ಭೂಪನೊಬ್ಬ ಬರೋಬ್ಬರಿ  8 ಲಕ್ಷ ಹಣ, 240 ಗ್ರಾಂ ಚಿನ್ನಾಭರಣ ಪೀಕಿದ್ದಾನೆ.

instagram friend blackmail bengaluru married  women lost  12 lakhs gow
Author
First Published Mar 6, 2024, 4:07 PM IST

ಬೆಂಗಳೂರು (ಮಾ.6): ಇನ್ಸ್ ಟಾಗ್ರಾಂ ನಲ್ಲಿ ಅಪರಿಚಿತರ ಜೊತೆ ಸ್ನೇಹ ಬೆಳೆಸೋಕು ಮುನ್ನ ಎಚ್ಚರವಾಗಿರಿ. ನಂಬಿ ಸ್ನೇಹ ಮಾಡಿದ್ರೆ ಬ್ಲಾಕ್ ಮೇಲ್ ಗೆ ಒಳಗಾಗೋದು ಗ್ಯಾರಂಟಿ. ಇನ್ಸ್ ಟಾಗ್ರಾಂ ಗೆಳೆಯನ ನಂಬಿ ಭೇಟಿಯಾಗಿದ್ದ ಮಹಿಳೆಯೊಬ್ಬಳೂ ಬ್ಲಾಕ್ ಮೇಲ್‌ ಗೆ ಒಳಗಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ ಟಾಗ್ರಾಂ ನಲ್ಲಿ ಪರಿಚಯವಾದ ಮಹಿಳೆಗೆ  ಬ್ಲಾಕ್ ಮೇಲ್ ಮಾಡಿದ ಭೂಪನೊಬ್ಬ ಬರೋಬ್ಬರಿ  8 ಲಕ್ಷ ಹಣ, 240 ಗ್ರಾಂ ಚಿನ್ನಾಭರಣ ಪೀಕಿದ್ದಾನೆ.

ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಬ್ಲಾಕ್ ಮೇಲ್ ಮಾಡಿ ಹಣ ಪೀಕಿದ್ದ ಆರೋಪಿ ಅನ್ಬು ಅಲಗನ್ ಎಂಬಾತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

200ಕ್ಕೂ ಹೆಚ್ಚು ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ, ಅಡ್ಡಪರಿಣಾಮಗಳಿಲ್ಲ ಎಂದ ಅಧ್ಯಯನ

ಘಟನೆ ಹಿನ್ನೆಲೆ: ಇನ್ಸ್ ಟಾಗ್ರಾಂ ಮೂಲಕ 39 ವರ್ಷದ ಮಹಿಳೆಯೊಬ್ಬರಿಗೆ  ಆರೋಪಿ ಅನ್ಬು ಅಲಗನ್ ಗಾಳ ಹಾಕಿದ್ದ. ಉತ್ತಮ ಸ್ನೇಹ ಬೆಳಸಿಕೊಂಡು ನಂತರ ಮಹಿಳೆಯನ್ನು ಭೇಟಿಯಾಗಿ ಜೊತೆಗೆ ಪೋಟೋ ತೆಗೆದುಕೊಂಡಿದ್ದ. ನಂತರ ಅದೇ ಪೊಟೋಗಳಿನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.

ಹಣ ಕೊಡದಿದ್ದರೆ ಪೋಟೋಗಳನ್ನ ಕುಟುಂಬಸ್ಥರಿಗೆ ತೋರಿಸೋದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರವಲ್ಲ ನಗ್ನ ವಿಡಿಯೋ ಕಾಲ್ ಹಾಗೂ ಪೋಟೋ ಕಳುಹಿಸುವಂತೆಯೂ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದಾನೆ.

Breaking: ರಾಮೇಶ್ವರಂ ಕೆಫೆ ಬ್ಲಾಸ್ಟ್‌, ಬಾಂಬರ್‌ನ ಮಾಹಿತಿಗೆ ಭರ್ಜರಿ ಬಹುಮಾನ ಘೋಷಿಸಿದ ಎನ್‌ಐಎ!

ಇದೇ ರೀತಿ ಪೋಟಗಳನ್ನ ಇಟ್ಕೊಂಡು ಹಣ ಹಾಗೂ ಚಿನ್ನಾಭರಣ ವಸೂಲಿ ಮಾಡಿದ್ದಾನೆ. ಪದೇ ಪದೇ ಹಣ ಕೇಳುತ್ತಿದ್ದ ಹಿನ್ನೆಲೆ ಆತನ ಹಿಂಸೆಗೆ ಬೇಸತ್ತು ಮಹಿಳೆ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ದೂರು ಆದರಿಸಿ ಅನ್ಬು ಅಳಗನ್ ಪೊಲೀಸರು ಬಂಧಿಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios