Asianet Suvarna News Asianet Suvarna News

ತುಮಕೂರಲ್ಲಿ ಪುಂಡರ ಹಾವಳಿ; ಹಿಡಿಯಲು ಹೋದ ಪೊಲೀಸರ ಮೇಲೂ ಮಚ್ಚು ಬೀಸಿದ ಕಿರಾತಕರು!

ಗೃಹ ಸಚಿವರ ತವರು ನೆಲದಲ್ಲೇ ಪುಂಡರ ಹಾವಳಿ ಮೀತಿ ಮೀರಿದ್ದು ಕಳ್ಳತನ, ದರೋಡೆ, ಸಾರ್ವಜನಿಕರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

Tumakuru crime cases increase  rowdies tried to attack the public rav
Author
First Published Nov 11, 2023, 12:16 PM IST

ತುಮಕೂರು (ನ.11): ಗೃಹ ಸಚಿವರ ತವರು ನೆಲದಲ್ಲೇ ಪುಂಡರ ಹಾವಳಿ ಮೀತಿ ಮೀರಿದ್ದು ಕಳ್ಳತನ, ದರೋಡೆ, ಸಾರ್ವಜನಿಕರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ಪುಂಡರ ಗುಂಪೊಂದು ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬ್ಲೇಡ್‌ನಿಂದ ಹಲ್ಲೆಗೆ ಮುಂದಾದ ಘಟನೆ ನಗರದ ಪಿ.ಎಚ್ ಕಾಲೋನಿಯ ಅಜಾದ್ ಪಾರ್ಕ್ ಬಳಿ ಗುರುವಾರ ರಾತ್ರಿ  8.30ರ ಸಮಯದಲ್ಲಿ ನಡೆದಿದೆ. 

ಆರೋಪಿ ಸಾಜಿದ್ ಹಾಗೂ ಸಹಚರರು ಮಹಮದ್ ರಫೀಕ್ ಎಂಬಾತನ ಮೇಲೆ ಮಚ್ಚು, ಬ್ಲೇಡಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿರುವ ಪುಂಡರು.

ಬೆಂಗಳೂರು: ವಿಲಾಸಿ ಜೀವನಕ್ಕೆ ಮನೆಗಳವು ಮಾಡುತ್ತಿದ್ದ ಕಳ್ಳ ಜೈಲು ಪಾಲು

ರಾತ್ರಿ ವೇಳೆ ಊಟ ಮುಗಿಸಿ ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ಮಹಮದ್ ರಫೀಕ್. ಈ ವೇಳೆ ಮಚ್ಚು, ಲಾಂಗ್ ಹಿಡಿದು ಏಕಾಏಕಿ ದಾಳಿ ಮಾಡಿರುವ ಆರೋಪಿಗಳು. ಕೂಡಲೇ ತಿಲಕ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು. ಮಾಹಿತಿ ನೀಡಿದ ಸ್ಥಳೀಯರ ಮೇಲೂ ಮಚ್ಚು ಬೀಸಿರುವ ಆರೋಪಿಗಳು. ಸ್ಥಳಕ್ಕೆ ಬಂದ ತಿಲಕ್ ಪಾರ್ಕ್ ಪೊಲೀಸರು. ಆರೋಪಿಗಳನ್ನು ಹಿಡಿಯಲು ಮುಂದಾದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಿರಾತಕರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

Follow Us:
Download App:
  • android
  • ios