Asianet Suvarna News Asianet Suvarna News

ಗೋಕಾಕ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಕೊಲೆಗೆ ಸ್ಕೆಚ್ ರೂಪಿಸಿದ್ದ ಕೊಲೆಗಾರರು ಮೊದಲೇ ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ರಸ್ತೆ ಬದಿಯಲ್ಲಿ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನು ಬೈಕ್ ಮೇಲೆ ಬರುತ್ತಿದ್ದಂತೆಯೇ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

Young Man Killed at Gokak in Belagavi grg
Author
First Published Nov 11, 2023, 8:36 AM IST

ಗೋಕಾಕ(ನ.11): ಕೆಲಸ ಮುಗಿಸಿಕೊಂಡು ವಾಪಸ್ ಬೈಕ್‌ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಸಾವಳಗಿ ಗ್ರಾಮದ ಶಿವಶಂಕರ ಶಿವಪುತ್ರ ಮಗದುಮ್ಮ (35) ಕೊಲೆಯಾದ ವ್ಯಕ್ತಿ. ತಾಲೂಕಿನ ಶಿವಾಪುರ ಹೊರವಲಯದ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪ ಗುರುವಾರ ರಾತ್ರಿ 8.30ಕ್ಕೆ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ಯುವಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಬರುವ ವೇಳೆ ಈ ಘಟನೆ ನಡೆದಿದೆ.

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ

ಕೊಲೆಗೆ ಸ್ಕೆಚ್ ರೂಪಿಸಿದ್ದ ಕೊಲೆಗಾರರು ಮೊದಲೇ ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ರಸ್ತೆ ಬದಿಯಲ್ಲಿ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನು ಬೈಕ್ ಮೇಲೆ ಬರುತ್ತಿದ್ದಂತೆಯೇ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗೋಪಾಲ್ ರಾಥೋಡ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Follow Us:
Download App:
  • android
  • ios