ನವದೆಹಲಿ(ಜು. 24) ಚಿನ್ನ, ಬೆಳ್ಳಿ, ವಜ್ರಗಳು ಕಳ್ಳತನವಾಗುವುದನ್ನು ಕೇಳಿದ್ದೇವೆ. ಆದರೆ ಈ ಕೊರೋನಾ ಕಾಲದಲ್ಲಿ ತುಳಸಿ ಗಿಡಗಳು ಕಳ್ಳತನವಾಗುತ್ತಿದೆ.

ಕೊರೋನಾ ಸಂದರ್ಭದಲ್ಲಿ ಔಷಧಿ ಗಿಡಗಳು ಕಳ್ಳತನವಾಗಿವೆ. ಹರಿಯಾಣ ಮತ್ತು ಚಂಡಿಘಡದಿಂದ ಇಂತ ಹಲವಾರು ಪ್ರಕರಣಗಳು ವರದಿಯಾಗಿವೆ. ಕೊರೋನಾ ಕಾರಣಕ್ಕೆ ಜನ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಔಷಧಿ ಗಿಡಗಳ ಮೊರೆ ಹೋಗಿದ್ದಾರೆ.  ತುಳಸಿ ಗಿಡಗಳನ್ನು ಟಾರ್ಗೆಟ್ ಮಾಡಿಕೊಂಡು ಹೊತ್ತೊಯ್ದಿದ್ದಾರೆ.

ಮನೆ ಮುಂದೆ ತುಳಸಿ ಗಿಡ ಯಾಕೆ ಇರಬೇಕು?

ಫರೀದಾಬಾದ್, ಚಂಡಿಘಡ, ಹಿಸಾರ್, ಗುರುಗ್ರಾಮ ಪ್ರದೇಶದಲ್ಲಿ ತುಳಸಿ ಗಿಡಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ.

ಮನೆಯ ಮುಂದೆ ತುಳಸಿ ಗಿಡ ಇಟ್ಟು ಪೂಜೆ ಮಾಡುವುದು ಸಂಪ್ರದಾಯ. ಆದರೆ ಮನೆ ಮುಂದೆ ಇದ್ದ ತುಳಸಿ ಗಿಡ ರಾತ್ರಿ ಬೆಳಗಾಗುವುದರಲ್ಲಿ ಮಾಯವಾಗುತ್ತಿದೆ. ತುಳಸಿ ಎಲೆಯ ದರ ಸಹ ಹೆಚ್ಚಾಗಿದ್ದು ನಮ್ಮ ಮನೆಯ ತುಳಸಿ ಗಿಡ ಪಕ್ಕದ ಮನೆಯವ ಹೊತ್ತೊಯ್ದಿದ್ದಾನೆ ಎಂಬ ದೂರುಗಳು ಸರ್ವೇ ಸಾಮಾನ್ಯವಾಗಿದೆ.