17ರ ಬಾಲಕನ ಹತ್ಯೆಗೈದ ಟ್ಯೂಷನ್ ಟೀಚರ್‌ನ ಪ್ರಿಯಕರ, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಟ್ಯೂಷನ್ ನೀಡುವ ಟೀಚರ್ ಹಾಗೂ ಆಕೆಗೊಂಡು ಬಾಯ್‌ಫ್ರೆಂಡ್. ಆದರೆ ಈ ಬಾಯ್‌ಫ್ರೆಂಡ್ ಕಣ್ಣು ಪಾಠ ಕಲಿಯುತ್ತಿರುವ 17ರ ಬಾಲಕನ ಮೇಲೆ ಬಿದ್ದಿದೆ. ಇಷ್ಟೇ ನೋಡಿ ಮರುದಿನವೇ 17ರ ಬಾಲಕ ಹತ್ಯೆಯಾಗಿದ್ದಾನೆ.

ಕಾನ್ಪುರ(ಅ.31) ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಹಾಗೂ ಮುಂದಿನ ಭವಿಷ್ಯ ರೂಪಿಸಲು ಹೆಚ್ಚುವರಿಯಾಗಿ ಟ್ಯೂಷನ್ ಪಡೆಯುವುದು ಸಾಮಾನ್ಯ. ಹೀಗೆ ಟೀಚರ್ ಬಳಿ ಟ್ಯೂಷನ್ ಪಡೆಯುತ್ತಿದ್ದ 17ರ ಬಾಲಕನನ್ನು ಇದೇ ಟ್ಯೂಷನ್ ಟೀಚರ್‌ನ ಬಾಯ್‌ಫ್ರೆಂಡ್ ಹತ್ಯೆ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯ ಆಧರಿಸಿ ಟೀಚರ್‌ನ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಆರಂಭಗೊಳ್ಳುತ್ತಿದೆ. ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.
ಎಸ್ಎಸ್‌ಎಲ್‌ಸಿ ಕಾರಣ 17ರ ಬಾಲಕ ಪ್ರತಿ ದಿನ ರಚಿತಾ ಅನ್ನೋ ಟೀಚರ್ ಬಳಿ ಟ್ಯೂಷನ್‌ಗೆ ತೆರಳುತ್ತಿದ್ದ. ಸಂಜೆ ಟ್ಯೂಷನ್ ನಡೆಸುತ್ತಿದ್ದ ರಚಿತಾಗೆ, ಒಬ್ಬ ಬಾಯ್‌ಫ್ರೆಂಡ್ ಇದ್ದ. ಇವರಿಬ್ಬರ ಲವ್ವಿ ಡವ್ವಿ ಸಾಗುತ್ತಿತ್ತು. ಇತ್ತ ಬಾಲಕ ಪ್ರತಿ ದಿನ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ. ಹೀಗೆ ಟ್ಯೂಷನ್‌ಗೆ ತೆರಳಿದ ಬಾಲಕ ಮರಳಿ ಮನೆಗೆ ಮರಳಲೇ ಇಲ್ಲ. ಹೀಗಾಗಿ ಪೋಷಕರು ಹುಡುಕಾಟ ಆರಂಭಿಸಿದ್ದರು. ಇತ್ತ ಪೊಲೀಸರಿಗೆ ದೂರು ನೀಡಿದ್ದರು.
ಕೇವಲ ಒಂದಡಿ ಜಾಗಕ್ಕಾಗಿ ಕೊಚ್ಚಿ ಕೊಂದ ಕಿರಾತಕರು: ಮನೆ ಯಜಮಾನನ ಹತ್ಯೆಗೆ ಹೆಂಡತಿ ಮಕ್ಕಳ ಕಣ್ಣೀರು
ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಈ ವೇಳೆ ಬಾಲಕನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯ ಮಾಹಿತಿ ಬಹಿರಂಗವಾಗಿದೆ. ಇತರ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ ವೀಕ್ಷಿಸಲಾಗಿದೆ. ಈವೇಳೆ ಬಾಲಕನನ್ನು ವ್ಯಕ್ತಿಯೊಬ್ಬ ಟ್ಯೂಷನ್ ರೂಂಗಿಂತ ಮೊದಲೇ ಸಿಗುವ ಸ್ಟೋರ್ ರೂಂಗೆ ತರೆದುಕೊಂಡು ಹೋದ ದೃಶ್ಯಗಳು ಲಭ್ಯವಾಗಿದೆ.
ಸ್ಟೋರ್ ರೂಂ ಹೋದ ಬಾಲಕ ಹಾಗೂ ವ್ಯಕ್ತಿ ಕೆಲ ಹೊತ್ತ ಯಾವುದೇ ಸುಳಿವು ಇರಲಿಲ್ಲ. ಬಳಿಕ ಸ್ಟೋರ್‌ನಿಂದ ವ್ಯಕ್ತಿ ಮಾತ್ರ ಹೊರಬಂದಿದ್ದಾನೆ. ಬೇರೊಂದು ಶರ್ಟ್ ಧರಿಸಿ ಸ್ಕೂಟರ್ ಮೂಲಕ ಹೊರಟ್ಟಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಕ್ತಿಯ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿ ಟ್ಯೂಷನ್ ಟೀಚರ್ ಪ್ರಿಯಕರ್ ಪ್ರಬಾತ್ ಶುಕ್ಲಾ ಅನ್ನೋದು ಬಹಿರಂಗವಾಗಿದೆ. ಪೊಲೀಸರು ಶುಕ್ಲಾನನ್ನು ಬಂಧಿಸಿದ್ದಾರೆ.
ಯಾದಗಿರಿ: ಬೆಳಗಿನ ಜಾವ ಯಲ್ಲಮ್ಮ ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹಣ ಕದ್ದು ಖದೀಮರು ಪರಾರಿ!
ಇತ್ತ ಟೀಚರ್ ರಚಿತಾ ಹಾಗೂ ಇದೇ ಪ್ರಕರಣ ಸಂಬಂಧ ಮತ್ತೋರ್ವನನ್ನು ಬಂಧಿಸಿದ್ದಾರೆ. ಕೊಲೆಯಾದ 17ರ ಬಾಲಕನ ತಂದೆ ಉದ್ಯಮಿಯಾಗಿದ್ದಾರೆ. ಕೊಲೆಗೂ ಮುನ್ನ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಘಟನೆಯೂ ನಡೆದಿದೆ. ಹಣಕ್ಕಾಗಿ ಬಾಲಕನ ಅಪಹರಿಸಿ ಕೊಲೆಗೈದಿರುವ ಅನುಮಾನ ವ್ಯಕ್ತವಾಗಿದೆ. ಆದರೆ ಪ್ರಕರಣ ದಿಕ್ಕು ತಪ್ಪಿಸಲು ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.