Bengaluru: ಪಾರ್ಟಿ ಮುಗಿಸಿ ಹೊರಟವನ ಬೆತ್ತಲೆಗೊಳಿಸಿ ಹಣ ಸುಲಿದ ಮಂಗಳಮುಖಿಯರು: ದೂರು

ಪಬ್‌ನಲ್ಲಿ ಪಾರ್ಟಿ ಮುಗಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿರುವ ಮಂಗಳಮುಖಿಯರು, ಆತನನ್ನು ಹೋಟೆಲ್‌ಗೆ ಕರೆದೊಯ್ದು ಬೆತ್ತಲೆಗೊಳಿಸಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌ ಮಾಡಿ 4.30 ಲಕ್ಷ ಸುಲಿಗೆ ಮಾಡಿರುವ ಘಟನೆ ನಡೆದಿದೆ. 

transgenders who stripped a person naked and extorted money at bengaluru gvd

ಬೆಂಗಳೂರು (ಜ.04): ಪಬ್‌ನಲ್ಲಿ ಪಾರ್ಟಿ ಮುಗಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿರುವ ಮಂಗಳಮುಖಿಯರು, ಆತನನ್ನು ಹೋಟೆಲ್‌ಗೆ ಕರೆದೊಯ್ದು ಬೆತ್ತಲೆಗೊಳಿಸಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌ ಮಾಡಿ 4.30 ಲಕ್ಷ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಮೂಲದ ಎಸ್‌.ಶ್ರೀನಿವಾಸ್‌ (49) ಹಣ ಕಳೆದುಕೊಂಡವರು. ಡಿ.31ರ ಮುಂಜಾನೆ 1ರಿಂದ ಬೆಳಗಿನ ಜಾವ 4ರ ನಡುವೆ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮಂಗಳಮುಖಿಯರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಿವಾಸ್‌ ಡಿ.30ರಂದು ರಾತ್ರಿ ಮೇಹಂದಿ ಪಬ್‌ಗೆ ತೆರಳಿ ಮದ್ಯ ಸೇವಿಸಿ ನಂತರ ಕೇರಳ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಪರಲ್‌ ಅಕಾಡೆಮಿ ಬಳಿ ಇಬ್ಬರು ಮಂಗಳಮುಖಿಯರು ಆಟೋದಲ್ಲಿ ಬಂದಿದ್ದಾರೆ. ಬಳಿಕ ಕೈ ಬಡಿದು ಸನ್ನೆ ಮಾಡಿ ಶ್ರೀನಿವಾಸ್‌ ಅವರನ್ನು ಆಟೋಗೆ ಹತ್ತಿಸಿಕೊಂಡು ರಸ್ತೆಯಲ್ಲಿ ಸುತ್ತಾಡಿಸಿ ಬಳಿಕ ಡಿ.31ರ ಮುಂಜಾನೆ 2.30ಕ್ಕೆ ರೆಸಿಡೆನ್ಸಿ ರಸ್ತೆಯ ಹೋಟೆಲ್‌ವೊಂದಕ್ಕೆ ಕರೆದೊಯ್ದು ಶ್ರೀನಿವಾಸ್‌ನನ್ನು ಬೆತ್ತಲೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಶ್ರೀನಿವಾಸ್‌ ಬಳಿಯಿದ್ದ ವಾಚು, ಉಂಗುರ, ಚೈನು, ಡೆಬಿಡ್‌ ಕಾರ್ಡ್‌ಗಳು, 40 ಸಾವಿರ ನಗದು ಕಿತ್ತುಕೊಂಡಿದ್ದಾರೆ.

Koppal: ವಿದ್ಯುತ್ ತಗುಲಿ ರೈತ ಸ್ಥಳದಲ್ಲಿಯೇ ಸಾವು

ಬೆತ್ತಲೆ ವಿಡಿಯೋ ಸೆರೆ: ಬಳಿಕ ಎರಡು ಡೆಬಿಟ್‌ ಕಾರ್ಡ್‌ಗಳ ಪಿನ್‌ ಸಂಖ್ಯೆ ಹೇಳುವಂತೆ ಶ್ರೀನಿವಾಸ್‌ನನ್ನು ಒತ್ತಾಯಿಸಿದ್ದಾರೆ. ಈ ವೇಳೆ ಶ್ರೀನಿವಾಸ್‌ ಪಿನ್‌ ಸಂಖ್ಯೆ ನೀಡಲು ವಿರೋಧ ವ್ಯಕ್ತಪಡಿಸಿದಾಗ, ಮೊಬೈಲ್‌ನಲ್ಲಿ ಶ್ರೀನಿವಾಸ್‌ನ ಬೆತ್ತಲೆ ವಿಡಿಯೋ ಸೆರೆ ಹಿಡಿದಿದ್ದಾರೆ. ಈ ನಡುವೆ ಮತ್ತಿಬ್ಬರು ಮಂಗಳಮುಖಿಯರನ್ನು ಹೋಟೆಲ್‌ಗೆ ಕರೆಸಿಕೊಂಡಿದ್ದಾರೆ. ಡೆಬಿಡ್‌ ಕಾರ್ಡ್‌ಗಳ ಪಿನ್‌ ಸಂಖ್ಯೆ ಹೇಳದಿದ್ದರೆ, ಈ ಬೆತ್ತಲೆ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಸಿದ್ದಾರೆ. ಇದರಿಂದ ಹೆದರಿಸಿದ ಶ್ರೀನಿವಾಸ್‌, ಎರಡು ಡೆಬಿಟ್‌ ಕಾರ್ಡ್‌ಗಳ ಪಿನ್‌ ಸಂಖ್ಯೆ ಹೇಳಿದ್ದಾರೆ.

ತುಮಕೂರಿನಲ್ಲಿ ಕಮಿಷನ್ ಆರೋಪಕ್ಕೆ ಮತ್ತೊಂದು ಬಲಿ: ಗುತ್ತಿಗೆದಾರ ನೇಣಿಗೆ ಶರಣು

4.30 ಲಕ್ಷ ಸುಲಿಗೆ: ಇಬ್ಬರು ಮಂಗಳಮುಖಿಯರು ಹೊರಗೆ ತೆರಳಿ ಎರಡು ಡೆಬಿಟ್‌ ಕಾರ್ಡ್‌ಗಳಿಂದ 2.90 ಲಕ್ಷವನ್ನು ಡ್ರಾ ಮಾಡಿದ್ದಾರೆ. 1 ಲಕ್ಷವನ್ನು ಗೂಗಲ್‌ ಪೇ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗೆ ಒಟ್ಟು 4.30 ಲಕ್ಷವನ್ನು ಸುಲಿಗೆ ಮಾಡಿದ್ದಾರೆ. ಬಳಿಕ ಹೋಟೆಲ್‌ಗೆ ಬಂದು ವಾಚು, ಉಂಗುರ, ಚೈನು, ಎಟಿಎಂ ಕಾರ್ಡ್‌ಗಳನ್ನು ಶ್ರೀನಿವಾಸ್‌ಗೆ ವಾಪಾಸ್‌ ಕೊಟ್ಟು ಪರಾರಿಯಾಗಿದ್ದಾರೆ. ಬಳಿಕ ಹೋಟೆಲ್‌ ಸಿಬ್ಬಂದಿಯ ಸಹಾಯ ಪಡೆದು ಶ್ರೀನಿವಾಸ್‌, ಅಶೋಕ ನಗರ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಂಗಳಮುಖಿಯರ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios