8 ವಾರ್ ರೂಂಗಳಿಂದ ಮಹತ್ವದ ಡೇಟಾ ವಶಕ್ಕೆ, ಸಂದೀಪ್ ಪಾಟೀಲ್ ಮಾಹಿತಿ

ಎಂಟು ವಾರ್ ರೂಮ್ ಗಳ ಮೇಲೆ ಸಿಸಿಬಿ ದಾಳಿ ಪ್ರಕರಣ/ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ/ ಸಾಕಷ್ಟು ಪ್ರಮಾಣದ ಡೇಟಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ/ ಯಾವ ಯಾವ ಆಸ್ಪತ್ರೆಗಳು ದಂಧೆಯಲ್ಲಿ ಭಾಗಿಯಾಗಿದ್ದವು/ ಎಂಬುದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ. 

Total 8 teams investigating Bed Blocking mafia says CCB joint commissioner Sandeep Patil mah

ಬೆಂಗಳೂರು(ಮೇ. 06) ಬೆಡ್ ಬುಕಿಂಗ್ ದಂಧೆ ಬಹಿರಂಗವಾದ ನಂತರ ಎಂಟು ವಾರ್ ರೂಮ್ ಗಳ ಮೇಲೆ ಸಿಸಿಬಿ ದಾಳಿ  ಮಾಡಿದ್ದು ಸಾಕಷ್ಟು ಪ್ರಮಾಣದ ಡೇಟಾವನ್ನು ವಶಕ್ಕೆ ಪಡೆಯಲಾಗಿದೆ ಎಂದು  ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಯಾವ ಯಾವ ಆಸ್ಪತ್ರೆಗಳು ದಂಧೆಯಲ್ಲಿ ಭಾಗಿಯಾಗಿದ್ದವು ಎಂಬುದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ.  ಸದ್ಯಕ್ಕೆ ನಾಲ್ಕು ಆಸ್ಪತ್ರೆಗಳು ನಗರದಲ್ಲಿ ದಂಧೆಯಲ್ಲಿ ಭಾಗಿಯಾಗಿರುವುದು ನಮ್ಮ ತನಿಖೆಯಲ್ಲಿ ಬೆಳಕಿಗೆ  ಬಂದಿದೆ. ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಯಾವ ಆಸ್ಪತ್ರೆಯಲ್ಲಿ ಬ್ಲಾಕ್ ಮಾಡಿದ್ರು ಎಂಬುದರ ಬಗ್ಗೆ ತನಿಖೆ  ನಡೆಯುತ್ತಿದ್ದು  ನಮ್ಮ ಸಿಸಿಬಿ ಅಧಿಕಾರಿಗಳು ಕೆಲ ಆಸ್ಪತ್ರೆಗಳಿಗೆ ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡರೊಂದಿಗೆ ಬೆಂಗಳೂರು ಬೆಡ್ ಬ್ಲಾಕಿಂಗ್ ದಂಧೆಕೋರ್ತಿ

ತನಿಖೆಗಾಗಿ ಎಂಟು ತಂಡಗಳನ್ನು ರಚನೆ ಮಾಡಲಾಗಿದೆ. ಒಂದು ತಂಡದಲ್ಲಿ ಒಬ್ಬ ಇನ್ಸ್ಪೆಕ್ಟರ್ ಅಧಿಕಾರಿ ತಂಡದ ನೇತೃತ್ವ ವಹಿಸಲಿದ್ದಾರೆ. ಎಂಟು ತಂಡಗಳು ಎಂಟು ವಾರ್ ಗಳ ಮೇಲೆ ದಾಖಲೆ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ವಾರ್ ರೂಂ ನಿಂದಲೇ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದ್ದು ನಾಗರಿಕರು ಪರಿತಪಿಸಬೇಕಾಗಿದೆ ಎಂಬ ಆತಂಕಾರಿ ಮಾಹಿತಿಯನ್ನು ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಅನಾವರಣ ಮಾಡಿದ್ದರು. 

Latest Videos
Follow Us:
Download App:
  • android
  • ios