Asianet Suvarna News Asianet Suvarna News

ಚೆನ್ನೈ-ಮಂಗಳೂರು ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಗಿಸುತ್ತಿದ್ದ ರಮಣಿ

ತಮಿಳುನಾಡು-ಮಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ/ ತಮಿಳುನಾಡಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಚೆನ್ನೈ ಎಕ್ಸ್‌ಪ್ರೆಸ್‌ ರೈಲು/ ತಮಿಳುನಾಡು ಮೂಲದ ಮಹಿಳೆ ರಮಣಿ ಎಂಬಾಕೆಯಿಂದ ಸ್ಫೋಟಕ ಸಾಗಾಟ/ ನೂರು ಜಿಲೆಟಿನ್ ಕಡ್ಡಿಗಳು ಮತ್ತು 350 ಡಿಟೋನೇಟರ್ ಸಾಗಿಸುತ್ತಿದ್ದ ರಮಣಿ

TN woman carrying explosives on Chennai-Mangalore train detained in Kerala mah
Author
Bengaluru, First Published Feb 26, 2021, 3:21 PM IST

ಬೆಂಗಳೂರು/ ಮಂಗಳೂರು(ಫೆ. 26)  ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸ್ಫೋಟಕ ಪತ್ತೆಯಾಗಿದೆ. ತಮಿಳುನಾಡಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟಕ ಪತ್ತೆಯಾಗಿದೆ. 

ತಮಿಳುನಾಡು ಮೂಲದ ಮಹಿಳೆ ರಮಣಿ ಎಂಬಾಕೆಯನ್ನು ಬಂಧಿಸಲಾಗಿದೆ. ನೂರು ಜಿಲೆಟಿನ್ ಕಡ್ಡಿಗಳು ಮತ್ತು 350 ಡಿಟೋನೇಟರ್ ಸಾಗಿಸುತ್ತಿದ್ದ ರಮಣಿ ಸಿಕ್ಕಿಬಿದ್ದಿದ್ದಾಳೆ.

ಕೇರಳದ ಕೋಝಿಕೋಡ್ ರೈಲು ನಿಲ್ದಾಣದಲ್ಲಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಕ್ಕಾಡ್ ವಿಭಾಗದ ರೈಲ್ವೇ ಭದ್ರತಾ ವಿಭಾಗ(ಆರ್ ಪಿಎಫ್) ನಿಂದ ಮಹಿಳೆಯನ್ನು ಬಂಧಿಸಲಾಗಿದೆ.

ಶಿವಮೊಗ್ಗ; ಕಾರ್ಮಿಕರ ದುರಂತ ಅಂತ್ಯಕ್ಕೆ ಕಾರಣ ಏನು? 

ಕೇರಳದ ತಲಷ್ಯೇರಿಗೆ ಸ್ಫೋಟಕ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೇರಳ ಇಂಟಲಿಜೆನ್ಸ್ ವಿಭಾಗ ತನಿಖೆ ಮುಂದುವರಿಸಿದೆ. ರೈಲು ಮಂಗಳೂರು ತಲುಪುವ ಮೊದಲೇ ಕೇರಳ ಪೊಲೀಸರಿಂದ ಮಹಿಳೆ ಬಂಧನವಾಗಿದೆ.

ರೈಲಿನ ಸೀಟಿನಡಿಯಲ್ಲಿ ಇಟ್ಟು ಸಾಗಿಸುತ್ತಿದ್ದರು. ಬ್ಯಾಗ್‍ನಲ್ಲಿ ಈ ಸ್ಫೋಟಕಗಳನ್ನು ಹಾಕಿ ಸೀಟ್ ಕೆಳಗಡೆ ಇಟ್ಟಿದ್ದರು, ಅನುಮಾನದ ಮೇರೆಗೆ ತಪಾಸಣೆ ನಡೆಸಿದಾಗ ಸ್ಫೋಟಕ ಇರುವುದು ಪತ್ತೆಯಾಗಿದೆ.

Follow Us:
Download App:
  • android
  • ios