Asianet Suvarna News Asianet Suvarna News
breaking news image

ಟಿಪ್ಪರ್-ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲೇ ದುರ್ಮರಣ, ಯುವತಿಗೆ ಗಂಭೀರ ಗಾಯ

ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರಿನ ಜೊಳದಾಳು ಬಳಿ ನಡೆದಿದೆ. ಚೇತನ್ ಕುಮಾರ್ ನಾಯ್ಕ್(26), ಮೃತ ದುರ್ದೈವಿ.

Tipper lorry-bike accident young man dies at spot girl seriously injured at chikkamagaluru rav
Author
First Published Jul 4, 2024, 11:45 PM IST

ಚಿಕ್ಕಮಗಳೂರು (ಜು.4): ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರಿನ ಜೊಳದಾಳು ಬಳಿ ನಡೆದಿದೆ.

ಚೇತನ್ ಕುಮಾರ್ ನಾಯ್ಕ್(26), ಮೃತ ದುರ್ದೈವಿ. ಇನ್ನೊರ್ವ ಯುವತಿ ಗಂಭೀರ ಗಾಯಗೊಂಡಿದ್ದು, ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೆರೀಕೆರೆ ತಾಲೂಕಿನ ಹೊಸಳ್ಳಿ ತಾಂಡ್ಯದ ನಿವಾಸಿಯಾಗಿರುವ ಮೃತ ಚೇತನ್, ಕೆಂಚಾಪುರ ತಾಂಡ್ಯದ ನಿವಾಸಿಯಾಗಿರುವ ಗಾಯಾಳು ಮೇಘ(24) ಬೈಕ್‌ ಮೇಲೆ ಹೋಗುತ್ತಿರುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ. ಈ ವೇಳೆ ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ದುರ್ಮರಣಕ್ಕೀಡಾದ ಯುವಕ. ಅದೃಷ್ಟವಶಾತ್ ಯುವತಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಯಚೂರು: ಸಾಲಬಾಧೆಗೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ!

ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Videos
Follow Us:
Download App:
  • android
  • ios