Bengaluru: ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಮೇಲೆ ಅಟ್ಯಾಕ್ ಮಾಡಲು ಯತ್ನ?: ಮೂವರ ಬಂಧನ

ಕಾಂಗ್ರೆಸ್​ ಮುಖಂಡ ಅಲ್ತಾಫ್​​ ಖಾನ್​ ಮೇಲೆ ಅಟ್ಯಾಕ್​​ ಯತ್ನ ನಡೆದಿದ್ದು, ಮೂವರು ಯುವಕರು ಮಾರಕಾಸ್ತ್ರ ಸಮೇತ ಮನೆ ಬಳಿ ಬಂದಿದ್ದರು. ಕೂಡಲೇ ಜೆ.ಜೆ.ನಗರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

three Youths arrested for planning to attack congress leader altaf khan in bengaluru gvd

ಬೆಂಗಳೂರು (ಡಿ.25): ಕಾಂಗ್ರೆಸ್​ ಮುಖಂಡ ಅಲ್ತಾಫ್​​ ಖಾನ್​ ಮೇಲೆ ಅಟ್ಯಾಕ್​​ ಯತ್ನ ನಡೆದಿದ್ದು, ಮೂವರು ಯುವಕರು ಮಾರಕಾಸ್ತ್ರ ಸಮೇತ ಮನೆ ಬಳಿ ಬಂದಿದ್ದರು. ಕೂಡಲೇ ಜೆ.ಜೆ.ನಗರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರು ಅಲ್ತಾಫ್​​​​​ ಮನೆ ಬಳಿ ಬಂದಿದ್ದರು. ಆರೋಪಿಗಳು ಆಟೋರಿಕ್ಷಾದಲ್ಲಿ ಬಂದು ಹೊಂಚಾಕಿ ಕುಳಿತ್ತಿದ್ದರು. 

ಆರೋಪಿಗಳು ಮನೆಯಿಂದ ಹೊರ ಬರಲಿಲ್ಲ ಬಚಾವ್ ಅಂತಾ ಮಾತನಾಡುತ್ತಿದ್ದರು, ಸ್ಥಳೀಯರು ಈ ಮಾತು ಕೇಳಿಸಿಕೊಂಡು ಆಟೋ ಬೆನ್ನತ್ತಿದ್ದಾರೆ. ಚಾಕು, ಬ್ಲೇಡ್ ಸಮೇತ ಅಲ್ತಾಫ್​ ಮನೆ ಬಳಿಗೆ ಬಂದಿದ್ದ ಮಾಹಿತಿ ದೊರಕಿದೆ. ಜನ ಬೆನ್ನತ್ತಿದ್ದನ್ನ ನೋಡಿ ಬಂದಿದ್ದವ್ರಲ್ಲೊಬ್ಬ ಆರೋಪಿ ಪರಾರಿಯಾಗಿದ್ದು​​​,  ಮೂವರು ಸಿಕ್ಕಿಬಿದ್ದಿದ್ದಾರೆ. ಸದ್ಯ ಜೆ.ಜೆ.ನಗರ ಪೊಲೀಸರು ಆರೋಪಿಗಳ ನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿಂತಿದ್ದ ಕಬ್ಬಿನ ಲಾರಿಗೆ ಟಿಟಿ ವಾಹನ ಡಿಕ್ಕಿ: ಇಬ್ಬರು ಸಾವು, ಐವರ ಸ್ಥಿತಿ ಗಂಭೀರ

ಕೇರಳ ಮೂಲದ ಡ್ರಗ್ಸ್‌ ಪೆಡ್ಲರ್‌ ಬಂಧನ: ಸಾರ್ವಜನಿಕ ಸ್ಥಳದಲ್ಲಿ ಹಾಡಹಗಲೇ ಮಾದಕವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಥಣಿಸಂದ್ರದ ಪಿ.ಎಚ್‌.ಶಬೀರ್‌ (26) ಬಂಧಿತ. ಆರೋಪಿಯಿಂದ 2 ಲಕ್ಷ ರು. ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬಾಣಸವಾಡಿಯ ಅಂಕಣರೆಡ್ಡಿ ಲೇಔಟ್‌ನ ಬಸ್‌ ನಿಲ್ದಾಣ ರಸ್ತೆಯಲ್ಲಿ ಡಿ.23ರಂದು ಮಧ್ಯಾಹ್ನ 1.45ರ ಸುಮಾರಿಗೆ ಅಪರಿಚಿತನೊಬ್ಬ ಸಾರ್ವಜನಿಕರಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರ್‌ಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಕೇರಳ ಮೂಲದ ಆರೋಪಿಯು ನಾಲ್ಕು ತಿಂಗಳ ಹಿಂದೆ ಟ್ಯಾಕ್ಸಿ ಚಾಲಕನ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ. ಕೇರಳ ಹಾಗೂ ಹೆಣ್ಣೂರು ಭಾಗದ ಕೆಲ ಡ್ರಗ್‌್ಸ ಪೆಡ್ಲರ್‌ಗಳ ಸ್ನೇಹ ಸಂಪಾದಿಸಿ, ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸುತ್ತಿದ್ದ. ಬಳಿಕ ಪರಿಚಿತರು ಹಾಗೂ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ. ಈ ಸಂಬಂಧ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Latest Videos
Follow Us:
Download App:
  • android
  • ios