ಬೆಂಗಳೂರು, (ಡಿ.20): ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ ಟೋಲ್ ಗೇಟ್ ಬಳಿ ನಡೆದಿದೆ.

ಹೊಸಕೋಟೆಯ ನಿವಾಸಿಗಳಾದ ರಾಜೇಶ್(21), ಲವನಿತ್ (22) ಹಾಗೂ ಹರೀಶ್ (21) ಮೃತಪಟ್ಟ ಯುವಕರು.

ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದ ಈ ಮೂವರು ರಾತ್ರಿ 12.30ರವರೆಗೆ ಪಾರ್ಟಿ ಮಾಡಿ, ಕಂಠಪೂರ್ತಿ ಕುಡಿದು ಹೊಂಡಾ ಅಕ್ಟೀವಾ ಸ್ಕೂಟರ್ ನಲ್ಲಿ ಜಾಲಿರೈಡ್ ಹೋಗಿದ್ದರು.

ತನ್ನ ಹೆತ್ತಮ್ಮನ ಸಾವಿನ ರಹಸ್ಯವನ್ನು ಬಿಚ್ಚಿಟ್ಟ 8 ವರ್ಷದ ಮಗ..!

ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ ಯುವಕರು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕಣ ದಾಖಲಿಸಿಕೊಂಡಿದ್ದಾರೆ.