ಕಾರವಾರ(ಜ.  21)  ಈಜಲು ತೆರಳಿದ್ದ ಮೂವರು ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ.  ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ದುರ್ಘಟನೆ ನಡೆದಿದೆ. ಸುಮಾ(21), ತಿಪ್ಪೇಶ(20) ಹಾಗೂ ರವಿ(35) ಮೃತಪಟ್ಟಿದ್ದಾರೆ.

ಮೃತರು ಬೆಂಗಳೂರಿನ ಹೆಬ್ಹಗೋಡಿಯ ತಿರುಪಾಳ್ಯ ಮೂಲದವರು. 16 ಜನ ದೇವರ ದರ್ಶನಕ್ಕೆ ಗೋಕರ್ಣಕ್ಕೆ ಆಗಮಿಸಿದ್ದರು. ದರ್ಶನದ ನಂತರ ಕಡಲ ತೀರದಲ್ಲಿ ಈಜಲು ತೆರಳಿದಾಗ ಅವಘಡ ಸಂಭವಿಸಿದೆ. ಮುಳುಗುತ್ತಿದ್ದ ಇಬ್ಬರನ್ನು ಪ್ರವಾಸಿ ಬೋಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಧಾರವಾಡ ಅಪಘಾತ ಘೋರ; ಬಾಲ್ಯ ಗೆಳತಿಯರೆಲ್ಲ ಮಸಣಕ್ಕೆ

ಸಮುದ್ರ ತೀರದಲ್ಲಿ ಈಜುವ ಮುನ್ನ ಎಚ್ಚರಿಕೆ ಬೋರ್ಡ್ ಗಳನ್ನು ಹಾಕಿರುತ್ತಾರೆ. ಪ್ರವಾಸಿಗರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಒಮ್ಮೊಮ್ಮೆ ಇಂಥ ಅವಘಡಗಳು ಸಂಭವಿಸಿ ಬಿಡುತ್ತದೆ.