ಒಂದೇ ಕುಟುಂಬದ ಮೂವರ ಆತ್ಮಹತ್ಯೆ| ಧಾರವಾಡದಲ್ಲೊಂದು ಹೃದಯ ವಿದ್ರಾವಕ ಘಟನೆ| ಖಾಸಗಿ ಕಂಪನಿ ಉದ್ಯೋಗಿಯ ಕುಟುಂಬ ಆತ್ಮಹತ್ಯೆ| ಕಂಪನಿಯಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಳ| ಉದ್ಯೋಗ ಕಳೆದುಕೊಳ್ಳುವ ಆತಂಕ| 

ಧಾರವಾಡ(ಜು.25): ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪತ್ನಿ, ಮಗಳಿಗೆ ವಿಷ ನೀಡಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕವಳಿಕಾಯಿ‌ ಚಾಳದಲ್ಲಿ ಘಟನೆ ನಡೆದಿದೆ. ಮೌನೇಶ ಪತ್ತಾರ (36), ಪತ್ನಿ ಅರ್ಪಿತಾ(28), ಮಗಳು ಸುಕೃತಾ (4) ಮೃತ ದುರ್ದೈವಿಗಳಾಗಿದ್ದಾರೆ. 

Add Asianetnews Kannada as a Preferred SourcegooglePreferred

"

ಮೃತ ಮೌನೇಶ ಪತ್ತಾರ ಅವರು ನಗರದ ಟಾಟಾ ಮಾರ್ಕೊಪೊಲೋ ಕಂಪನಿ ಉದ್ಯೋಗಿಯಾಗಿದ್ದಾರೆ. ತಮ್ಮ ಕಂಪನಿಯಲ್ಲಿ ಮಾಹಾಮರಿ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಹೀಗಾಗಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಮೌನೇಶ ಪತ್ತಾರ ಅವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮನಸ್ಸು ಮಾಡಿದ್ದರು ಎಂದು ಹೇಳಲಾಗುತ್ತಿದೆ. 

ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಸಾಫ್ಟ್‌ವೇರ್‌ ಎಂಜಿನಿಯರ್‌

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ವರಾದ ಮೃತ ಮೌನೇಶ ಪತ್ತಾರ ಅವರು ಉದ್ಯೋಗಕ್ಕಾಗಿ ಧಾರವಾಡದಲ್ಲಿ ಬಂದು‌ ನೆಲೆಸಿದ್ದರು. ಇದೀಗ ಡೆಡ್ಲಿ ಕೊರೋನಾ ಕಾಟಕ್ಕೆ ಇಡೀ ಕುಟುಂಬವೇ ನಾಶವಾಗಿದೆ. ಉಪನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.