Asianet Suvarna News Asianet Suvarna News

ತುಮಕೂರು: ಕಾರಿನಲ್ಲಿ 3 ಮೃತದೇಹ ಪತ್ತೆ ಪ್ರಕರಣ, ಚಿನ್ನಕ್ಕಾಗಿ ಆಸೆಪಟ್ಟು ಪ್ರಾಣ ಕಳೆದುಕೊಂಡರು..!

ಖಾಲಿ ಕೆರೆಯಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣ | ಆರು ಮಂದಿ ಪೊಲೀಸ್‌ ವಶಕ್ಕೆ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಎಂದು ನಂಬಿ ಬೆಳ್ತಂಗಡಿಯಿಂದ ತುಮಕೂರಿಗೆ ಬಂದಿದ್ದರು. 

Three Lost Their Lives for the Desire of Gold in Tumakuru grg
Author
First Published Mar 24, 2024, 8:01 AM IST

ತುಮಕೂರು(ಮಾ.24):  ಕುಚ್ಚಂಗಿ ಕೆರೆಯಲ್ಲಿ ಸಿಕ್ಕ ಕಾರಿನಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದ್ದು ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ದುಷ್ಕರ್ಮಿಗಳು ಮೂವರನ್ನು ಕರೆಸಿಕೊಂಡಿದ್ದಾರೆ. ಹೀಗಾಗಿ ಚಿನ್ನದ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಿಂದ ತುಮಕೂರಿಗೆ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮೃತ ಇಸಾಕ್ ಹಾಗೂ ಆತನ ಸ್ನೇಹಿತರಾದ ಸಾಹುಲ್‌ ಅಮೀದ್ ಹಾಗೂ ಇಮ್ಮಿಯಾಜ್ ಸಿದ್ದಿಲ್ ಬಂದಿದ್ದರು. ನಕಲಿ ಚಿನ್ನ ತೋರಿಸಿ ಹಣ ದೋಚಲು ಮೂವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. 

ಮೂವರನ್ನು ಹೊಡೆದು ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿ ಕಾರಿನ ಡಿಕ್ಕಿಗೆ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಒಬ್ಬನ ಮೃತದೇಹ ಇಟ್ಟು ಗುರುತು ಪತ್ತೆ ಹಚ್ಚಲು ಆಗದ ಹಾಗೆ ಕಾರಿನ ಸಮೇತ ಸುಟ್ಟು ಹಾಕಲಾಗಿದ್ದು, ಸದ್ಯ ಪ್ರಕರಣ ಸಂಬಂಧಪಟ್ಟಂತೆ ಸ್ವಾಮಿ ಎಂಬಾತ ಸೇರಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು: ಸಿಗ್ನಲ್‌ ಜಂಪ್‌ ಮಾಡಿ ಕಾನ್‌ಸ್ಟೇಬಲ್‌ಗೆ ಹೊಡೆದ ಬೈಕ್‌ ಸವಾರ ಜೈಲಿಗೆ

ಮೃತದೇಹಗಳ ಮರಣೋತ್ತರ ಪರೀಕ್ಷೆ: ಗುರುತು ಸಿಗದ ರೀತಿಯಲ್ಲಿ ಸಿಕ್ಕಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದ್ದು, ಮೃತಪಟ್ಟ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಇಸಾಕ್ (56), ಸಾಹುಲ್ (45), ಇಮ್ಮಿಯಾಜ್ (34) ಎನ್ನಲಾಗಿದೆ. ಘಟನೆ ಸಂಬಂಧ ತುಮಕೂರು ತಾಲೂಕಿನ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ ನಂಬರ್ ಆಧರಿಸಿ ಮೃತರ ಮಾಹಿತಿ ಪತ್ತೆ

ಕಳೆದ 11 ದಿನಗಳ ಹಿಂದೆ ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ತುಮಕೂರಿನಲ್ಲಿ ಒಂದು ಡೀಲ್ ಇದೆ ಅಂತ ಬೆಳ್ತಂಗಡಿಯಿಂದ ಇಸಾಕ್ ಮತ್ತವನ ಇಬ್ಬರು ಗೆಳೆಯರು ಬಂದಿದ್ದರು. ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಇಸಾಕ್ ಸಂಪರ್ಕದಲ್ಲಿದ್ದು, ಗುರು ವಾರರಾತ್ರಿ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು. ಘಟನಾ ಸ್ಥಳದ ಲ್ಲಿದ್ದ ಕಾರಿನ ನಂಬರ್‌ ಆಧರಿಸಿ ಕಾರಿನ ಮಾಲೀಕನನ್ನು ಪೊಲೀಸರು ಸಂಪರ್ಕ ಮಾಡಿದ್ದರು. ಈ ವೇಳೆ ಇಸಾಕ್‌ಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ವಾಹನ ಮಾಲಿಕ ರಫಿಕ್ ಒಪ್ಪಿಕೊಂಡ. ನಿನ್ನೆ ತುಮಕೂರು ಪೊಲೀಸರು ನೀಡಿದ ಮೇಲೆ ಕುಟುಂಬಸ್ಥರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

Follow Us:
Download App:
  • android
  • ios