Chamarajanagara: ಗಣಿ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಲ್ಲು ಕ್ವಾರಿಯಲ್ಲಿ ಬಂಡೆ ಬಿದ್ದು 3 ಬಲಿ!
ಮಡಹಳ್ಳಿ ಗುಡ್ಡ ಕುಸಿತ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ಗಣಿ ದುರಂತ ನಡೆದಿದೆ. ಇದೀಗ ಗಣಿ ಕುಳಿ ಹಿಡಿಯಲು ಹೋಗಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ವರದಿ: ಪುಟ್ಟರಾಜು. ಆರ್. ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಡಿ.26): ಮಡಹಳ್ಳಿ ಗುಡ್ಡ ಕುಸಿತ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ಗಣಿ ದುರಂತ ನಡೆದಿದೆ. ಇದೀಗ ಗಣಿ ಕುಳಿ ಹಿಡಿಯಲು ಹೋಗಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬಂಡೆ ಕುಸಿದು ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸೇರಿಸುವ ಮಧ್ಯೆ ಮತ್ತೊಬ್ಬ ಸತ್ತಿದ್ದಾನೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಳ್ಳಾರಿಯನ್ನೇ ಮಿರಿಸ್ತಿದೆ. ಏಕೆಂದರೆ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಗಣಿಗಾರಿಕೆ ನಿಯಮಗಳನ್ನು ಗಾಳಿಗೆ ತೂರಲಾಗ್ತಿದೆ. ಅಧಿಕಾರಿಗಳು, ಸರ್ಕಾರದ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಮಾರ್ಚ್ 4 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಮೂವರು ಸಾವನ್ನಪ್ಪಿದರು. ನಂತರ ಗಣಿ ಅಧಿಕಾರಿಯ ತಲೆ ದಂಡ ಮಾಡಿ ಗಣಿ ನಿಯಮಗಳನ್ನು ಕಠಿಣಗೊಳಿಸಲಾಗಿತ್ತು. ಆದ್ರೂ ಗಣಿ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಇದೀಗಾ ಅವೈಜ್ಞಾನಿಕ ರೀತಿಯಲ್ಲಿ ನಡೆದ ಗಣಿಗಾರಿಕೆಗೆ ಮತ್ತೆ ಮೂವರು ಕಾರ್ಮಿಕರು ಬಲಿಯಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಬಿಸಲವಾಡಿಯ ರೇಣುಕಾದೇವಿ ಎಂಬುವವರ ಕ್ವಾರಿಯಲ್ಲಿ ಕಲ್ಲು ಕುಳಿ ಮಾಡ್ತಿದ್ದ ಬಂಡೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ದುರಂತ ನಡೆದರೂ ಕೂಡ ಅಧಿಕಾರಿಗಳು, ಗಣಿ ಮಾಲೀಕರು ಎಚ್ಚೆತ್ತುಕೊಂಡಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸ್ತಾರೆ.
ಇನ್ನೂ ಈ ದುರಂತದಲ್ಲಿ ಕಲ್ಲು ಕುಳಿ ಮಾಡ್ತಿದ್ದ ಕುಮಾರ್ 28, ಶಿವರಾಜು 35, ಸಿದ್ದರಾಜು 27 ಮೃತಪಟ್ಟ ಕಾರ್ಮಿಕರು. ಎಲ್ಲರೂ ಕೂಡ ಚಾಮರಾಜನಗರದ ಕಾಗಲವಾಡಿ ಮೊಳೆ ಗ್ರಾಮದವರು . ಇನ್ನೂ ಸ್ಥಳಕ್ಕೆ ಅಧಿಕಾರಿಗಳು, ಪೊಲೀಸರು ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಪೊಲೀಸ್ ಇನ್ಸ್ ಪೆಕ್ಟರ್ ತರಾತುರಿಯಲ್ಲಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸ್ಥಳದಲ್ಲಿ ಇಬ್ಬರು ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ವೇಳೆ ಒಬ್ಬರು ಸಾವನ್ನಪ್ಪಿದರು.
ಹೆಂಗೆಳೆಯರು ಹೆಮ್ಮಾರಿಗಳಾದರ: ಗರ್ಲ್ಸ್ ಗ್ಯಾಂಗ್‌ನಿಂದ ಯುವತಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ
ಈ ದುರಂತಕ್ಕೆ ಸಂಬಂಧಿಸಿದಂತೆ ಅವೈಜ್ಞಾನಿಕ ಗಣಿಗಾರಿಕೆಯೇ ದುರಂತಕ್ಕೆ ಕಾರಣ, ಗಣಿ ಮಾಲೀಕರಿಗೆ ಈಗಾಗ್ಲೇ ಹಲವು ಬಾರಿ ನೋಟಿಸ್ ಕೊಡಲಾಗಿದೆ. ಈ ಕೂಡಲೇ ಗಣಿ ಬಂದ್ ಮಾಡ್ತೇವೆ. ಗಣಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸ್ತೇವೆ ಅಂತಾ ಗಣಿ ಮತ್ತು ಭೂ ವಿಜ್ಞಾನ ಉಪ ನಿರ್ದೇಶಕ ನಂಜುಂಡಸ್ವಾಮಿ ಹಾರಿಕೆ ಉತ್ತರ ಕೊಡ್ತಾರೆ.
ಕತ್ತು ಹಿಸುಕಿ ಮಹಿಳೆಯ ಬರ್ಬರ ಹತ್ಯೆ, ಕೆಲಸಕ್ಕೆಂದು ಹೋದವಳು ಶವವಾಗಿ ಪತ್ತೆ
ಮಡಹಳ್ಳಿ ದುರಂತದ ಬಳಿಕ ಅಧಿಕಾರಿಗಳು ಎಚ್ಚೆತ್ತು ಮುಂಜಾಗ್ರತೆ ವಹಿಸಿ ಗಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ರೆ ಇಂತಾ ಬಿಸಲವಾಡಿ ಗಣಿಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪುವ ಪರಿಸ್ಥಿತಿ ಉಂಟಾಗ್ತಿರಲಿಲ್ಲ ಅನ್ನೋ ಚರ್ಚೆ ನಡೀತಿದೆ.