Asianet Suvarna News Asianet Suvarna News

Ramanagara: ಚನ್ನಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ: ಸ್ಥಳದಲ್ಲೇ 3 ಜನರ ಸಾವು

ರಾಮನಗರ ಜಿಲ್ಲೆಯ ಚನ್ನಪಟ್ಟಣದ ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತವಾಗಿ ಸ್ಥಳದಲ್ಲೇ 3 ಜನರು ಸಾವನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. 

three killed in road accident at near channapatna gvd
Author
First Published Dec 24, 2022, 7:47 AM IST

ಚನ್ನಪಟ್ಟಣ (ಡಿ.24): ರಾಮನಗರ ಜಿಲ್ಲೆಯ ಚನ್ನಪಟ್ಟಣದ ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತವಾಗಿ ಸ್ಥಳದಲ್ಲೇ 3 ಜನರು ಸಾವನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ತಿರುಪತಿಯಿಂದ ಹಿಂದಿರುಗುವಾಗ ಚನ್ನಪಟ್ಟಣದ ಮುದಗೆರೆ ಬಳಿ ಕ್ಯಾಂಟರ್‌ಗೆ ಟಿಟಿ ಡಿಕ್ಕಿಯಾಗಿದ್ದು, ಪರಿಣಾಮ ಟಿಟಿ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಮೃತರು ಕೃಷ್ಣ ಹಾಗೂ ಮಹೇಶ್. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಇವರೆಲ್ಲ ಮಂಡ್ಯ ಜಿಲ್ಲೆಯ ಪಾಂಡವಪುರದ ಚಿಕ್ಕಾಡೆ ಗ್ರಾಮದವರು. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ಮೃತದೇಹಗಳು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಾಲಕ ನಿದ್ದೆಗಣ್ಣಿನಲ್ಲಿದ್ದ ಹಿನ್ನೆಲೆ ರಸ್ತೆ ಅಪಘಾತವಾಗಿದೆ.

ಅಯ್ಯಪ್ಪ ವ್ರತಧಾರಿಗಳಿದ್ದ ಮಿನಿಬಸ್‌ ಅಪಘಾತ: ತಾಲೂಕಿನ ಮುಂಡಾಜೆ ಗ್ರಾಮದ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಾಪು ಚಡವು ಉಳ್ಳಾಲ್ತಿ ಕಟ್ಟೆಬಳಿ ಅಯ್ಯಪ್ಪ ವ್ರತಧಾರಿಗಳಿದ್ದ ಮಿನಿಬಸ್ಸೊಂದು ಅಪಘಾತಕ್ಕೊಳಗಾಗಿ ಹಲವರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಂಡದ 21 ಮಂದಿ ಶಬರಿಮಲೆಗೆ ಯಾತ್ರೆಗೆ ಹೊರಟ್ಟಿದ್ದರು. ಕಾಪು ಚಡಾವು ಬಳಿ ವಾಹನದ ಬ್ರೇಕ್‌ ಕೈ ಕೊಟ್ಟಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. 

ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರ್‌ಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಗಾಯಾಳುಗಳ ಪೈಕಿ ವೀರೇಶ್‌ ಆಚಾರ್ಯ (38) ಮತ್ತು ಕೆ.ಎಸ್‌. ರಾಹುಲ್‌ (6), ಗೌತಮ್‌ (6), ಸುನೀಲ್‌ ನಾಯ್ಕ್‌ (33), ಜಲಂದರ್‌ (25) ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಂಡುರಂಗ (25), ಶಶಿ ಕುಮಾರ್‌ (25) ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ, ತನ್ಮಯಿ(9), ರಾಜು ನಾಯ್ಕ್‌ (42), ಮಂಜುನಾಥ್‌ (29), ಎಂ.ಕೆ. ಸೋಮಶೇಖರ್‌ (15), ವಿಕ್ರಮ್‌ (30), ಕಾರ್ತಿಕ್‌ (27), ಜೆ.ಎಂ. ರಾಘು ನಾಯ್ಕ್‌ (30), ಲೋಕಪ್ಪ(40), ಅಜ್ಜಪ್ಪ(34), ಕರಿಯ ಗೌಡ(39), ಎನ್‌.ಕೆ. ಬಸವರಾಜ್‌(40) ಅವರುಗಳನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ಅಪಘಾತ ನಡೆದ ಜಾಗ ಇಳಿಜಾರಾಗಿದ್ದು, ವಾಹನದ ಬ್ರೇಕ್‌ ಕೈ ಕೊಟ್ಟಿದೆ ಎಂದು ತಿಳಿದೊಡನೆಯೇ ಚಾಲಕ ವಾಹನವನ್ನು ಕೂಡಲೇ ರಸ್ತೆ ಪಕ್ಕದ ಪೊದೆಯ ಕಡೆಗೆ ಚಲಿಸುವಂತೆ ಮಾಡಿ ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಒಂದು ಕಡೆ ಆಳವಾದ ಕಂದಕ , ಇನ್ನೊಂದೆಡೆ ಎಚ್‌ಟಿ ವಿದ್ಯುತ್‌ ಲೈನ್‌ ಇದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios