Gadag: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು!

ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾ ವ್ಯಾಪ್ತಿಯ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರ ಬಾಲಕಿಯರು ಮೃತಪಟ್ಟಿದ್ದಾರೆ. ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಮೃತ ಬಾಲಕಿಯರು ಅಂತಾ ಪತ್ತೆಹಚ್ಚಲಾಗಿದೆ.

three girls dies after falling into farm pits in gadag district gvd

ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ.17): ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾ ವ್ಯಾಪ್ತಿಯ ಕೃಷಿ ಹೊಂಡದಲ್ಲಿ (Farm Iits) ಕಾಲು ಜಾರಿ ಬಿದ್ದು ಮೂವರ ಬಾಲಕಿಯರು (Girls) ಮೃತಪಟ್ಟಿದ್ದಾರೆ (Death). ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಮೃತ ಬಾಲಕಿಯರು ಅಂತಾ ಪತ್ತೆ ಹಚ್ಚಲಾಗಿದೆ. ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ ಮೂವರು ಬಾಲಕಿಯರು, ಆಟವಾಡುತ್ತ ಕೃಷಿ ಹೊಂಡಕ್ಕೆ ತೆರಳಿದರು. ಮಧ್ಯಾಹ್ನದ ಬಿರು ಬಿಸಿಲಿನ ಹಿನ್ನೆಲೆ ಬಾಯಾರಿಕೆಯಾಗಿ ನೀರು ಕುಡಿದು ಕೈ ಕಾಲು ಮುಖ ತೊಳೆದುಕೊಳ್ಳಲು ಮುಂದಾಗಿದ್ರಂತೆ. 

ಆದ್ರೆ ಆಯತಪ್ಪಿ ಹೊಂಡದಲ್ಲಿ ಬಿದ್ದ ಮೃತಪಟ್ಟ ಬಗ್ಗೆ ಸಂಶಯ (Doubt) ವ್ಯಕ್ತವಾಗಿದೆ. ಚಿಕ್ಕಪ್ಪನ ಮದುವೆಗೆ (Marriage) ಬಂದಿದ್ದ ಬಾಲಕಿಯರು: ಅತ್ತಿಕಟ್ಟಿ ತಾಂಡಾದ ಲಕ್ಷ್ಮಣ ಲಮಾಣಿ ಗೋವಾದಲ್ಲಿ ಕೆಲಸ ಮಾಡ್ತಿದ್ರು. ತಮ್ಮ ಗೋವಿಂದನ ಮದುವೆ ಹಿನ್ನೆಲೆ ಕುಟುಂಬ ಸಮೇತ ತಾಂಡಾಕ್ಕೆ ಬಂದಿದ್ದರು. ಮದುವೆ ಮನೆಯಲ್ಲಿ 15 ರಿಂದ 20 ಮಕ್ಕಳ ತಂಡವೇ ಸೇರಿತ್ತು. ಮಕ್ಕಳು ಗುಂಪು ಕಟ್ಕೊಂಡು ಆಟವಾಡುತ್ತಿದ್ದರು. ಕುರಿಗಳ ಜೊತೆಗೆ ಹೋಲಕ್ಕೆ ಹೋಗ್ಬೇಕು ಅಂತಾ ನಿರ್ಧರಿಸಿದ್ದ ಮಕ್ಕಳು ಗುಂಪು ಜೊತೆಗೆ ಚಿಕ್ಕಪ್ಪ ಗೋವಿಂದನೂ ಬಂದಿದ್ದ‌. 

Gadag: ಮುಸ್ಲಿಂ ಬಾಬಾನಿಂದ ಲಿಂಗಪೂಜೆ.. ಹಿಂದೂ ದೇವರ ಆರಾಧನೆ!

ಗೋವಿಂದ ಹಾಗೂ ಕೆಲ ಮಕ್ಕಳು ಜಮೀನಲ್ಲಿ ಮೇವು ಕತ್ತರಿಸಲು ಮುಂದಾಗಿದ್ದರು. ಆದ್ರೆ ಮೂವರು ಮಕ್ಕಳು ಬಾಯಾರಿಗೆ ಅಂತ ಹೇಳಿಕೊಂಡು ನೀರು ಕುಡಿಯಲು ಬಂದಿದ್ರು. ಇದೇ ವೇಳೆ ಕಾಲು ಕಾರಿ ಬಿದ್ದ ಅವಘಡ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಊರಿನ ಜನ ಮಕ್ಕಳ ಶವ ಮೇಲೆತ್ತಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡುವ ಹೊತ್ತಲ್ಲೇ ಇಬ್ಬರ ಶವ ಆಚೆ ತೆಗೆಯಲಾಗಿತ್ತು‌. ಸ್ಥಳೀಯರ ಸಹಾಯದಿಂದ ಸಂಜೆ ಸುನಿತಾ ಅನ್ನೋ ಬಾಲಕಿಯ ಶವವನ್ನೂ ಆಚೆ ತೆಗೆಯಲಾಗಿದೆ.

ಮದುವೆ ಮನೆಯಲ್ಲಿ ಸೂತಕದ ಛಾಯೆ: ಲಮಾಣಿ ಕುಟುಂಬದಲ್ಲಿ ಇದೇ ತಿಂಗಳ 22ಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆಯ ತಯಾರಿಯೂ ಜೋರಾಗಿತ್ತು. ಆದರೆ ಸದ್ಯ ಮಕ್ಕಳ ದಾರುಣ ಸಾವು ಕುಟುಂಬಕ್ಕೆ ಬರಸಿಡಿಲ ಆಘಾತ ನೀಡಿದೆ.

ನಿಶ್ಚಿತಾರ್ಥದ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕೃಷಿ ಹೊಂಡಕ್ಕೆ ತಡೆಗೋಡಿ ನಿರ್ಮಿಸಿದ್ದರೆ ಮಕ್ಕಳು ಉಳಿಯುತ್ತಿದ್ದರು: ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ಜೊತೆ ಮಾತನಾಡಿದ ಗ್ರಾಮದ ಮುಖಂಡರೊಬ್ಬರು, ಕೃಷಿ ಹೊಂಡ ಬಸವರಾಜ್ ಲಮಾಣಿ ಅನ್ನೋರಿಗೆ ಸೇರಿದೆ. ಅಗತ್ಯಕ್ಕಿಂತ ಹೆಚ್ಚಿಗೆ ಆಳದಲ್ಲಿ ಕೃಷಿ ಹೊಂಡ ತೋಡಲಾಗಿದೆ. ಆದ್ರೆ, ಸುರಕ್ಷತೆ ಕ್ರಮಗಳನ್ನ ಕೈಗೊಂಡಿಲ್ಲ ಹೀಗಾಗಿ ಘಟನೆ ನಡೆದಿದೆ. ಕೃಷಿಹೊಂಡದ ಸುತ್ತ ತಡೆಗೋಡೆ ಅಥವಾ ಸುರಕ್ಷತೆ ಗೇಟ್ ಅಳವಡಿಸಿದ್ರೆ ಸಮಸ್ಯೆ ಆಗ್ತಿರಲಿಲ್ಲ ಅಂತಾ ಹೇಳಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಆಶಪ್ಪ ಪೂಜಾರಿ, ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಸವದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios