ಬೆಂಗಳೂರು: ಬ್ಯಾಂಕ್‌ ಖಾತೆ ತೆರೆದು ಚೀನಾದ ವಂಚಕರಿಗೆ ಸಹಾಯ, 3 ಭಾರತೀಯರ ಬಂಧನ

ಇತ್ತೀಚೆಗೆ ಆನ್ ಲೈನ್ ಕಂಪನಿಯಲ್ಲಿ ಹೂಡಿಕೆಯಲ್ಲಿ ಸುಲಭವಾಗಿ ಹಣ ಸಂಪಾದಿಸುವುದಾಗಿ ಆಮಿಷ ವೊಡ್ಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಟೋಪಿ ಹಾಕಿ ಹಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಇಎನ್ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದ ತಂಡ, ಹಣ ವರ್ಗಾವಣೆ ಜಾಲವನ್ನು ಶೋಧಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 
 

Three Arrested on Help Chinese Fraudsters by opening Bank Account Case in Bengaluru

ಬೆಂಗಳೂರು(ಜ.12):  ಸೈಬರ್ ವಂಚನೆ ಕೃತ್ಯಗಳಲ್ಲಿ ಜನರಿಂದ ಹಣ ದೋಚಲು ಚೀನಾ ಪ್ರಜೆಗಳಿಗೆ ನೆರವಾಗಿ ಕ್ರಿಪ್ಲೋ ಕರೆನ್ಸಿ ಮೂಲಕ ಕಮಿಷನ್ ಪಡೆಯುತ್ತಿದ್ದ ಮೂವರನ್ನು ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. 

ಬೆಳ್ಳಂದೂರಿನ ಸಂಜಯ್ ದೇವ್, ಆಸಾಂ ರಾಜ್ಯದ ಬಿಕಾಸ್ ದಾಸ್ ಹಾಗೂ ಲೋಕಿ ಬಂಧಿತರಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು ಹಾಗೂ 5 ಡೆಬಿಟ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಆನ್ ಲೈನ್ ಕಂಪನಿಯಲ್ಲಿ ಹೂಡಿಕೆಯಲ್ಲಿ ಸುಲಭವಾಗಿ ಹಣ ಸಂಪಾದಿಸುವುದಾಗಿ ಆಮಿಷ ವೊಡ್ಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಟೋಪಿ ಹಾಕಿ ಹಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಇಎನ್ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದ ತಂಡ, ಹಣ ವರ್ಗಾವಣೆ ಜಾಲವನ್ನು ಶೋಧಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

ಅಕೌಂಟ್​ಗೆ ಅಚಾನಕ್​ ದುಡ್ಡು ಬಂದ್ರೆ ಕೂಡ್ಲೇ ಬ್ಯಾಲೆನ್ಸ್​ ಚೆಕ್​ ಮಾಡ್ಲೇಬೇಡಿ! ಇದು ಹೊಸ ಸ್ಕ್ಯಾಮ್- ಡಿಟೇಲ್ಸ್​ ಇಲ್ಲಿದೆ...

ಸಂಜಯ್ ದೇವ್ ಲೋಕಿ ಜಾಯ್ ವಂಚನೆ ಹೇಗೆ?: 

ಕೆಲ ದಿನಗಳ ಹಿಂದೆ ದೂರುದಾರರಿಗೆ ದಿವ್ಯ ಅಶೋಕ್ (77422 18528) @Divya_ash 19900 ಎಂಬುವವರು ಟೆಲಿಗ್ರಾಂ ಮೂಲಕ ಪರಿಚಯವಾಗಿದ್ದರು. ಆಗ ತಾವು ನೀಡುವ ಟಾಸ್ಕ್ ಗಳನ್ನು ಪೂರ್ಣಗೊಳಿಸಿದರೆ ಪ್ರತಿ ದಿನ 500 ರಿಂದ 4000 ರು. ವರೆಗೆ ಹಣವನ್ನು ಗಳಿಸಬಹುದು ಎಂದಿದ್ದಳು. ಈ ಮಾತಿಗೆ ಸಮ್ಮತಿಸಿದ ದೂರುದಾರರು, ಸೈಬರ್ ವಂಚಕಿ ಸೂಚಿಸಿದ ಖಾತೆಗೆ ಹಂತ ಹಂತವಾಗಿ 2, 69,209 ರು. ವರ್ಗಾಯಿಸಿದ್ದರು. 

ತರುವಾಯ ಈ ಹೂಡಿಕೆ ಹಣವನ್ನು ವಿತ್ ಡ್ರಾ ಮಾಡಲು ಹೋದರೆ 4.85 ಲಕ್ಷ ರು. ಪಾವತಿಸಿದರೆ 12.32 ಲಕ್ಷ ನೀಡುವುದಾಗಿ ಆರೋಪಿಗಳು ತಿಳಿಸಿದ್ದರು. ಆದರೆ ಈ ಆಫರ್‌ಬಗ್ಗೆ ಶಂಕೆಗೊಂಡ ಅವರು, ತಾವು ವಂಚನೆಗೊಳಗಾಗಿರು ವುದಾಗಿ ಅರಿವಾಗಿ ದೂರು ನೀಡಿದರು. ಬ್ಯಾಂಕ್ ಖಾತೆಗಳು ನೀಡಿದ ಸುಳಿವು: ಈ ವಂಚನೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಐದಾರು ತಿಂಗಳ ಹಿಂದೆ ಮಾರತ್ತಹಳ್ಳಿಯಲ್ಲಿ ಷೇರು ಹೂಡಿಕೆ ಕುರಿತು ಮಾಹಿತಿ ನೀಡುವ ಕಂಪನಿ ಹೆಸರಿನಲ್ಲಿ 'ದೇಬಂಶಿ ಎಂಟರ್‌ಪ್ರೈಸಸ್' ಎಂಬನಕಲಿ ಕಂಪನಿಯನ್ನು ಅಸಾಂ ರಾಜ್ಯದ ಆರೋಪಿಗಳು ತೆರೆದಿದ್ದರು. 

ನಂತರ ಆ ಕಂಪೆನಿ ಹೆಸರಿನಲ್ಲಿ 10ಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ತೆರೆದು ಬಳಿಕ ಆ ಖಾತೆಗಳನ್ನು ಟೆಲಿಗ್ರಾಂ ಮೂಲಕ ಚೀನಾ ದೇಶದ ಸೈಬರ್‌ ವಂಚಕರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳಿಗೆ ಚೀನಾ ದೇಶದ ಸೈಬರ್‌ ಮೋಸಗಾರರು ಬಿಟ್ ಕಾಯಿನ್ ಮೂಲಕ ಕಮಿಷನ್ ರವಾನಿಸಿದ್ದರು. ಚೀನಾ ಮೂಲದ ವ್ಯಕ್ತಿಗಳಿಂದ 10% ವರೆಗೆ ಯುಎಸ್‌ಡಿಟಿ ರೂಪದಲ್ಲಿ ಅಕ್ರಮವಾಗಿ ಹಣವನ್ನು ಪಡೆದು ಲಾಭಾಂಶವನ್ನು ಹಂಚಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಮ್ಮ ಆಧಾರ್​ ಕಾರ್ಡ್​​ ದುರುಪಯೋಗ ಆಗ್ತಿರ್ಬೋದು ಎಚ್ಚರ! ಪರಿಶೀಲಿಸೋದು ಹೇಗೆ? ಇಲ್ಲಿದೆ ಡಿಟೇಲ್ಸ್​

ಬ್ಯಾಂಕ್ ಖಾತೆಗಾಗಿ ಕಂಪನಿ ಆರಂಭ 

ಸೈಬರ್‌ ವಂಚನೆ ಕೃತ್ಯದಲ್ಲಿ ಸಂಪಾದಿಸಿದ ಹಣವನ್ನು ದೋಚುವ ಸಲುವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಉದ್ದೇಶದಿಂದಲೇ ಆರೋಪಿಗಳು ನಕಲಿ ಕಂಪನಿ ಆರಂಭಿಸಿದ್ದರು. ಕಂಪನಿ ಪ್ರಾರಂಭಿಸಿದರೆ ಅವುಗಳ ಆರ್ಥಿಕ ವಹಿವಾಟಿಗೆ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಸುಲಭವಾಗುತ್ತದೆ. ಹೀಗಾಗಿಯೇ ಷೇರು ಪೇಟೆ ಮಾಹಿತಿ ನೀಡುವ ನಕಲಿ ಕಂಪನಿಯನ್ನು ಆರೋಪಿಗಳು ಸ್ಥಾಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ ಕಮಿಷನ್ 

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮೋಸದ ಜಾಲಕ್ಕೆ ಆಂಧ್ರಪ್ರದೇಶದ ಸಂಜಯ್ ದೇವ್, ಅಸ್ಸಾಂ ರಾಜ್ಯದ ಬಿಕಾಸ್ ದಾಸ್ ಹಾಗೂ ಲೋಕಿಜಾಯ್‌ಗೆ ಗಾಳ ಹಾಕಿ ಚೀನಾ ವಂಚಕರು ಬೀಳಿಸಿಕೊಂಡಿದ್ದರು. ಬಳಿಕ ಈ ಮೂವರಿಗೆ ಹಣ ದಾಸೆ ತೋರಿಸಿ ನಕಲಿ ಕಂಪನಿ ಯನ್ನು ಚೀನಾ ಪ್ರಜೆಗಳು ಸ್ಥಾಪಿಸಿದ್ದರು. ಇನ್ನು ಬ್ಯಾಂಕ್ ಖಾತೆ ಗಳಲ್ಲಿ ಚೀನಾ ಪ್ರಜೆಗಳಿಗೆ ಹಣ ವರ್ಗಾವಣೆ ಹಾಗೂ ಅದಕ್ಕೆ ಪ್ರತಿಯಾಗಿ ಕಮಿ ಷನ್ ಪಡೆದಿರುವುದಕ್ಕೆ ತನಿಖೆಯಲ್ಲಿ ಪುರಾವೆ ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios