ಸಾಗರ: ವೆಂಟಿಲೇಟರ್ ಮೂಲಕ ಮನೆಯೊಳಗೆ ಇಳಿದು ಕಳ್ಳತನ, ಮೂವರು ಖದೀಮರ ಬಂಧನ
ಸಾಗರದ ಶಿವಮೊಗ್ಗ ರಸ್ತೆಯ ತೋಟಗಾರಿಕೆ ಇಲಾಖೆ ಹತ್ತಿರದ ಮಹ್ಮದ್ ರಫೀಕ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ವೆಂಟಿಲೇಟರ್ ಮೂಲಕ ಇಳಿದು ಚಿನ್ನಾಭರಣ, ಬೆಲೆಬಾಳುವ ವಾಚ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿ ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿಗಳು.
ಶಿವಮೊಗ್ಗ(ಜು.02): ವೆಂಟಿಲೇಟರ್ ಮೂಲಕ ಮನೆಯೊಳಗೆ ಇಳಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಸಾಗರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮದೀನ ಕಾಲನಿ ಮಹ್ಮದ್ ಇಸ್ಟಾಲ್ ಯಾನೆ ಇಪ್ಪಲ್, ಭಟ್ಕಳದ ಶಿರೂರು ಯಾಸಿನ್ ಸಾಬ್, ಭಟ್ಕಳ ಹೆಗ್ಗಲ್ ರಸ್ತೆ ನಿವಾಸಿ ಮಹ್ಮದ್ ಮುಸಾದಿಕ್ ಬಂಧಿತ ಆರೋಪಿಗಳಾಗಿದ್ದಾರೆ.
ಸಾಗರದ ಶಿವಮೊಗ್ಗ ರಸ್ತೆಯ ತೋಟಗಾರಿಕೆ ಇಲಾಖೆ ಹತ್ತಿರದ ಮಹ್ಮದ್ ರಫೀಕ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ವೆಂಟಿಲೇಟರ್ ಮೂಲಕ ಇಳಿದು ಚಿನ್ನಾಭರಣ, ಬೆಲೆಬಾಳುವ ವಾಚ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿ ಕಾರಿನೊಂದಿಗೆ ಪರಾರಿಯಾಗಿದ್ದರು.
ಬೆಂಗಳೂರು: ಗೂಗಲ್‌ನಲ್ಲಿ ಗೋಡೌನ್ ಗುರುತಿಸಿ ಕದಿಯುತ್ತಿದ್ದ ಖದೀಮರ ಬಂಧನ
ಬಂಧಿತರಿಂದ ಕದ್ದ ಚಿನ್ನಾಭರಣ, ಕಾರು ಸಹಿತ ಒಟ್ಟು 7,45,729 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಿಪಿಐ ಜೆ.ಸೀತಾರಾಮ್, ಕೆ.ವಿ.ಕೃಷ್ಣಪ್ಪ, ಪಿಎಸ್‌ಐ ಶ್ರೀಪತಿ, ತುಕಾರಾಮ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ.