ಆರೋಪಿಗಳು ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಬ್ರಾಂಡೆಡ್‌ ಕಂಪನಿಗಳ ಗೋಡನ್‌ಗಳನ್ನು ಗೂಗಲ್‌ ಮುಖಾಂತರ ಹುಡುಕಿ ಕಳವು ಮಾಡಲು ಗುರುತಿಸುತ್ತಿದ್ದರು. 2 ದಿನ ಮುಂಚೆಯೇ ಗೋಡನ್‌ ಬಳಿ ತೆರಳಿ ಯಾವುದೇ ಕುರುಹು ಸಿಗದಂತೆ ಕಳ್ಳತನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ಗೋಡೌನ್‌ನ ಶೀಟ್‌ಗಳನ್ನು ಕಿತ್ತು ಒಳ ನುಗ್ಗಿ ಕಳ್ಳತನ ಮಾಡಿ ಉತ್ತರ ಪ್ರದೇಶಕ್ಕೆ ಪರಾರಿ ಆಗುತ್ತಿದ್ದರು. 

ಪೀಣ್ಯ ದಾಸರಹಳ್ಳಿ(ಜೂ.28): ಪ್ರಸಿದ್ಧ ಅಂತಾರಾಷ್ಟ್ರೀಯ ಕಂಪನಿಗಳ ವೇರ್‌ಹೌಸ್‌ ಹಾಗೂ ಗೋಡನ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾ ರಾಜ್ಯ ಕಳ್ಳರನ್ನು ಬಂಧಿಸಿ .75 ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಚೌನ್‌ಪುರ ಜಿಲ್ಲೆಯ ಪರ್ಮಾಲ್‌ಪಟ್ಟಿ ಗ್ರಾಮದ ನಿವಾಸಿ ಪ್ರವೀಣ್‌ಪಟೇಲ್‌(29), ಸುಂಗುಲ್‌ಪುರ ಗ್ರಾಮದ ನಿವಾಸಿ ಸಂದೀಪ್‌ (28), ಆಕಾಶ್‌ಪಟೇಲ್‌(22), ಪಸಿಯಾಯಿಖುರ್ದು ಗ್ರಾಮದ ನಿವಾಸಿ ನಿರ್ಭಯ್‌ಕುಮಾರ್‌(30), ವಾರಣಾಸಿ ಜಿಲ್ಲೆಯ ಸರಾಯ್‌ತಕ್ಕಿ ಗ್ರಾಮದ ನಿವಾಸಿ ರಾಜನ್‌ರಾಯ… (26) ಬಂಧಿತರು. ಉತ್ತರ ಪ್ರದೇಶದ ಚೌನ್‌ಪುರ ಜಿಲ್ಲೆಯ ಪರ್ಮಾಲ್‌ಪಟ್ಟಿಗ್ರಾಮದ ನಿರ್ಜನ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ .75 ಲಕ್ಷ ಮೌಲ್ಯದ ಕ್ಯಾಮೆರಾ, ಲ್ಯಾಪ್‌ಟಾಪ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Mangaluru crimes: ವಿವಿಧೆಡೆ ಚಿನ್ನದ ಸರ ಸುಲಿಗೆ, ದ್ವಿಚಕ್ರ ವಾಹನ ಕಳ್ಳತನ: ಇಬ್ಬರ ಸೆರೆ

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಪೊಲೀಸರ ಕಾರಾರ‍ಯಚರಣೆ ಬಗ್ಗೆ ವಿವರ ನೀಡಿದರು.

ಫೆ.19ರಂದು ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ಪ್ಯಾನಸೋನಿಕ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಗೋಡನ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ವೇರ್‌ಹೌಸ್‌ ಶೀಟ್‌ಗಳನ್ನು ಕಿತ್ತು ಒಳಗೆ .69.2 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌, ಹೆಡ್‌ಫೋನ್‌, ಎಲ್‌ಇಡಿ ಟಿವಿ, ಎಲ್‌ಸಿಡಿ ಪ್ಯಾನೆಲ್‌ಗಳನ್ನು ಕದ್ದು ಪರಾರಿಯಾಗಿದ್ದರು. ಫೆ.20ರಂದು ಬೆಳಗ್ಗೆ ಕಂಪನಿಯ ರಾಮಕೃಷ್ಣಯ್ಯ ದೂರು ನೀಡಿದ್ದರು.

ಮಾ.26ರಂದು ರಾತ್ರಿ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದ ಸೋನಿ ಇಂಡಿಯಾ ಪ್ರೈವೇಟ್‌ ಲಿ. ಗೋಡಾನ್‌ನಲ್ಲಿ .1.9 ಕೋಟಿ ಮೌಲ್ಯದ ಕ್ಯಾಮೆರಾ, ಕ್ಯಾಮರಾ ಲೈನ್ಸ್‌, ಬ್ಲೂಟೂತ್‌, ವಾಯ್ಸ್‌ ರೆಕಾರ್ಡರ್‌, ನೋಕಿಯಾ ಫೋನ್‌, ಹೆಡ್‌ಸೆಟ್‌, ಮೊಮೋರಿ ಕಾರ್ಡ್‌ ಕಳ್ಳತನವಾಗಿತ್ತು. ಮಾ.27ರಂದು ಮ್ಯಾನೇಜರ್‌ ಹರ್ಷ ಮಾದನಾಯನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು.

ಗೂಗಲ್‌ನಲ್ಲಿ ಸರ್ಚ್‌

ಆರೋಪಿಗಳು ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಬ್ರಾಂಡೆಡ್‌ ಕಂಪನಿಗಳ ಗೋಡನ್‌ಗಳನ್ನು ಗೂಗಲ್‌ ಮುಖಾಂತರ ಹುಡುಕಿ ಕಳವು ಮಾಡಲು ಗುರುತಿಸುತ್ತಿದ್ದರು. 2 ದಿನ ಮುಂಚೆಯೇ ಗೋಡನ್‌ ಬಳಿ ತೆರಳಿ ಯಾವುದೇ ಕುರುಹು ಸಿಗದಂತೆ ಕಳ್ಳತನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ಗೋಡೌನ್‌ನ ಶೀಟ್‌ಗಳನ್ನು ಕಿತ್ತು ಒಳ ನುಗ್ಗಿ ಕಳ್ಳತನ ಮಾಡಿ ಉತ್ತರ ಪ್ರದೇಶಕ್ಕೆ ಪರಾರಿ ಆಗುತ್ತಿದ್ದರು. ಬಂಧಿತ ಆರೋಪಿಗಳ ಮೇಲೆ ಮಾದನಾಯಕನಹಳ್ಳಿ 2 ಪ್ರಕರಣ ಹಾಗೂ ಮುಂಬೈನಲ್ಲಿ ಒಂದು ಕಳ್ಳತನ ಪ್ರಕರಣ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಏರ್‌ಇಂಡಿಯಾ ವಿಮಾನದ ಸೀಟ್‌ನಲ್ಲೇ ಮಲ-ಮೂತ್ರ ಮಾಡಿದ ವ್ಯಕ್ತಿಯ ಬಂಧನ!

ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ಎಸ್‌.ಮಂಜುನಾಥ್‌ ನೇತೃತ್ವದ ಸಿಬ್ಬಂದಿ ಸಿಸಿ ಕ್ಯಾಮೆರಾ ಪರಿಶೀಲನೆ, ಟವರ್‌ ಡಂಪ್‌ ಹಾಗೂ ಮೊಬೈಲ್‌ ಸಿಮ್‌ ಸಿಡಿಆರ್‌ ಪಡೆದುಕೊಂಡು ಆರೋಪಿಗಳ ಚಲನವಲನವನ್ನು ಸಂಗ್ರಹಿಸಿದ್ದರು. ಸತತ ಮೂರು ತಿಂಗಳ ಪ್ರಯತ್ನದಿಂದ 5 ಮಂದಿ ಆಂತಾರಾಜ್ಯ ಕಳ್ಳರನ್ನು ಪತ್ತೆ ಮಾಡಿ ಬಂಧಿಸಿದ್ದರು. ಉಳಿದ ಇಬ್ಬರನ್ನು ಅದಷ್ಟುಬೇಗ ಬಂಧಿಸುತ್ತೇವೆ ಎಂದು ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ ತಿಳಿಸಿದರು.

ಡಿವೈಎಸ್‌ಪಿ ಗೌತಮ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದ ಎಸ್‌ಐ ಪ್ರಶಾಂತ್‌, ಸಿಬ್ಬಂದಿ ಚಂದ್ರ, ನರೇಶ್‌ಕುಮಾರ್‌, ಅರುಣ್‌ಗೌಡ, ರವಿಕುಮಾರ್‌, ಫಿರೋಜ್‌, ಪವೀರ್‍ಸ್‌ ಪಾಷ, ಹಾಜಿಮಲಂಗ ಇನಾಮ್‌ದಾರ್‌, ಮೋಹನ್‌, ನಾಗೇಶ್‌, ಗಂಗಾಧರ್‌, ಉಮೇಶ್‌ ಅವರನ್ನು ವರಿಷ್ಠಾಧಿಕಾರಿ ಶ್ಲಾಘಿಸಿ ವಿಶೇಷ ತಂಡಕ್ಕೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್‌ ಇದ್ದರು.