Drugs Racket in Bengaluru: ಯುವ ಜೋಡಿ ಸೇರಿ ಮೂವರ ಬಂಧನ: 7.76 ಕೋಟಿ ರು. ಡ್ರಗ್ಸ್‌ ವಶ

*  ಆರೋಪಿಗಳು ಅಂಧರ್‌
*  7 ಕೋಟಿ ಮೌಲ್ಯದ ಹಾಶೀಶ್‌ ಆಯಿಲ್‌ ಜಪ್ತಿ
*  ಹುಳಿಮಾವು ಪೊಲೀಸರ ಕಾರ್ಯಾಚರಣೆ
 

Three Arrested For Drugs Case in Bengaluru grg

ಬೆಂಗಳೂರು(ಮಾ.08): ನಗರದಲ್ಲಿ ಮಾದಕವಸ್ತು ಹಾಶೀಶ್‌ ಆಯಿಲ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ಯುವ ಜೋಡಿ ಸೇರಿದಂತೆ ಮೂವರು ಡ್ರಗ್ಸ್‌ ಪೆಡ್ಲರ್‌ಗಳನ್ನು(Drugs Peddlers) ಹುಳಿಮಾವು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಮಡಿವಾಳದ ವಿಕ್ರಂ ಅಲಿಯಾಸ್‌ ವಿಕ್ಕಿ(23), ಕೇರಳದ(Kerala) ಕೊಟ್ಟಾಯಂನ ಸಿಗಿಲ್‌ ವರ್ಗಿಸ್‌ ಮಂಪರಾಂಪಿಲ್‌(23) ಹಾಗೂ ಕೊಯಮತ್ತೂರಿನ ವಿಷ್ಣುಪ್ರಿಯ(22) ಬಂಧಿತರು(Arrest). ಆರೋಪಿಗಳಿಂದ(Accused) ಸುಮಾರು 7.76 ಕೋಟಿ ರು. ಮೌಲ್ಯದ 12 ಕೆ.ಜಿ. 940 ಗ್ರಾಂ ತೂಕದ ಹಾಶೀಶ್‌ ಆಯಿಲ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾ.5ರಂದು ಬೆಳಗ್ಗೆ 8.30ರ ಸುಮಾರಿಗೆ ಬಿಟಿಎಂ ಲೇಔಟ್‌ 4ನೇ ಹಂತದ ಅರಕೆರೆ ಗ್ರಾಮದ ಕಾರ್‌ ಪಾರ್ಕ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದ ಮೇಲೆ ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್‌ ಎಲ್‌.ಟಿ.ಚಂದ್ರಕಾಂತ್‌ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು ವಿಕ್ರಂನನ್ನು ಬಂಧಿಸಿ, 80 ಗ್ರಾಂ ತೂಕದ ಹಾಶೀಶ್‌ ಆಯಿಲ್‌ ಜಪ್ತಿ ಮಾಡಿದೆ. ಬಳಿಕ ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಮನೆಯಲ್ಲಿ ಬಚ್ಚಿಟ್ಟಿದ್ದ 2 ಕೆ.ಜಿ. 360 ಗ್ರಾಂ ತೂಕದ ಹಾಶೀಶ್‌ ಆಯಿಲ್‌ ಜಪ್ತಿ ಮಾಡಲಾಗಿದೆ. ಅಂತೆಯೇ ಈತ ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!

ಪ್ರೇಮಿಗಳ ದಂಧೆ:

ಆರೋಪಿಗಳಾದ ಕೇರಳ ಮೂಲದ ಸಿಗಿಲ್‌ ಮತ್ತು ತಮಿಳುನಾಡು(Tamil Nadu) ಮೂಲದ ವಿಷ್ಣುಪ್ರಿಯ ಪ್ರೇಮಿಗಳಾಗಿದ್ದು, ಕಳೆದ ಮೂರು ತಿಂಗಳಿಂದ ನಗರದ ಕೊತ್ತನೂರಿನ ಕುವೆಂಪು ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಡ್ರಗ್ಸ್‌ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಂನಿಂದ ಹಾಶೀಶ್‌ ಆಯಿಲ್‌ ತರಿಸಿಕೊಂಡು ಪ್ಲಾಸ್ಟಿಕ್‌ನ ಸಣ್ಣ ಕಂಟೈನರ್‌ಗಳಲ್ಲಿ ತುಂಬಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ವಿಚಾರಣೆ ವೇಳೆ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ 10.5 ಕೆ.ಜಿ. ಗ್ರಾಂ ತೂಕದ ಹಾಶೀಶ್‌ ಆಯಿಲ್‌ ಜಪ್ತಿ ಮಾಡಲಾಗಿದೆ.

ಆರೋಪಿ ವಿಕ್ರಂ ಇವರ ಬಳಿಯೇ ಹಾಶೀಶ್‌ ಆಯಿಲ್‌ ಖರೀದಿಸಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಹಲವರು ಗಿರಾಕಿಗಳಿಗೆ ಈ ಆರೋಪಿಗಳು ಹಾಶೀಶ್‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ

ಬೆಂಗಳೂರು: ಬೆಂಗಳೂರಿನ (Bengaluru) ಕೆ.ಜೆ‌.ಹಳ್ಳಿ ಪೊಲೀಸರ ಕಾರ್ಯಾಚರಣೆ ವೇಳೆ ಆನ್‌ಲೈನ್‌ನಲ್ಲಿ (Online) ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಗಳು ಬಲೆಗೆ ಬಿದ್ದ ಘಟನೆ ಮಾ.04 ರಂದು ನಡೆದಿತ್ತು.

Punjab Drugs Issue: ನಶೆಯಲ್ಲಿ ತೇಲುತ್ತಿದೆ ಪಂಜಾಬ್, ಪ್ರತಿ 7ನೇ ವ್ಯಕ್ತಿ ಡ್ರಗ್ಸ್ ವ್ಯಸನಿ!

ಆನ್‌ಲೈನ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ನೆಲ್ಸನ್‌(29) ಬಂಧಿತ ಆರೋಪಿ.  ಬಂಧಿತನಿಂದ 25 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇಂಟರ್‌ನೆಟ್‌, ವಾಟ್ಸಾಪ್‌ ಕಾಲ್‌ನಲ್ಲಿ ಗ್ರಾಹಕರ ಜತೆ ಡೀಲ್‌ ಮಾಡಿ, ಆನ್‌ಲೈನ್ ಮೂಲಕವೇ ಗ್ರಾಹಕರಿಂದ ಹಣ ಸ್ವೀಕರಿಸುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಡ್ರಗ್ಸ್ ತಂದಿಟ್ಟು ಲೊಕೇಷನ್, ಫೋಟೋ ಕಳುಹಿಸುತ್ತಿದ್ದ. ವಿಡಿಯೋ ತನ್ನ ಗ್ರಾಹಕರಿಗೆ ಶೇರ್‌ ಮಾಡಿ ಡ್ರಗ್ಸ್‌ ಪೂರೈಸುತ್ತಿದ್ದ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. 

ನೈಜೀರಿಯ ಪ್ರಜೆಗಳು ಸೆರೆ

ಇನ್ನು ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರ(CCB Police) ಕಾರ್ಯಾಚರಣೆ ವೇಳೆ ವಿದ್ಯಾರ್ಥಿಗಳು(Students), ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿ ಬಿದ್ದಿದ್ದರು. 
ನೈಜೀರಿಯ ಪ್ರಜೆಗಳಾದ ಕ್ರಿಸ್ಟಿಯನ್ ಇಯ್ಕ್ ಚುಕ್ವು ಹಾಗೂ ಜಾನ್ ಓಬಿನಾ ಬಂಧಿತ ಆರೋಪಿಗಳು. ಬಂಧಿತರಿಂದ 50 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ(MDMA) ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.  
 

Latest Videos
Follow Us:
Download App:
  • android
  • ios