ಆರೋಪಿಗಳು ಆ.4 ಮತ್ತು ಆ.21 ರಂದು ರಾತ್ರಿ ಎಚ್‌ಎಎಲ್‌ನ ಕೋನೇನ ಅಗ್ರಹಾರದಲ್ಲಿ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 3 ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು(ಸೆ.03):  ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಎಲ್ ವಿಭೂತಿಪುರ ನಿವಾಸಿಗಳಾದ ಭರತ್, ವಿಶ್ವೇಶ್ ಹಾಗೂ ಜೋಯಲ್ ಅಭಿಷೇಕ್ ಬಂಧಿತರು. ಆರೋಪಿಗಳಿಂದ ನಾಲ್ಕು ದ್ವಿಚಕ್ರ ವಾಹನ ಹಾಗೂತಲ್ವಾರ್ ಜಪ್ತಿ ಮಾಡಲಾಗಿದೆ. 

ಆರೋಪಿಗಳು ಆ.4 ಮತ್ತು ಆ.21 ರಂದು ರಾತ್ರಿ ಎಚ್‌ಎಎಲ್‌ನ ಕೋನೇನ ಅಗ್ರಹಾರದಲ್ಲಿ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 3 ಆರೋಪಿಯನ್ನು ಬಂಧಿಸಲಾಗಿದೆ 

ವಡಾಪಾವ್‌ ತಿನ್ನಲು ಸ್ಕೂಟಿ ನಿಲ್ಲಿಸಿದ್ದ ವೃದ್ಧ ದಂಪತಿಗೆ ಶಾಕ್: 5 ಲಕ್ಷ ಮೌಲ್ಯದ ಜ್ಯುವೆಲರಿ ಎಗರಿಸಿದ ಖದೀಮರು

ತಲ್ವಾರ್ ಹಿಡಿದು ಓಡಾಟ: 

ಆರೋಪಿಗಳು ರಾತ್ರಿ ವೇಳೆ ಬೈಕ್‌ನಲ್ಲಿ ಓಡಾಡುತ್ತಿದ್ದರು. ಫುಡ್ ಡೆಲಿವರಿ ಬಾಯ್ ಗಳನ್ನು ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು. ಕೈಯಲ್ಲಿ ತಲ್ವಾರ್ ಹಿಡಿದು ಓಡಾಡುತ್ತಿದ್ದ ಆರೋಪಿಗಳು ಸಿಸಿಟೀವಿ ಸುಳಿವು ಆಧರಿಸಿ ಬಂಧನ ಪ್ರಕರಣದ ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾ ಚರಣೆ ನಡೆಸಿ ಮೂವರು ಆರೋಪಿ ಗಳನ್ನು ಬಂಧಿಸಲಾಗಿದೆ. 

ಆರೋಪಿಗಳು ಕೆ.ಆರ್.ಪುರ, ಎಚ್‌ಎಎಲ್, ಜೀವನಭೀಮಾನಗರ, ಬೆಳ್ಳಂದೂ ರು ನಗರದ ವಿವಿಧೆಡೆ ದರೋಡೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ಬೆದರಿಸಿ, ಹಣ, ಮೊಬೈಲ್, ತಿನಿಸುಗಳು, ಊಟ, ಕೈಗೆ ಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.