Asianet Suvarna News Asianet Suvarna News

ಕ್ರಿಸ್‌ಮಸ್- ನ್ಯೂಇಯರ್‌ಗೆ ಡ್ರಗ್ಸ್‌ ಮಾರಾಟ: ನೈಜೀರಿಯನ್ ಪ್ರಜೆ ಸೇರಿ ಮೂವರ ಬಂಧನ

ಡ್ರಗ್ಸ್ ಮಾರಾಟಕ್ಕೆ ಯತ್ನ| ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ| ಮೂವರ ಹೆಡೆಮುರಿ ಕಟ್ಟಿದ ಪೊಲೀಸರು| ಬಂಧಿತರಿಂದ 100 ಎಂಡಿಎಂಎ ಟ್ಯಾಬ್ಲೆಟ್, ಒಂದು ಬೈಕ್, ಒಂದು ಕಾರು ವಶ| 
 

Three Accused Arrested for Selling Drugs in Bengaluru grg
Author
Bengaluru, First Published Dec 24, 2020, 10:19 AM IST

ಬೆಂಗಳೂರು(ಡಿ.24): ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷದ ಆಚರಣೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ನೈಜೀರಿಯನ್ ಡ್ರಗ್ ಪೆಡ್ಲರ್ ಸೇರಿ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಉಡೇಉಜಾ(33), ಪ್ರಸೂನ್,(27), ಆನಂದ್ ಚಂದ್ರನ್(27) ಬಂಧಿತ ಅರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಉಡೇಉಜಾ ನೈಜೀರಿಯನ್, ಪ್ರಸೂನ್ ಕೇರಳದ ಕಾಸರಗೋಡು ಹಾಗೂ ಆನಂದ್ ‍ಚಂದ್ರನ್ ಕೇರಳದ ಕಣ್ಣೂರಿನವನು ಎಂದು ತಿಳಿದು ಬಂದಿದೆ. 

ಲಾಕ್‌ಡೌನ್‌ನಿಂದ ಉದ್ಯೋಗಕ್ಕೆ ಕತ್ತರಿ: ನಿರುದ್ಯೋಗದಿಂದ ಡ್ರಗ್ಸ್‌ ದಂಧೆಕೋರರ ಹೆಚ್ಚಳ!

ಡ್ರಗ್ಸ್ ಪೆಡ್ಲರ್‌ಗಳ ಬಂಧನವಾಗುತ್ತಿದ್ದರೂ ನಗರದಲ್ಲಿ ಡ್ರಗ್ಸ್‌ ಮಾರಾಟ ನಿಲ್ಲುತ್ತಿಲ್ಲ. ಹೀಗಾಗಿ ನಿರಂತರವಾಗಿ ಡ್ರಗ್ಸ್ ಜಾಲದ ಹಿಂದೆ ಸಿಸಿಬಿ ಪೊಲೀಸರು ಹಿಂದೆ ಬಿದ್ದಿದ್ದಾರೆ.  ಸಾಫ್ಟ್‌ವೇರ್ ಟೆಕ್ಕಿಗಳು ಹಾಗೂ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಖದೀಮರು ತಂಡ ಪ್ಲಾನ್ ಮಾಡಿಕೊಂಡಿತ್ತು. ಖಚಿತ ಮಾಹಿತಿ ಮೇರೆಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆ 5 ಲಕ್ಷ ರು. ಬೆಲೆಬಾಳುವ 100 ಎಂಡಿಎಂಎ ಟ್ಯಾಬ್ಲೆಟ್, ಒಂದು ಬೈಕ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ. 
 

Follow Us:
Download App:
  • android
  • ios