ಶಿರಸಿ ನಗರದ ಹುಬ್ಬಳ್ಳಿ ರಸ್ತೆ ನಂ. 5 ಶಾಲೆಯ ಬಳಿ ಸಾಗಾಟ ಮಾಡುತ್ತಿದ್ದ ವಾಹನ ತಡೆದು 5 ಜಾನುವಾರು ವಶಕ್ಕೆ ಪಡೆದ ಪೊಲೀಸರು| ಯಾವುದೇ ಪರವಾನಗಿ ಮತ್ತು ಜಾನುವಾರು ಕ್ರಯಪತ್ರವಿಲ್ಲದೆ ಅಕ್ರಮವಾಗಿ ವಾಹನದಲ್ಲಿ ಜಾನುವಾರು ಸಾಗಾಟ| ಈ ಸಂಬಂಧ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು| 

ಶಿರಸಿ(ಮಾ.10): ಇಕ್ಕಟ್ಟಾದ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರನ್ನು ಮಾರುಕಟ್ಟೆ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಗಳನ್ನು ಹಾನಗಲ್‌ ತಾಲೂಕು ಹೆರೂರಿನ ದಯಾನಂದ ಮುಗಳಕಟ್ಟಿ, ರವಿ ಮುತ್ತಳ್ಳಿ, ಬಸವರಾಜ ಹಿರೇಮಠ ಎಂದು ಗುರುತಿಸಲಾಗಿದೆ. ನಗರದ ಹುಬ್ಬಳ್ಳಿ ರಸ್ತೆ ನಂ. 5 ಶಾಲೆಯ ಬಳಿ ಸಾಗಾಟ ಮಾಡುತ್ತಿದ್ದ ವಾಹನ ತಡೆದು 5 ಜಾನುವಾರು ವಶಕ್ಕೆ ಪಡೆದಿದ್ದಾರೆ. 

ಯಲ್ಲಾಪುರ: ಅಕ್ರಮ ಜಾನು​ವಾರು ಸಾಗಾ​ಟ, ಮೂವರ ಬಂಧ​ನ

ಜಾನುವಾರುಗಳಿಗೆ ಆಹಾರ ನೀರು ನೀಡದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು. ಯಾವುದೇ ಪರವಾನಗಿ ಮತ್ತು ಜಾನುವಾರು ಕ್ರಯಪತ್ರವಿಲ್ಲದೆ ಅಕ್ರಮವಾಗಿ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಉನ್ನತ ಅಧಿಕಾರಿಗಳ ಮಾರ್ಗದರ್ಶನದಂತೆ ಡಿಎಸ್ಪಿ ರವಿ ಡಿ. ನಾಯ್ಕ, ಸಿಪಿಐ ಬಿ.ಯು. ಪ್ರದೀಪ್‌ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.