ಕಳ್ಳರಿಂದಲೂ ಬುಲ್ಡೋಜರ್ ಬಳಕೆ, ವೈರಲ್ ವಿಡಿಯೋ ಎಟಿಎಂ ಒಡೆದು ಹಣ ದೋಚಲು ಕಳ್ಳರ ಮಾಸ್ಟರ್ ಪ್ಲಾನ್ ಬುಲ್ಡೋಜರ್ ನೆರವಿನಿಂದ 27 ಲಕ್ಷ ರೂ ಎಗರಿಸಿದ ಕಳ್ಳರು
ಸಾಂಗ್ಲಿ(ಏ.25): ದೇಶದಲ್ಲೀಗ ಬುಲ್ಡೋಜರ್ ಸದ್ದು ಹೆಚ್ಚಾಗುತ್ತಿದೆ. ಅನಧಿಕೃತ ಕಟ್ಟಡ ತೆರವು, ಗೂಂಡಾ, ಪುಂಡರ ಮನೆ ಕೆಡವಲು ಸರ್ಕಾರ ಬುಲ್ಡೋಜರ್ ಬಳಕೆ ಮಾಡುತ್ತಿದೆ. ಒಳ್ಳೆ ಉದ್ದೇಶಕ್ಕೆ ಸರ್ಕಾರ ಬುಲ್ಡೋಜರ್ ಬಳಕೆ ಮಾಡುತ್ತಿದೆ. ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಇದೀಗ ಭಾರಿ ಸದ್ದು ಮಾಡುತ್ತಿರುವ ಬುಲ್ಡೋಜರ್‌ನ್ನು ಕಳ್ಳರು ಬಳಕೆ ಮಾಡಿದ್ದಾರೆ. ಆದರೆ ಈ ಖದೀಮರು ಎಟಿಎಂ ಹಣ ದರೋಡೆ ಮಾಡಲು ಬುಲ್ಡೋಜರ್ ಬಳಕೆ ಮಾಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಸಮೀಪದಲ್ಲಿದ್ದ ಎಟಿಎಂ ಹಣ ದರೋಡೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ ಕಳ್ಳರು ಜೆಸಿಬಿ ಹಿಡಿದು ಆಗಮಿಸಿದ್ದಾರೆ. ಬಳಿಕ ಎಟಿಎಂ ಬಾಕ್ಸ್‌ನ್ನ ಬುಲ್ಡೋಜರ್ ಮೂಲಕ ಒಡೆದಿದ್ದಾರೆ. ಬಳಿಕ 27 ಲಕ್ಷ ರೂಪಾಯಿ ಹಣ ದೋಚಿಸಿದ್ದಾರೆ.
ಬಳ್ಳಾರಿಯಲ್ಲಿ ಮಿತಿ ಮೀರಿದ ಕ್ರಿಕೆಟ್ ಬೆಟ್ಟಿಂಗ್ ದಂಧೆ..!
ಗಾಜಿನ ಬಾಗಿಲುಗಳನ್ನು ಮುರಿದ ಬುಲ್ಡೋಜರ್ ನೇರವಾಗಿ ಎಟಿಎಂ ಮಶಿನ್‌ನ್ನು ಒಡೆದಿದೆ. ಸಾಮಾನ್ಯವಾಗಿ ಎಟಿಎಂ ಬಾಕ್ಸ್ ಒಡೆದು ಹಣ ದೋಚುವುದು ಸುಲಭವಲ್ಲ. ಕಳ್ಳರು ತಮ್ಮ ಕೈಗಳಿಂದ ಅಥವಾ ಅಸ್ತ್ರಗಳಿಂದ ಇದು ಸುಲಭವಲ್ಲ. ಹೀಗಾಗಿ ಬುಲ್ಡೋಜರ್ ಶಕ್ತಿಯಿಂದ ಸುಲಭವಾಗಿ ಮಾಡಿದ್ದಾರೆ. ಎಟಿಎಂ ಮಶೀನ್ ಹೊರಗಿನ ಕವಚ ಒಡೆದ ಜೆಸಿಬಿ ಒಳಗಿನ ಹಣದ ಪೆಟ್ಟಿಗೆಯನ್ನು ಹೊರತೆಗಿದಿದೆ. ಸಿಸಿಟಿವಿಯಲ್ಲಿ ಬುಲ್ಟೋಜರ್ ಮಾತ್ರ ಕಾಣಿಸುತ್ತಿದೆ. ಇತರ ಯಾರೂ ಚಿತ್ರಣವೂ ಪತ್ತೆಯಾಗಿಲ್ಲ. ಹಣದ ಪೆಟ್ಟಿಗೆಯನ್ನು ಹೊರತೆಗೆದ ಜೆಸಿಬಿ ಅದರೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ.
ಈ ಎಟಿಎಂ ಮಶೀನ್‌ನಲ್ಲಿ 27 ಲಕ್ಷ ರೂಪಾಯಿ ನಗದು ಸಂಗ್ರವಿತ್ತು. ಇದೀಗ ಪೊಲೀಸರು ಸಮೀಪದ ಎಲ್ಲಾ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ತಂಡ ರಚಿಸಿದ್ದಾರೆ.
ಬುಲ್ಡೋಜರ್ ಬಳಸಿ ಹಣ ದೋಚುವ ವಿಡಿಯೋ ಎಟಿಎಂ ಒಳಗಿನ ಸಿಸಿಟಿವಿ ಕ್ಯಾಮಾರ ಸೆರೆ ಹಿಡಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು 2023ರ ಮನಿ ಹೀಸ್ಟ್ ಎಂದು ಉಲ್ಲೇಖಿಸಿದ್ದಾರೆ. 2017ರಲ್ಲಿ ತೆರೆ ಕಂಡ ಹಾಲಿವುಡ್ ಚಿತ್ರ ಮನಿ ಹೀಸ್ಟ್ ಇದೇ ರೀತಿಯ ದರೋಡೆ ಪ್ರಕರಣಗಳ ಸುತ್ತು ಸುತ್ತುತ್ತದೆ. ಹೀಗಾಗಿ ಹಲವರು ಇದು 2023ರ ಮನಿ ಹೀಸ್ಟ್ ಎಂದು ಕರೆದಿದ್ದಾರೆ.
ಎಟಿಎಂ ಮಶಿನ್ ಮೇಲೆ ಬುಲ್ಡೋಜರ್ ಪ್ರಯೋಗಿಸಿದ ಕಾರಣ ಇದೀಗ ಇತರ ಎಟಿಎಂ ಮೇಲೆ ಈ ರೀತಿಯ ದಾಳಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಹೀಗಾಗಿ ಪೊಲೀಸರು ಮಹಾರಾಷ್ಟ್ರದಲ್ಲಿ ನೈಟ್ ಪ್ಯಾಟ್ರೋಲ್ ಹೆಚ್ಚಿಸಲು ಸೂಚಿಸಲಾಗಿದೆ. ಇತರ ರಾಜ್ಯಗಳಲ್ಲೂ ಇದೀಗ ಪೊಲೀಸರು ಅಲರ್ಟ್ ನೀಡಿದ್ದಾರೆ. ಎಟಿಎಂ ಮಶೀನ್ ಮೇಲೆ ಹೊಸ ರೀತಿಯಲ್ಲಿ ಕಳ್ಳರು ದಾಳಿ ಮಾಡುವು ಸಾಧ್ಯತೆ ಇದೆ.
ಫಾರಿನ್‌ಗೆ ಹೋಗಲು ಬೆಂಗ್ಳೂರಲ್ಲಿ 22 ಮನೆಗೆ ಕನ್ನ..!
ಎಟಿಎಂ ಯಂತ್ರ ಕೊರೆದು ಹಣ ದೋಚಲು ಯತ್ನ
ಚಿಕ್ಕನಾಯಕನಹಳ್ಳಿ ಪಟ್ಟಣದ ಶೆಟ್ಟಿಕೆರೆ ರಸ್ತೆಯಲ್ಲಿನ ಪೊಲೀಸ್ ಠಾಣಾ ಸಮೀಪ ಎಸ್‌ಬಿಐ ಶಾಖೆಯ ಎಟಿಎಂನಲ್ಲಿ ಖದೀಮರು ಹಣ ದೋಚಲು ಯತ್ನಿಸಿದ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.
ರಾತ್ರಿ ಸುಮಾರು 2 ಗಂಟೆಗೆ ಶೆಟ್ಟಿಕೆರೆ ರಸ್ತೆಯಲ್ಲಿನ ಎಟಿಎಂ2ರಲ್ಲಿ ಗ್ಯಾಸ್‌ಕಟ್ಟರ್ ಮೂಲಕ ಬೇರ್ಪಡಿಸುವ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ರಾತ್ರಿ ಬೀಟ್ ಪೊಲೀಸರ ಆಗಮನದಿಂದಾಗಿ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಗ್ಯಾಸ್‌ಕಟರ್ ಹಾಗೂ ಇನ್ನಿತರ ಪರಿಕರಗಳ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಎಟಿಎಂ ಯಂತ್ರಭಾಗಶಃ ಕತ್ತರಿಸಿದ್ದು ಹಣದ ಬಾಕ್ಸ್ ಬೇರ್ಪಡಿಸಲಾಗಿಲ್ಲ. ಎಟಿಎಂನಲ್ಲಿ ಯಾರೂ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತುಮಕೂರಿನ ಶ್ವಾನದಳ, ಬೆರಳಚ್ಚು ತಜ್ಞರ ತಂಡದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಸಿ.ಪಿ.ಐ ವಿ.ನಿರ್ಮಲ, ಹಾಗೂ ಪಿಎಸೈ ಶಿವಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣವನ್ನು ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.
