ಬ್ಯಾಂಕ್ ನಿಂದ ಡ್ರಾ ಮಾಡಿ ತೆಗೆದೋಯ್ಯುತ್ತಿದ್ದ ವ್ಯಕ್ತಿಯ ಹಣ ದೋಚಿದ ಖದೀಮರು!
ಬ್ಯಾಂಕ್‌ನಿಂದ ಹಣ ತೆಗೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬ ಹಣ ದೋಚಿರುವ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಹಾಡಹಗಲೇ ನಡೆದಿದೆ.ಎರಡು ದಿನಗಳ ಹಿಂದೆ ನಡೆದಿರುವ ಘಟನೆ.
ಮೈಸೂರು (ಮೇ.21) : ಬ್ಯಾಂಕ್‌ನಿಂದ ಹಣ ತೆಗೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬ ಹಣ ದೋಚಿರುವ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಹಾಡಹಗಲೇ ನಡೆದಿದೆ.
ಎರಡು ದಿನಗಳ ಹಿಂದೆ ನಡೆದಿರುವ ಘಟನೆ. ಸುಮಾರು 1.34 ಲಕ್ಷ ಹಣವಿದ್ದ ಬ್ಯಾಗ್ ಕಿತ್ತು ಪರಾರಿಯಾಗಿರುವ ಖದೀಮರು. ಕುವೆಂಪುನಗರ KHB ಒಂದನೇ ಹಂತದ ಕೆ.ಮದನ್(63) ಎಂಬುವವರಿಗೆ ಸೇರಿದ ಹಣ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಮರಳುವಾಗ ನಡೆದಿರುವ ಘಟನೆ. ವ್ಯಕ್ತಿಯನ್ನ ಬೈಕ್‌ನಲ್ಲಿ ಫಾಲೋ ಮಾಡಿಕೊಂಡ ಬಂದಿರುವ ಖದೀಮರು. ಕುವೆಂಪುನಗರದ ನೃಪತುಂಗ ರಸ್ತೆಯ ಶ್ರೀ ಗಣಪತಿ ದೇವಸ್ಥಾನದ ಎದುರು ವ್ಯಕ್ತಿ ರಸ್ತೆ ದಾಟುವಾಗ ಹಣ ಕದ್ದೊಯ್ದಿರುವ ಕಳ್ಳರು.
ಆರ್‌ಬಿಐ ಪೊಲೀಸರ ಸೋಗು! ವೈದ್ಯೆಯಿಂದ ಕೋಟಿ ಕೋಟಿ ಪೀಕಿದ ಖದೀಮರು
ಕತ್ತಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮದನ್. ವಾಹನ ಚಲಿಸದಂತೆ ವೈದ್ಯರು ಸೂಚನೆ ಹಿನ್ನೆಲೆ ನಡೆದುಕೊಂಡು ಬ್ಯಾಂಕ್‌ಗೆ ಹೋಗಿದ್ದಾರೆ. ಅಂದು ಬೆಳಗ್ಗೆ 11:50ರ ಸಮಯದಲ್ಲಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆ ಕಡೆ ಹೊರಟಿದ್ದಾರೆ. ಈ ವೇಳೆ ಮದನ್ ಹಣದ ಬ್ಯಾಗ್‌ಗೆ ಹೊಂಚು ಹಾಕಿದ್ದ ಕಳ್ಳರು. ಬೈಕ್ ಮೇಲೆ ಹಿಂಬಾಲಿಸಿದ್ದಾರೆ. ಹಿಂಭಾಗದಿಂದ ಬಂದು ಬ್ಯಾಗ್ ಕಿತ್ತುಕೊಂಡು ಕುವೆಂಪುನಗರ ಕಾಂಪ್ಲೆಕ್ಸ್ ಕಡೆಗೆ ಪರಾರಿಯಾಗಿರುವ ಗ್ಯಾಂಗ್.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಡಿಸಿಪಿ ಜಾಹ್ನವಿ. ರಸ್ತೆಯ ಸಮೀಪದ ಅಂಗಡಿಗಳಲ್ಲಿ ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
10 ಲಕ್ಷ ಮೌಲ್ಯದ ಕೇವಲ ಬಲಗಾಲಿಗೆ ಧರಿಸುವ 200 ಶೂ ಕದ್ದ ಖದೀಮರು
ದತ್ತಮಂದಿರದ ಕಾಣಿಕೆ ಡಬ್ಬಿ ಕಳತನಕ್ಕೆ ಯತ್ನ
ಚಳ್ಳಕೆರೆ: ತ್ಯಾಗರಾಜ ನಗರದಲ್ಲಿರುವ ದತ್ತಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಹಣ ದೋಚುವ ಪ್ರಯತ್ನ ನಡೆದಿದ್ದು, ಆ ಸಂದರ್ಭದಲ್ಲಿ ಕಾರೊಂದು ಬಂದು ದೇವಸ್ಥಾನದ ಮುಂದೆ ನಿಂತಿದ್ದರಿಂದ ಗಾಬರಿಗೊಂಡ ಕಳ್ಳರು ಓಡಿಹೋಗಿದ್ದಾರೆ. ದೇವಸ್ಥಾನದ ಹಿಂಭಾಗದ ಕಾಂಪೌಂಡ್‌ನಿಂದ ಒಳ ಪ್ರವೇಶಿಸಿದ ಕಳ್ಳರು ಗರ್ಭ ಗುಂಡಿಯ ಮುಂದಿರುವ ಸ್ಟೀಲ್ ಕಾಣಿಕೆ ಡಬ್ಬಿ¿åನ್ನು ಒಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಶನಿವಾರ ಬೆಳಗ್ಗೆ ದೇವಸ್ಥಾನದ ಆರ್ಚಕ ಸುಬ್ರಮಣ್ಯಶಾಸ್ತಿ್ರ ಕಾಣಿಕೆ ಡಬ್ಬಿಯ ಬೀಗಕ್ಕೆ ಸುತ್ತಿಗೆಯಿಂದ ಹೊಡೆದಿರುವುದನ್ನು ಕಂಡು, ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಸಹ ಇದೇ ರೀತಿ ಕಳ್ಳತನವಾಗಿತ್ತು. ಪೊಲೀಸರು ಈ ಬಗ್ಗೆ ಕ್ರಮ ವಹಿಸಬೇಕೆಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.