ಶಾಪ್ ಬಳಿ ನಿಂತಿದ್ದ ಮಹಿಳೆಗೆ ಗನ್ ತೋರಿಸಿ ಚಿನ್ನದ ಸರ ಎಗರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ತೀವ್ರ ಪ್ರತಿರೋಧ ಒಡ್ಡಿದರೂ ಚಾಲಾಕಿ ಕಳ್ಳ ಸರ ಎಗರಿಸಿ ಪರಾರಿಯಾಗಿದ್ದಾನೆ.

ನವದೆಹಲಿ(ಏ.15): ಮಹಿಳೆಯರ ಕತ್ತಿನಿಂದ ಚಿನ್ನದ ಸರ ಎಗರಿಸುವ ಗ್ಯಾಂಗ್ ದೇಶದ ಪ್ರಮುಖ ನಗರ ಮಾತ್ರವಲ್ಲ, ಬಹುತೇಕ ಭಾಗದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ದೆಹಲಿಯ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತಿದ್ದಾನೆ. ಚಾಲಾಕಿ ಕಳ್ಳಿ ರಿವಾಲ್ವರ್ ಮೂಲಕ ಬೆದರಿಸಿ ಸರ ಕದ್ದಿದ್ದಾನೆ. ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ತಪ್ಪಿಸಿಕೊಳ್ಳಲು ನೋಡಿದ್ದಾರೆ.ಆದರೆ ಯಾವೂದೂ ಕೈಗೂಡಲಿಲ್ಲ. ಚಿನ್ನದ ಸರ ಕಿತ್ತು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ವೈರಲ್ ಆಗಿದೆ.

ಶಾಪ್ ಒಂದರ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಬಳಿ ಬೈಕ್ ಒಂದರಲ್ಲಿ ಬಂದ ಕಳ್ಳ ಯಾವುದೇ ವಿಚಾರ ಕೇಳಿದ್ದಾನೆ. ಪ್ರತಿಕ್ರಿಯೆ ನೀಡುವಷ್ಟರಲ್ಲೇ ಚಿನ್ನದ ಸರ ಎಗರಿಸಲು ಪ್ರಯತ್ನನಿಸಿದ್ದಾನೆ. ಆದರೆ ಮಹಿಳೆ ಕಳ್ಳನ ತಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಕೈಯಲ್ಲಿ ರಿವಾಲ್ವರ್ ಹಿಡಿದಿದ್ದ ಈತ ಬಲವಾಗಿ ಚಿನ್ನದ ಸರ ಎಳೆದಿದ್ದಾನೆ. ಇತ್ತ ಶಾಪ್‌ನಲ್ಲಿದ್ದ ವ್ಯಕ್ತಿ ನೆರವಿಗೆ ಧಾವಿಸಿದ್ದಾನೆ. ಆದರೆ ಆತನಿಗೆ ರಿವಾಲ್ವರ್ ಮೂಲಕ ಬೆದರಿಸಿದ ಬೆನ್ನಲ್ಲೇ ಆತ ಶಾಪ್ ಒಳಗೆ ಓಡಿದ್ದಾನೆ.

ಹರಿದ ಅಂಗಿ-ಚಪ್ಪಲಿ ಧರಿಸಿ 15 ದಿನದ ಅಲೆದಾಟದ ಬಳಿಕ ಕುಖ್ಯಾತ ಸರಗಳ್ಳನನ್ನು ಹಿಡಿದ ಪೊಲೀಸ್‌!

ಇತ್ತ ಮತ್ತೆ ಮಹಿಳೆಯ ಚಿನ್ನದ ಸರ ಕಿತ್ತುಕೊಳ್ಳಲು ಗುದ್ದಾಟ ನಡೆಸಿದ್ದಾನೆ. ಮಹಿಳೆ ಕಳ್ಳನಿಂದ ಬಚಾವ್ ಆಗಲು ಪ್ರಯತ್ನಿಸಿದ್ದಾಳೆ. ಆದರೆ ಕೈಗೂಡಲಿಲ್ಲ. ಚಿನ್ನದ ಸರ ಕಿತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಸಂಪೂರ್ಣ ದೃಶ್ಯ ಶಾಪ್ ಒಳಗಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಸರಗಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. 

Scroll to load tweet…

ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣ ಸಂಖ್ಯೆ ಹೆಚ್ಚು. ಪ್ರತಿ ದಿನ ನಗರದ ಒಂದಲ್ಲೂ ಒಂದು ಪ್ರದೇಶದಲ್ಲಿ ಸರಗಳ್ಳತನ ಪ್ರಕರಣ ದಾಖಲಾಗುತ್ತಿದೆ. ಇತ್ತೀಚೆಗೆ ವಾಯುವಿಹಾರಕ್ಕೆಂದು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದ ಪರಾರಿಯಾಗಿದ್ದ ಇಬ್ಬ​ರನ್ನು ಕನಕಪುರ ಗ್ರಾಮಾಂತರ ಪೊಲೀಸರು ಬಂಧಿ​ಸಿ​ದ್ದಾರೆ. ಬೆಂಗಳೂರಿನ ಚಂದ್ರಶೇಖರ ಹಾಗು ಯತೀಶ್‌ ಬಂಧಿ​ತರು. ವಕೀಲ ಜಗದೀಶ್‌ ಪತ್ನಿ ಜ್ಯೋತಿ ವಾಯು ವಿಹಾರಕ್ಕೆಂದು ಶಿವನಹಳ್ಳಿ ರಸ್ತೆಯ ಪಕ್ಕ ಹೋಗುತ್ತಿದ್ದಾಗ ಇಬ್ಬರು ಸರಗಳ್ಳರು ದ್ವಿಚಕ್ರ ವಾಹನದಲ್ಲಿ ಬಂದು ಸುಮಾರು 2.5 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದರು. 

ಕಳ್ಳತನ ಬಳಿಕ ಪೊಲೀಸ್ ಠಾಣೆ ಪಕ್ಕದಲ್ಲೇ ವಾಸವಿದ್ದ, ಚೈನ್ ಸ್ನ್ಯಾಚ್ ಮಾಡಿ 20 ದಿನದಲ್ಲಿ 20 ಕೆಜಿ ಕಡಿಮೆಯಾದ!

ರೈಲ್ವೆ ಪ್ರಯಾಣಿಕರಿಂದ ಚಿನ್ನ ಸರ ಕಳವು ಮಾಡುತ್ತಿದ್ದ ಇಬ್ಬರನ್ನು ನಗರದ ದಂಡು ರೈಲ್ವೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ಮಹಾರಾಷ್ಟ್ರ ಮುಂಬೈ ನಗರದ ಅನ್ವರ್‌ ಹುಸೇನ್‌ ಹಾಗೂ ಈತನಿಂದ ಕಳವು ಮಾಲು ಸ್ವೀಕರಿಸುತ್ತಿದ್ದ ಗುಡ್ಡು ರಾಮದಾನಿ ಸೋನಿ ಬಂಧಿತರಾಗಿದ್ದು, ಆರೋಪಿಗಳಿಂದ .23.40 ಲಕ್ಷ ಮೌಲ್ಯದ 536.5 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ನಗರ ವ್ಯಾಪ್ತಿಯ ರೈಲ್ವೆ ನಿಲ್ದಾಣಗಳಲ್ಲಿ ನಿರಂತರವಾಗಿ ಸರಗಳ್ಳತನ ಕೃತ್ಯಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ರೈಲ್ವೆ ಎಸ್ಪಿ ಡಾ.ಎಸ್‌.ಕೆ.ಸೌಮ್ಯಲತಾ ಅವರು, ಸರಗಳ್ಳರ ಪತ್ತೆಗೆ ದಂಡು ರೈಲ್ವೆ ಠಾಣೆ ಇನ್‌ಸ್ಪೆಕ್ಟರ್‌ ಪ್ರಭಾಕರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದರು.