Mangaluru: ಅಪಘಾತಕ್ಕೆ ವೈದ್ಯ ವಿದ್ಯಾರ್ಥಿ ಬಲಿ, ಮೃತದೇಹ ನೋಡಲು ಬಂದ ಹೈಕೋರ್ಟ್ ಜಡ್ಜ್
ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಡೆದಿದ್ದು, ಸಾವಿನಿಂದ ಶಾಕ್ ಗೆ ಒಳಗಾದ ಮೃತನ ಮಾವ, ಹೈಕೋರ್ಟ್ ನ್ಯಾಯಾಧೀಶರೊಬ್ಬರು ಆಸ್ಪತ್ರೆಗೆ ಧಾವಿಸಿದ್ದಾರೆ.
ಮಂಗಳೂರು (ಡಿ.13): ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಡೆದಿದ್ದು, ಸಾವಿನಿಂದ ಶಾಕ್ ಗೆ ಒಳಗಾದ ಮೃತನ ಮಾವ, ಹೈಕೋರ್ಟ್ ನ್ಯಾಯಾಧೀಶರೊಬ್ಬರು ಆಸ್ಪತ್ರೆಗೆ ಧಾವಿಸಿದ್ದಾರೆ. ಬೆಂಗಳೂರು ಯಶವಂತಪುರ ನಿವಾಸಿ ಶಿಕ್ಷಕ ಸಿದ್ದರಾಜು ಎಂಬವರ ಪುತ್ರ ನಿಶಾಂತ್ ( 22) ಮೃತರು. ಸಹಸವಾರ ಬೀದರ್ ನಿವಾಸಿ ಶಕೀಬ್ ಗಾಯಗೊಂಡಿದ್ದಾರೆ. ಇಬ್ಬರೂ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟರ್ನ್‌ಶಿಪ್ ನಡೆಸುತ್ತಿದ್ದರು. ಕುತ್ತಾರು ಸಿಲಿಕೋನಿಯಾ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ ಇಬ್ಬರೂ ರಾತ್ರಿ ಬೈಕಿನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ, ಬೈಕ್ ಮೇಲಕ್ಕೆ ಹಾರಿ ಇಬ್ಬರೂ ಎಸೆಯಲ್ಪಟ್ಟು ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಚ್ಚು ವಾಹನ ಸಂಚಾರವಿಲ್ಲದ ರಸ್ತೆಯಾಗಿದ್ದರಿಂದ ರಾತ್ರಿ 12.15ರ ವೇಳೆಗೆ ಅಪಘಾತ ಸಂಭವಿಸಿದ್ದರೂ 12.30 ವೇಳೆ ಸ್ಥಳೀಯರ ಗಮನಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಮಾವ ಹೈಕೋಟ್೯ನ ನ್ಯಾಯಧೀಶರಾಗಿದ್ದಾರೆ. ವಿಚಾರ ತಿಳಿದ ಹೈ ಕೋರ್ಟ್ ನ್ಯಾಯಾಧೀಶರಾದ ರಂಗಸ್ವಾಮಿ ನಟರಾಜ್ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ರಸ್ತೆ ಅಪಘಾತ: ಹಾಸನದ ಮೂವರು, ಚೆನ್ನೈನ ಇಬ್ಬರು ಸಾವು
ನಾಗಮಂಗಲ: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಎ.ನಾಗತಿಹಳ್ಳಿ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಎರಡು ಕಾರುಗಳ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಹಾಸನ ಮೂಲದ ಮೂವರು ಮತ್ತು ತಮಿಳುನಾಡಿನ ಚೆನ್ನೈ ಮೂಲದ ಇಬ್ಬರು ಸೇರಿ ಒಟ್ಟು ಐವರು ಸ್ಥಳದಲ್ಲೇ ಸಾವನ್ನಪ್ಪಿ ಎರಡೂ ಕಾರುಗಳಲ್ಲಿದ್ದ ಐದು ಮಂದಿ ಗಾಯಗೊಂಡಿದ್ದಾರೆ.
ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಸನ ಮೂಲದ ಶ್ರೀನಿವಾಸ್(66), ಇವರ ಪತ್ನಿ ಜಯಂತಿ(60), ಪ್ರಭಾಕರ್ (75), ಸ್ವಿಫ್ಟ್ ಕಾರಿನ ಚಾಲಕ ಚೆನ್ನೈ ಮೂಲದ ಗಣೇಶ್(29) ಹಾಗೂ ಕಿಶೋರ್ (26) ಮೃತರು. ಗೌತಮ…, ಕೆವಿನ್, ಶಬ್ರೀಕ್ ಸೇರಿದಂತೆ ಐವರು ಗಾಯಗೊಂಡು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಂಬಂಧಿಕರೊಬ್ಬರ ಮದುವೆ ಸಮಾರಂಭ ಮುಗಿಸಿ ಹಾಸನಕ್ಕೆ ತೆರಳುತ್ತಿದ್ದ ವೇಳೆ ಇನೋವಾ ಕಾರಿನ ಟೈರ್ ಸಿಡಿದು ರಾಷ್ಟ್ರೀಯ ಹೆದ್ದಾರಿ ರಸ್ತೆಯ ವಿಭಜಕಕ್ಕೆ ಅಪ್ಪಳಿಸಿ ಹಾಸನದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ತಮಿಳುನಾಡಿನ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು.
ಸ್ವಿಫ್ಟ್ ಕಾರಿನಲ್ಲಿದ್ದವರು ಚೆನ್ನೈ ಮೂಲದ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎನ್ನಲಾಗಿದೆ. ವಾರಂತ್ಯದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಅಣ್ಣ-ತಂಗಿ ಮನಸ್ಸಲ್ಲಿ ಮೂಡಿತ್ತು ಪ್ರೇಮ: ಪ್ರೀತಿ ಫಲಿಸಲ್ಲ ಎಂದು 'ಜೋಡಿ' ಆತ್ಮಹತ್ಯೆ
ಸುದ್ದಿ ತಿಳಿದು ಜಿಲ್ಲಾ ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ವೃತ್ತನಿರೀಕ್ಷಕರು ಆಸ್ಪತ್ರೆ ಮತ್ತು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದರು. ಎರಡೂ ಕಾರುಗಳಲ್ಲಿದ್ದ ಐವರ ಪೈಕಿ ಮೂವರಿಗೆ ಗಂಭೀರ ಗಾಯ ಮತ್ತು ಇನ್ನಿಬ್ಬರು ಸಣ್ಣ ಪುಟ್ಟಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದು ಭಯಾನಕ 'ಸ್ಫೋಟಕ' ದಂಧೆ: ಈ ಡೆಡ್ಲಿ ಬಾಂಬ್ ಎಷ್ಟು ಡೇಂಜರ್ ಗೊತ್ತಾ?
ಘಟನೆಯಲ್ಲಿ ಸಾವನ್ನಪ್ಪಿದ್ದ ಐವರ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಾಗಾರದಲ್ಲಿ ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಮೃತದ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ಮುಂದಿನ ಕಾನೂನು ಕ್ರಮವಹಿಸಿದ್ದಾರೆ.