Asianet Suvarna News Asianet Suvarna News

ಜಮೀನಿಗೆ ತೆರಳಿದ್ದ ಒಂಟಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಇಬ್ಬರು ಕಳ್ಳರು ಪರಾರಿ!

ಜಮೀನಿನ ಬಳಿ ತೆರಳುತ್ತಿದ್ದ ಒಂಟಿ ಮಹಿಳೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.

Thieves escaped by removing womans mangaly at pandavapur rav
Author
First Published Feb 4, 2024, 7:43 AM IST

ಪಾಂಡವಪುರ (ಫೆ.4): ಜಮೀನಿನ ಬಳಿ ತೆರಳುತ್ತಿದ್ದ ಒಂಟಿ ಮಹಿಳೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸುಧಾ ತಮ್ಮ ತೋಟಕ್ಕೆಂದು ಸಂಜೆ ವೇಳೆ ಒಬ್ಬರೇ ತೆರಳುತ್ತಿದ್ದರು. ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸುಧಾ ಅವರ ಮಾಂಗಲ್ಯ ಸರ ಕೀಳಲು ಕೈಹಾಕಿದ್ದಾರೆ. ಈ ವೇಳೆ ಸುಧಾ ಅವರ ಬಿಗಿಯಾಗಿ ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಮಾಂಗಲ್ಯ ಸರ ಸ್ವಲ್ಪಕಟ್ಟಾಗಿ ಸುಧಾ ಅವರ ಬಳಿ ಸುಮಾರು 13 ಗ್ರಾಂ ನಷ್ಟು ಉಳಿದುಕೊಂಡಿದೆ. ಉಳಿದ 37 ಗ್ರಾಂ ನಷ್ಟು ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಯಮರೂಪಿಯಾಗಿ ಬೈಕ್‌ಗೆ ಅಡ್ಡಬಂದ ನಾಯಿ; ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವು!

ಬಳಿಕ ಪತಿ ಸ್ವಾಮೀಗೌಡ ಅವರೊಂದಿಗೆ ಸುಧಾ ಅವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಷಯ ತಿಳಿದ ಅಪರ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.
ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಸರಗಳ್ಳತನ:

ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಸರಗಳ್ಳತನ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಳ್ಳಿಗಳಲ್ಲಿ ಒಂಟಿ ಮಹಿಳೆಯರು ಜಮೀನುಗಳ ಬಳಿ ತೆರಳುತ್ತಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುವ ಅಪರಿಚಿತರು ಸರಗಳ್ಳತನ ಮಾಡುತ್ತಿದ್ದಾರೆ. ಪೊಲೀಸರು ಹೆಚ್ಚೆತ್ತು ಇಂತಹ ಪ್ರಕರಣಗಳ ಬಗ್ಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಬ್ಬಬ್ಬಾ ಮನೆಗಳ್ಳತನ ಮಾಡಲು ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಖದೀಮರು!

ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಬಸ್, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಲ್ಲಿ ಸರಗಳ್ಳತನ ಹೆಚ್ಚುತ್ತಿರುವುದರಿಂದ ಒಂಟಿಯಾಗಿ ಓಡಾಡುವ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ಜಾಗೃತಿವಹಿಸಬೇಕೆಂದು ಸಬ್ ಇನ್ಸ್‌ಪೆಕ್ಟರ್ ಉಮೇಶ್ ಮನವಿ ಮಾಡಿದ್ದಾರೆ.

Follow Us:
Download App:
  • android
  • ios