ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಅಪಘಾಕ್ಕೀಡಾಗಿ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ದಬ್ಬಹಳ್ಳಿ ಬಳಿ ನಡೆದಿದೆ. 

ಮಳವಳ್ಳಿ (ಫೆ.4): ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಅಪಘಾಕ್ಕೀಡಾಗಿ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ದಬ್ಬಹಳ್ಳಿ ಬಳಿ ನಡೆದಿದೆ. 

ನೆಟ್ಕಲ್ ಗ್ರಾಮದ ವಸಂತ್ ಕುಮಾರ್ (40) ಮೃತಪಟ್ಟ ಬೈಕ್ ಸವಾರ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದಬ್ಬಹಳ್ಳಿ ಬಳಿ ನಾಯಿ ಅಡ್ಡ ಬಂದಿದೆ. ಇದ್ದರಿಂದ ನಿಯಂತ್ರಣ ತಪ್ಪಿದ ಬೈಕ್ ಅಪಘಾತವಾಗಿದೆ. 

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಸಂತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೂ ಗಾಯವಾಗಿದೆ. ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.‌ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು: ಸುದ್ದಿ ನಿರೂಪಕಿ ಕೆಲಸ ಕೊಡಿಸೋದಾಗಿ ಚಿನ್ನಾಭರಣ ಪಡೆದು ನರ್ಸ್‌ಗೆ ವಂಚನೆ, ವಾಪಸ್ ಕೇಳಿದ್ದಕ್ಕೆ ಹಲ್ಲೆ!

ನದಿ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಶ್ರೀರಂಗಪಟ್ಟಣ: 

ತಾಲೂಕಿನ ಲೋಕಪಾವನಿ ನದಿ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

ಮೃತ ಅಪರಿಚಿತ ವ್ಯಕ್ತಿಗೆ ಸುಮಾರು 50 ರಿಂದ 55 ವರ್ಷವಿರಬಹುದು. ಮುಖದಲ್ಲಿ ಕುರುಚಲು ಗಡ್ಡ ಮತ್ತು ಮೀಸೆ ಬಿಟ್ಟಿದ್ದು, ತಲೆಯಲ್ಲಿ ಕಪ್ಪು, ಬಿಳಿ ಮಿಶ್ರಿತ ಕೂದಲು ಇದ್ದು, ಬಿಳಿ ಬಣ್ಣದ ತುಂಬು ತೋಳಿನ ಶರ್ಟು, ಸಿಮೆಂಟ್ ಬಣ್ಣದ ಪ್ಯಾಂಟು ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದಾರೆ.

ಆಯುರ್ವೇದ ಪಂಡಿತರೆಂದು ನಂಬಿಸಿ 30 ಸಾವಿರ ವಂಚನೆ

 ಮೃತರ ವಾರಸುದಾರರಿದ್ದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ದೂ-08236-253027, 08232-224888 ಅಥವಾ ಮೊ-9480804875 ಅನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ