Asianet Suvarna News Asianet Suvarna News

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಂದು ದೇವಿಗೆ ಹಾಕಿದ್ದ ಚಿನ್ನವನ್ನೇ ಕದ್ದ ಖದೀಮರು..!

ಮಹಾಲಕ್ಷ್ಮಿಲೇಔಟ್ ಠಾಣಾ ವ್ಯಾಪ್ತಿಯ ಸತ್ಯನಾರಾಯಣ ಲೇ ಔಟ್‌ನಲ್ಲಿ ನಡೆದ ಘಟನೆ  

Thieves Did Gold Theft During Varamahalakshmi Festival in Bengaluru grg
Author
Bengaluru, First Published Aug 7, 2022, 11:04 PM IST

ಬೆಂಗಳೂರು(ಆ.07):  ಶುಕ್ರವಾರ ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿತ್ತು. ಆದರೆ ವರಮಹಾಲಕ್ಷ್ಮಿ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖದೀಮರ ತಂಡವೊಂದು ಲಕ್ಷ್ಮಿ ದೇವಿಗೆ ಹಾಕಿದ್ದ ಬಂಗಾರವನ್ನೇ ಕದ್ದ ಘಟನೆ ಮಹಾಲಕ್ಷ್ಮಿಲೇಔಟ್ ಠಾಣಾ ವ್ಯಾಪ್ತಿಯ ಸತ್ಯನಾರಾಯಣ ಲೇ ಔಟ್ ನಲ್ಲಿ ನಿನ್ನೆ(ಶನಿವಾರ) ರಾತ್ರಿ ನಡೆದಿದೆ. 

ಮೋಹನ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ ಅಂತ ತಿಳಿದು ಬಂದಿದೆ. ಕಿಟಕಿ ಬಳಿ ವರಮಹಾಲಕ್ಷ್ಮಿಯನ್ನು ಕೂರಿಸಲಾಗಿತ್ತು. ನಿನ್ನೆ ರಾತ್ರಿ ಕೋಲನ್ನು ಬಳಿಸಿ ದೇವರಿಗೆ ಹಾಕಿದ ಬಂಗಾರವನ್ನು ಖದೀಮರು ಎಸ್ಕೇಪ್ ಮಾಡಿದ್ದಾರೆ. 
ಮನೆಯವರು ಎಲ್ಲರೂ ಮಲಗಿರುವ ಸಮಯದಲ್ಲಿ ಬಂಗಾರವನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ. ಸುಮಾರು 200 ಗ್ರಾಂ ಬಂಗಾರವನ್ನು ಖದೀಮರು ಕಳ್ಳತನ ಮಾಡಿದ್ದಾರೆ ಅಂತ ತಿಳಿದು ಬಂದಿದೆ. 

ಲಾಯರ್ ಮನೆಗೆ ದೋಚಲು ಕಳ್ಳನಿಗೆ ನೆರವಾದ ಪ್ರೇಯಸಿ, 24 ಗಂಟೆಯೊಳಗೆ ಆರೋಪಿಗಳು ಅಂದರ್

ಈ ಸಂಬಂಧ ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನಾರಾಯಣ ಲೇ ಔಟ್‌ನ ಸಿಸಿಟಿವಿಗಳನ್ನು ವಶಕ್ಕೆ ಪಡೆದ ಪೊಲೀಸರು ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ. 
 

Follow Us:
Download App:
  • android
  • ios