* ಈತ ಅಂತಿಂಥ ಚಾಲಾಕಿ ಚತುರ ಅಲ್ಲ* ಮದುವೆ ಮನೆಗೆ ಬಂದು ಆಭರಣ ತುಂಬಿದ್ದ ಬ್ಯಾಗ್ ನೊಂದಿಗೆ ಪರಾರಿ* ಪೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬಂದು ಕಳ್ಳತನ
ಗ್ವಾಲಿಯರ್(ಫೆ. 13) ಈತ ಚಾಲಾಕಿ ಚತುರ. ನವವಿವಾಹಿತರ (Couple) ಫೋಟೋ ಕ್ಲಿಕ್ಕಿಸಿದ ಕಳ್ಳನೊಬ್ಬ ಬೆಲೆಬಾಳುವ ವಸ್ತುಗಳಿದ್ದ (Robbery) ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳ್ಳನ ಚಾಲಾಕಿತನದ ವಿಡಿಯೋ ವೈರಲ್ ಆಗಿದೆ.
ಆರೋಪಿಯು ಕಪ್ಪು ಬಟ್ಟೆಯನ್ನು ಧರಿಸಿದ್ದು ಮುಖದ ಚಿತ್ರ ಬಿದ್ದಿಲ್ಲ. ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ತೆಗೆದುಕೊಂಡು ಆರಾಮಾಗಿ ತನಗೇನು ಗೊತ್ತಿಲ್ಲ ಎಂಬಂತೆ ಜಾಗ ಖಾಲಿ ಮಾಡಿದ್ದಾನೆ.
ಶನಿವಾರ ರಾತ್ರಿ, ಗ್ವಾಲಿಯರ್‌ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಂಗಮ್ ವಾಟಿಕಾ ಮದುವೆ ಛತ್ರದಲ್ಲಿ ಈ ಘಟನೆ ನಡೆದಿದೆ. ದಂಪತಿಗಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದು ನಿಂತ ವ್ಯಕ್ತಿ ಚಾಲಾಕಿತನದಿಂದ ವಧುವಿನ ಕುರ್ಚಿ ಹಿಂಬದಿಗೆ ತೆರಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಎಂಎ, ಎಂಬಿಎ ಓದಿಕೊಂಡು 6 ವರ್ಷದಲ್ಲಿ 5 ಮರ್ಡರ್ ಮಾಡಿ ಓಡಾಡಿಕೊಂಡಿದ್ದವ ಸೆರೆ ಸಿಕ್ಕ ಕತೆ
ಬ್ಯಾಗ್ ಕಳ್ಳತನವಾಗಿರುವ ಬಗ್ಗೆ ಬನ್ಸಲ್ ಎಂಬುವರು ದೂರು ನೀಡಿದ್ದಾರೆ. ಬ್ಯಾಗ್‌ನಲ್ಲಿ 1 ಲಕ್ಷ ರೂಪಾಯಿ ನಗದು ಮತ್ತು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು ಎಂದು ತಿಳಿಸಿದ್ದಾರೆ. ಹೊಸ ಜೋಡಿಗೆ ಸೇರಿದ್ದ ಎಲ್ಲ ಆಭರಣಗಳು ಕಳ್ಳನ ಪಾಲಾಗಿವೆ.
ಕ್ರೈಂ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ರಾಜೇಶ್ ದಂಡೋಟಿಯಾ ಮಾತನಾಡಿ, ಮದುವೆ ಛತ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ವೀಡಿಯೊವನ್ನು ಸಂಗ್ರಹಿಸಲಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳ್ಳತನವೇ ಕುಲಕಸುಬು: ಮಸಾಜ್ ಪಾರ್ಲರ್ ಗೆ ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದರು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದರು. ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದರು.
ಬೆಂಗಳೂರಿನ ಕಿರಾತಕರು: ಇವರು ಅಂತಿಂಥ ಕಿರಾತಕರಲ್ಲ. ಒಂದೇ ಹುಡುಗಿಯನ್ನ ಲವ್ ಮಾಡಿದ್ದ ಕಳ್ಳರ ಗ್ಯಾಂಗ್.. ಪ್ರೀತಿ ಹೆಸರಲ್ಲಿ ಚಿನ್ನಾಭರಣ ದೋಚಿತ್ತು. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು, ಬಸವರಾಜ, ವಿಜಯಕುಮಾರ,ಸಂಜಯ್ ಬಂಧಿತ ಆರೋಪಿಗಳು.. ಮೊದಲಿಗೆ ಲವ್ವು ಆಮೇಲೆ ಬದುಕೋಕೆ ಕಷ್ಟ ಕಷ್ಟ ಅಂತ ರಾಗ ಎಳೆಯುತ್ತಿದ್ದರು. ಯುವತಿಯೇ ಮನೆಯಲ್ಲಿದ್ದ ಚಿನ್ನಾಭರಣ ತಂದು ಕೊಟ್ಟಿದ್ದಳು.
ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ: ಮುಂಬೈ ಪೊಲೀಸರಿಗೆ ಸವಾಲಾಗಿದ್ದ ಮಲಾಡ್ ದರೋಡೆ ಪ್ರಕರಣದಲ್ಲಿ ಸಿಕ್ಕ ಸುಳಿವನ್ನು ಆಧರಿಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಐವರನ್ನು ಬಂಧಿಸಿದ್ದರು.. 60 ವರ್ಷದ ಮಹಿಳೆ ಮನೆಯಿಂದ 21 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ ತಂಡವನ್ನು ಬಂಧಿಸಲಾಗಿತ್ತು.
