ಕಳ್ಳನೋರ್ವ ಈ ಬ್ರಿಡ್ಜ್‌ನ ಪಕ್ಕದಲ್ಲಿ ನೇತಾಡುತ್ತಾ ವೇಗವಾಗಿ ಬರುವ ರೈಲಿನ ಪ್ರಯಾಣಿಕರ ಕೈಯಲ್ಲಿದ್ದ ಮೊಬೈಲ್‌ನ್ನು ಕಸಿಯುತ್ತಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ (Bihar) ಬೇಗುಸರಾಯ್‌ನ ರೈಲ್ವೆ ಸೇತುವೆಯಲ್ಲಿ ಈ ಘಟನೆ ನಡೆದಿದೆ.
ಕಳ್ಳರು ತೋರುವ ಕಳ್ಳತನಕ್ಕೆ ತಂತ್ರಜ್ಞಾನವೇ ಕೆಲವೊಮ್ಮೆ ಬೆರಗಾಗುವುದು ಅಷ್ಟರಮಟ್ಟಿಗೆ ಕಳ್ಳರು ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಗಳನ್ನು ಬಳಸಿ ಕಳ್ಳತನ ಮಾಡುತ್ತಾರೆ. ಇನ್ನು ರೈಲುಗಳಲ್ಲಿ ಕಳ್ಳತನ ದರೋಡೆಗಳಾದ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ರೈಲು ಪ್ರಯಾಣಿಸುವ ದುರ್ಗಮ ಹಾದಿಗಳಲ್ಲಿ ಕಳ್ಳರು ರೈಲಿನ ಎಮರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸಿ ಪ್ರಯಾಣಿಕರ ಬಳಿ ಇದ್ದ ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾದ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ ಮಾತ್ರ ಕಳ್ಳನೋರ್ವ ರೈಲು ಏರದೆಯೇ ರೈಲಿನಲ್ಲಿರುವ ಪ್ರಯಾಣಿಕರ ಮೊಬೈಲ್ ಕಸಿದಿದ್ದಾನೆ. ಇದು ವಿಚಿತ್ರವೆನಿಸಿದರು ಸತ್ಯ.
ರೈಲು ಪ್ರಯಾಣವೂ ನದಿ ಸುರಂಗ ದುರ್ಗಮವಾದ ಕಾಡುಗಳ ಮಧ್ಯೆ ಸಾಗುವುದನ್ನು ನೀವು ನೋಡಿರಬಹುದು. ಅದೇ ರೀತಿ ನದಿಗಳ ರೈಲು ಸಾಗಲು ಸುಂದರವಾದ ಬಿಡ್ಜ್‌ಗಳನ್ನು ನಿರ್ಮಿಸುತ್ತಾರೆ. ನೋಡಲು ಕೂಡ ಸೊಗಸಾಗಿರುವ ಈ ಪ್ರಯಾಣದ ಹಾಗೂ ವಿಹಂಗಮ ನೋಟವನ್ನು ನೋಡಲು ಹಾಗೂ ತಮ್ಮ ಮೋಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲು ರೈಲಿನ ಪ್ರಯಾಣಿಕರು ರೈಲಿನ ಕಿಟಕಿಯಲ್ಲೋ ರೈಲಿನ ಬಾಗಿಲಿನಲ್ಲೋ ನಿಂತುಕೊಂಡು ಇದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಾರೆ.
ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳನೋರ್ವ ಈ ಬ್ರಿಡ್ಜ್‌ನ ಪಕ್ಕದಲ್ಲಿ ನೇತಾಡುತ್ತಾ ವೇಗವಾಗಿ ಬರುವ ರೈಲಿನ ಪ್ರಯಾಣಿಕರ ಕೈಯಲ್ಲಿದ್ದ ಮೊಬೈಲ್‌ನ್ನು ಕಸಿಯುತ್ತಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ (Bihar) ಬೇಗುಸರಾಯ್‌ನ ರೈಲ್ವೆ ಸೇತುವೆಯಲ್ಲಿ ಈ ಘಟನೆ ನಡೆದಿದೆ.
ಪಾಟ್ನಾ ದಿಂದ ಬೇಗುಸರೈಗೆ (Begusarai) ಸಂಪರ್ಕ ಕಲ್ಪಿಸುವ ರಾಜೇಂದ್ರ ಸೇತು ರೈಲು ಸೇತುವೆಯಲ್ಲಿ (Rajendra Setu bridge) ಈ ದರೋಡೆ ನಡೆದಿದೆ. ವೀಡಿಯೋ ಟ್ವಿಟ್ಟರ್‌ನಲ್ಲಿ ಸುತ್ತು ಹೊಡೆಯುತ್ತಿದ್ದು, ವಿಡಿಯೋದ ಸ್ಲೋ ಮೋಷನ್ ಪ್ಲೇಯನ್ನು ಒಬ್ಬರು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋದಲ್ಲಿ ದರೋಡೆಕೋರನನ್ನು ಪತ್ತೆ ಮಾಡಲಾಗುವುದಿಲ್ಲ. ಆದರೆ ಮೊಬೈಲ್ ಕಳೆದುಕೊಂಡ ಪ್ರಯಾಣಿಕರು ಇಂಗು ತಿಂದ ಮಂಗಗಳಂತೆ ನೋಡುತ್ತಿರುವುದು ಕಾಣುತ್ತಿದೆ.
ಕಂಬ ಏರಿ ಗೋಡೆ ಹಾರಿ ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕತಿಹಾರ್‌ನಿಂದ (Katihar) ಪಾಟ್ನಾಗೆ ಪ್ರಯಾಣಿಸುವ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನ (Inter City Express train) ತೆರೆದ ಗೇಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಸಮೀರ್ ಕುಮಾರ್ (Sameer Kumar) ಎಂಬ ವ್ಯಕ್ತಿ ತನ್ನ ಫೋನ್‌ನಿಂದ ಗಂಗಾ ನದಿಯ (Ganga River) ವೀಡಿಯೊ ರೆಕಾರ್ಡ್ ಮಾಡುವುದನ್ನು ನೋಡಬಹುದು. ಅವನು ರೈಲಿನ ಕೋಚ್‌ನ ಅಂಚಿನಲ್ಲಿ ಕುಳಿತು ವೀಕ್ಷಣೆಯನ್ನು ರೆಕಾರ್ಡ್ ಮಾಡುವಲ್ಲಿ ನಿರತನಾಗಿದ್ದಾಗ, ಸೇತುವೆಯಿಂದ ನೇತಾಡುತ್ತಿರುವ ದರೋಡೆಕೋರ ಸಮೀರ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳುತ್ತಾನೆ.
ದರೋಡೆಕೋರ ಸಮೀರ್‌ನ ಕೈಯಿಂದ ಮೊಬೈಲ್ ಫೋನ್ ಅನ್ನು ವೇಗವಾಗಿ ಕಸಿದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೆಲವು ಸೆಕೆಂಡುಗಳ ಕಾಲ, ಸಮೀರ್‌ಗೆ ಏನಾಯಿತು ಎಂಬುದು ಸಹ ತಿಳಿದಿರಲಿಲ್ಲ ಏಕೆಂದರೆ ಎಲ್ಲವೂ ತುಂಬಾ ವೇಗವಾಗಿ ಸಂಭವಿಸಿತು. ನಂತರ ಅವನು ನಿಂತುಕೊಂಡು ವೀಡಿಯೊವನ್ನು ಚಿತ್ರೀಕರಿಸುತ್ತಿದ್ದ ತನ್ನ ಸ್ನೇಹಿತನಿಗೆ ಹೇಳಿದ್ದಾನೆ. ಈ ಘಟನೆಯನ್ನು ರೈಲಿನಲ್ಲಿದ್ದ ಇನ್ಯಾರೋ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಪೊಲಿಸರಿಗೇ ಚಳ್ಳೆಹಣ್ಣು ತಿನ್ನಿಸಿ ಖದೀಮರ ಕಳ್ಳತನ: ಮುಸಗುಗಳ್ಳರ ಕಾಟಕ್ಕೆ ಬೆಸ್ತುಬಿದ್ದ ಬಳ್ಳಾರಿ ಜನತೆ..!
ಹಾಗಂತ ಇದೇನು ಇದು ರಾಜೇಂದ್ರ ಸೇತು ಸೇತುವೆಯಲ್ಲಿ ನಡೆಯುವ ಅಪರೂಪದ ಘಟನೆಯೇನಲ್ಲ. ಅನೇಕ ದರೋಡೆಕೋರರು ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸೇತುವೆಯಿಂದ ನೇತಾಡುತ್ತಾರೆ. ಅವರು ಸೇತುವೆಗೆ ತಮ್ಮನ್ನು ಕಟ್ಟಿಕೊಳ್ಳಲು ಹಗ್ಗವನ್ನು ಬಳಸುತ್ತಾರೆ ಮತ್ತು ಅಂಚಿನಲ್ಲಿ ತಮ್ಮ ಪಾದಗಳನ್ನು ಸಮತೋಲನಗೊಳಿಸುವ ಮೂಲಕ ರೈಲಿನಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಇದೇ ಸೇತುವೆ ಮೇಲೆ ಪ್ರತಿದಿನ ಹತ್ತಾರು ಇಂತಹ ಘಟನೆಗಳು ನಡೆಯುತ್ತಿವೆ. ಸೇತುವೆಯ ಬೇಲಿಗಳಿಗೆ ನೇತಾಡುವ ದರೋಡೆಕೋರರು ಕ್ಷಣಾರ್ಧದಲ್ಲಿ ಪ್ರಯಾಣಿಕರಿಂದ ಫೋನ್ ಕಸಿದುಕೊಳ್ಳುತ್ತಾರೆ ಮತ್ತು ರೈಲು ಚಲಿಸುತ್ತಿರುವುದರಿಂದಾಗಿ ಪ್ರಯಾಣಿಕರಿಗೆ ಏನನ್ನೂ ಮಾಡಲಾಗುವುದಿಲ್ಲ.