ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಹಲವು ದುಶ್ಚಟಗಳಿಗೆ ಬಲಿಯಾಗಿದ್ದ ಬಂಧಿತ ಆರೋಪಿ ಪ್ರಕಾಶ್‌ 

ಬೆಂಗಳೂರು(ಆ.20): ಬಾಡಿಗೆ ಮನೆ ಮಾಡುವ ನೆಪದಲ್ಲಿ ಮನೆಗಳಿಗೆ ಕನ್ನಾ ಹಾಕುತ್ತಿದ್ದ ಕುಖ್ಯಾತ ಕಳ್ಳನನ್ನ ಹೆಚ್ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ (39) ಬಂಧಿತ ಆರೋಪಿಯಾಗಿದ್ದಾನೆ. 

ಬಂಧಿತ ಪ್ರಕಾಶ್ ಮೊದಲಿಗೆ ದೇವಸ್ಥಾನಗಳ ಬಳಿ ಚಪ್ಪಲಿ ಕಳವು ಮಾಡ್ತಿದ್ದನಂತೆ. ಕಲಾಸಿಪಾಳ್ಯದ ಕಾಟಯ್ಯನೊಂದಿಗೆ ಚಪ್ಪಲಿ ಕದಿಯೋ ಕೆಲಸ ಮಾಡ್ತಿದ್ದನು. ಬಾಡಿಗೆ ಮನೆ ಮಾಡುವ ನೆಪದಲ್ಲಿ ಆರೋಪಿಗಳು ಮನೆ ನೋಡುವಾಗ ಮನೆಯ ಬೀಗದ ಫೋಟೋ ತೆಗೆದುಕೊಳ್ತಿದ್ದರು. ಬಳಿಕ ಬೀಗ ನಕಲಿ‌ ಕೀ ಮಾಡಿಸಿಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿ ಸಿಕ್ಕಿದ್ದನ್ನ ದೋಚುತ್ತಿದದ್ದರು. 

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್‌

ಮೂರು ಹೆಂಡತಿಯರ ಮುದ್ದಿನ ಗಂಡ ಈ ಪ್ರಕಾಶ ಕದ್ದ ಆಭರಣದಿಂದ ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದನಂತೆ. ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಹಲವು ದುಶ್ಚಟಗಳಿಗೆ ಬಲಿಯಾಗಿದ್ದ ಈತ ಮುರುಗೇಶ್ ಪಾಳ್ಯದ ಪಾರ್ಥಿವ್ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದನು. ತಂದೆ ಸಾವಿನ ಬಳಿಕ ಕಳ್ಳತನ ಕೃತ್ಯವೆಸಗ್ತಿದ್ದನಂತೆ ಈ ಖದೀಮ. 

ಬಂಧಿತ ಆರೋಪಿ ನಗರದಾದ್ಯಂತ 46 ಕೇಸ್‌ಗಳಲ್ಲಿ ಭಾಗಿಯಾಗಿದ್ದಾನೆ. ಸದ್ಯ ಹೆಚ್ಎಸ್ಆರ್ ಲೇಔಟ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈತನ ಬಂಧನದಿಂದ 7 ಮನೆಗಳವು ಪ್ರಕರಣ ಪತ್ತೆಯಾಗಿವೆ. ಬಂಧಿತನಿಂದ 750 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.