ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್
ಮೊಬೈಲ್ ಚಾರ್ಜರ್‌ನಲ್ಲಿ ಕ್ಯಾಮರಾ ಇಟ್ಟು ಮಹಿಳೆಯ ವಿಡಿಯೋ ಮಾಡಿಕೊಂಡಿದ್ದ, ನಂತರ ಮಹಿಳೆಗೆ ಇನ್ಸ್ಟಾಗ್ರಾಂನಲ್ಲಿ ಮಸೇಜ್ ಮಾಡುತ್ತಿದ್ದ ಬಂಧಿತ ಆರೋಪಿ
ಬೆಂಗಳೂರು (ಆ.20): ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹೇಶ್(30) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಸೀಕ್ರೆಟ್ ಆಗಿ ವಿಡಿಯೋ ಮಾಡಿಕೊಂಡಿದ್ದ. ಮೊಬೈಲ್ ಚಾರ್ಜರ್‌ನಲ್ಲಿ ಕ್ಯಾಮರಾ ಇಟ್ಟು ಮಹಿಳೆಯ ವಿಡಿಯೋ ಮಾಡಿಕೊಂಡಿದ್ದ, ನಂತರ ಮಹಿಳೆಗೆ ಇನ್ಸ್ಟಾಗ್ರಾಂನಲ್ಲಿ ಮಸೇಜ್ ಮಾಡುತ್ತಿದ್ದ. ಫೇಕ್ ಅಕೌಂಟ್ ನಿಂದ ಮಹಿಳೆಗೆ ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತಾಡುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಇಲ್ಲವಾದರೆ ಆತನ ಬಳಿ ಇದ್ದ ಮಹಿಳೆ ವಿಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದನಂತೆ.
ಬೆಂಗಳೂರು: 80 ಹಂದಿ ಕದ್ದಿದ್ದ 10 ಕಳ್ಳರ ಬಂಧನ
ಕೆಲ ವಿಡಿಯೋ ತುಣುಕುಗಳನ್ನು ಮಹಿಳೆಯರಿಗೆ ಕಳಿಸಿ ಬೆದರಿಕೆವೊಡ್ಡಿದ್ದ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಬಂಧಿತನಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್ ಟಾಪ್, 2 ಪೆಂಡ್ರೈವ್, 2 ಮೆಮೋರಿಕಾರ್ಡ್, ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.