Asianet Suvarna News Asianet Suvarna News

ಹುಬ್ಬಳ್ಳಿ: ಸ್ವೈಪಿಂಗ್ ಮಷಿನ್ ಮೂಲಕ ಗೌಪ್ಯ ಮಾಹಿತಿ ಕದ್ದು ಹಣ ಲೂಟಿ‌ ಮಾಡ್ತಿದ್ದ‌ ಖರ್ತನಾಕ್ ಕಳ್ಳ ಅರೆಸ್ಟ್‌

ಮಂಗಳೂರು ಮೂಲದ ಮಹ್ಮದ್ ಹಮೀದ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ  ಎರಡು ಭಾರತ್ ಪೇ ಸ್ಟೈಪಿಂಗ್ ಯಂತ್ರ, ಎರಡು ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಸ್ವೈಪಿಂಗ್ ಯಂತ್ರಗಳಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಗೌಪ್ಯ ಮಾಹಿತಿ ಕದಿಯುತ್ತಿದ್ದ ಆರೋಪಿ, ನಂತರ ಹಣ ವರ್ಗಾವಣೆ ಮಾಡಿಕೊಂಡು ವಂಚಿಸ್ತಿದ್ದ. ಇನ್ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡದಿಂದ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

Thief arrested For Fraud Case in Hubballi grg
Author
First Published Nov 30, 2023, 8:33 PM IST

ಹುಬ್ಬಳ್ಳಿ(ನ.30):  ಸ್ವೈಪಿಂಗ್ ಯಂತ್ರಗಳ ಮೂಲಕ ಗೌಪ್ಯ ಮಾಹಿತಿ ಕದಿಯುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸೈಬರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ಮೂಲದ ಮಹ್ಮದ್ ಹಮೀದ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ  ಎರಡು ಭಾರತ್ ಪೇ ಸ್ಟೈಪಿಂಗ್ ಯಂತ್ರ, ಎರಡು ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಸ್ವೈಪಿಂಗ್ ಯಂತ್ರಗಳಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಗೌಪ್ಯ ಮಾಹಿತಿ ಕದಿಯುತ್ತಿದ್ದ ಆರೋಪಿ, ನಂತರ ಹಣ ವರ್ಗಾವಣೆ ಮಾಡಿಕೊಂಡು ವಂಚಿಸ್ತಿದ್ದ. ಇನ್ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡದಿಂದ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು: ಟೈರ್‌ ಪಂಕ್ಚರ್‌ ಮಾಡಿ 25 ಲಕ್ಷದ ಚಿನ್ನ ಎಗರಿಸಿದ ಖದೀಮನ ಬಂಧನ

ಬಳಕೆ ಮಾಡದೆ ಇರುವ ಸ್ಟೈಪಿಂಗ್ ಯಂತ್ರಗಳನ್ನು ಸಂಗ್ರಹಿಸುತ್ತಿದ್ದ ಆರೋಪಿ, ನಂತರ ಅವುಗಳನ್ನು ಸೈಬರ್ ವಂಚಕರಿಗೆ ಪೂರೈಸುತ್ತಿದ್ದ. ಅವುಗಳನ್ನು ಬಳಸಿಕೊಂಡು ಗ್ರಾಹಕರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಗೋಪ್ಯ ಮಾಹಿತಿ ಹ್ಯಾಕ್ ಮಾಡುತ್ತಿದ್ದ ವಂಚಕರು, ನಂತರ ನಕಲಿ ಕಾರ್ಡ್ ತಯಾರಿಸಿ ಷೋ ರೂಮ್ಗಳಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿದ್ದು, ಇತರೆ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Latest Videos
Follow Us:
Download App:
  • android
  • ios