ಚಿಕಿತ್ಸೆಗೆಂದು ಹೋದಾಗ ಗರ್ಭಿಣಿ ಪತ್ನಿಯ ಚಿನ್ನಾಭರಣ ಮಂಗಮಾಯ! ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿಯೇ ಕಳ್ಳತನ?

ಗರ್ಭಿಣಿಯ ಪತ್ನಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮಂಗಮಾಯವಾದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಆರೋಪಿಸಿರುವ ಪತಿ ಕಿಶೋರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

theft of gold; Complaint against Motherhood Hospital at bengaluru rav

ಬೆಂಗಳೂರು (ಜ.5): ಗರ್ಭಿಣಿಯ ಪತ್ನಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮಂಗಮಾಯವಾದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಡೆದಿದೆ. 

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಆಗಿರುವ ಕಿಶೋರ್. ತನ್ನ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ಚಿಕಿತ್ಸೆಗಾಗಿ  ಮದರ್‌ಹುಡ್ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಗೆ ಆಪರೇಷನ್ ಗೆ ಅಂತ ಹೋಗಿದ್ದ ಪತ್ನಿಯ ಮೈಮೇಲಿನ  ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳೇ ಕಳ್ಳತನ ಮಾಡಿರುವ ಆರೋಪ ಮಾಡಲಾಗಿದೆ. 

ಉಂಡು ಹೋದ ಕೊಂಡು ಹೋದ ಖತರ್ನಾಕ್ ಕಳ್ಳ; ಬಾಡೂಟಕ್ಕೆ ಬಂದವ ಚಿನ್ನ ದೊಚಿ ಪರಾರಿ!

ಅಂದು ನಡೆದಿದ್ದೇನು?

ಡಿಸೆಂಬರ್ 24 ನೇ ತಾರೀಖಿನಂದು ಗರ್ಭಿಣಿ ಪತ್ನಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಕಿಶೋರ್. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಡಿ.27ನೇ ತಾರೀಖಿನಂದು ಆಪರೇಷನ್ ಮಾಡುವ ದಿನಾಂಕ ತಿಳಿಸಿದ್ದರು. ಅದೇ ಆಸ್ಪತ್ರೆಯ 4ನೇ ಫ್ಲೋರ್ ನಲ್ಲಿ ಪತ್ನಿಗೆ ಚಿಕಿತ್ಸೆ ನೀಡಿರುತ್ತಾರೆ. ಆಗ ಚಿಕಿತ್ಸೆಗೆ ಮುನ್ನ ಕಿಶೋರ್ ಪತ್ನಿ ಬಳಿಯಿದ್ದ ಒಡವೆಗಳನ್ನು ಬಿಚ್ಚಿಸಿದ್ದ ಆಸ್ಪತ್ರೆ ಸಿಬ್ಬಂದಿ. ಮಂಗಳಸೂತ್ರ, ಚಿನ್ನದ ಚೈನ್, ಚಿನ್ನದ ಗುಂಡುಗಳನ್ನು ತೆಗೆದು ಇಟ್ಟಿದ್ದರು. ಚಿನ್ನಾಭರಣಗಳನ್ನು ಪೆಶೆಂಟ್ ಅಟೆಂಡರ್ ಗೆ ನೀಡಬೇಕಾಗತ್ತೆ. ಅಂದರೆ ಪೇಶೆಂಟ್ ಕಡೆಯವರಿಗೆ ನೀಡಬೇಕಾಗುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿ ಕಿಶೋರ್‌ಗೆ ಆಭರಣಗಳನ್ನ ನೀಡಿಲ್ಲ. ಆಪರೇಷನ್ ಮುಗಿದು ಹೊರ ಬಂದ ನಂತರ ಚಿನ್ನಾಭರಣ ಇಲ್ಲದ್ದು ನೋಡಿ ಪತಿ ಶಾಕ್ ಆಗಿದ್ದಾರೆ. ಯಾವುದೇ ಚಿನ್ನಾಭರಣ ಕಿಶೋರ್ ಪತ್ನಿ ಬಳಿಯಲ್ಲಿ ಇರಲಿಲ್ಲ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಗೆ ಕೇಳಿದಾಗ ಗೊತ್ತಿಲ್ಲವೆಂಬ ಉತ್ತರ ನೀಡಿದ್ದಾರೆ.

ಜ್ಯುವೆಲ್ಲರಿ ಶಾಪ್‌ಗೆ ಕನ್ನ, 3 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ಕಳವು, ಸಿಸಿಟಿವಿ ದೃಶ್ಯ ಬಹಿರಂಗ!

72 ಗ್ರಾಂನ ಒಡವೆ ಒಟ್ಟು 5 ಲಕ್ಷ ಬೆಲೆಬಾಳುವ  ಚಿನ್ನಾಭರಣ ಕಳುವು ಮಾಡಲಾಗಿದೆ. ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಮತ್ತು ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆಂದು ಆರೋಪಿಸಿರುವ ಕಿಶೋರ್. ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಆಸ್ಪತ್ರೆ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios