ಒಂದು ರಾತ್ರಿಯಲ್ಲಿ 4 ಗ್ರಾಮದಲ್ಲಿ ಕಳ್ಳತನ: ಹೃದ್ರೋಗ ಶಸ್ತ್ರಚಿಕಿತ್ಸೆಗೆ ಇಟ್ಟಿದ್ದ ಹಣ ಮಾಯ
ತಾಯಿಯ ಆಪರೇಷನ್ ಗೆ ಕೂಡಿಟ್ಟಿದ್ದ ಹಣ ಎಗರಿಸಿದ ಪಾಪಿಗಳು
ಒಂದಲ್ಲ ಎರಡಲ್ಲ ಬರೊಬ್ಬರಿ 7 ಲಕ್ಷ ಹಣ, 12 ತೊಲ ಬಂಗಾರ ಅಬೇಸ್
ಊರಿಗೂರೆ ಮಲಗಿರುವಾಗ ಊರಿಗೆ ನುಗ್ಗಿದ ಖದೀಮರ ಕೈಚಳಕ
ಚಿಕ್ಕೋಡಿ (ಜ.25): ಅದೊಂದು ಚಿಕ್ಕ ಕುಟುಂಬ ತಾಯಿಗೆ ಆಗಾಗ ಎದೆ ನೋವು ಕಾಣಿಸ್ತಿರೋದ್ರಿಂದ ವೈದ್ಯರು ನಿಮ್ಮ ತಾಯಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ ಅಂತ ಹೇಳಿರ್ತಾರೆ. ಅಲ್ಲಿಂದ ತಾಯಿಗೆ ಹೇಗಾದ್ರೂ ಮಾಡಿ ಆಪರೇಷನ್ ಮಾಡಿಸಲೇಬೇಕು ಅಂತ ಮಗ ಹಗಲುರಾತ್ರಿ ದುಡಿದು ಬರೊಬ್ಬರಿ 7 ಲಕ್ಷ ರೂಪಾಯಿ ಕೂಡಿ ಇಟ್ಟಿದ್ದರು. ಇನ್ನೇನು ನಾಳೆಯೇ ಆಪರೇಷನ್ ಮಾಡಿಸಲು ಹೋಗಬೇಕು ಅಂತಿರುವಾಗಲೇ ಆಗಿದ್ದೇನು ಗೊತ್ತಾ.? ಈ ಸ್ಟೋರಿ ನೋಡಿ...
ಒಂದು ಕಡೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಬಟ್ಟೆಗಳು ಹಾಗೂ ಮನೆಯ ವಸ್ತುಗಳು, ಇನ್ನೊಂದು ಕಡೆ ಬ್ಯಾಟರಿ ಹಿಡಿದು ಕಳ್ಳ ಬೆಕ್ಕಿನ ರೀತಿಯಲ್ಲಿ ಓಡಾಡ್ತಿರೋ ಖದೀಮರ ತಂಡ. ಹಣ ಕಳೆದುಕೊಂಡು ರೋಧಿಸುತ್ತಿರುವ ಮಹಿಳೆ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿವೆ. ಊರಿಗೂರೆ ಮಲಗಿರುವಾಗ ಊರಿಗೆ ನುಗ್ಗಿದ ಖದೀಮರ ಕೈಚಳಕ ತೋರಿಸಿದ್ದಾರೆ.
ಬೆಂಗಳೂರು: 57 ಲಕ್ಷ ಮೌಲ್ಯದ ವಾಚ್‌ಗಳನ್ನು ದೋಚಿದ್ದವರು ಬಲೆಗೆ
ಕೇವಲ ಕರೋಶಿ ಗ್ರಾಮ ಅಷ್ಟೆ ಅಲ್ಲದೇ ತಾಲೂಕಿನ ಯಾದಗೂಡ, ಬೆಳಕೂಡ, ಕರೋಶಿ,ಸೇರಿದಂತೆ ಬರೊಬ್ಬರಿ 4 ಗ್ರಾಮಗಳಲ್ಲಿ ತಡರಾತ್ರಿ ಖದೀಮರ ತಂಡವೊಂದು ತನ್ನ ಕೈಚಳಕ ತೋರಿಸಿದೆ. ಅದರಲ್ಲೂ ಕರೋಶಿ ಗ್ರಾಮದಲ್ಲಿ 5 ಮನೆಗಳಿಗೆ ಕನ್ನ ಹಾಕಿದ ಖದೀಮರು ವಿಶಾಲ ಪಾಂಡ್ರೆ ಎನ್ನುವವರ ಮನೆಯಲ್ಲಿದ್ದ 7 ಲಕ್ಷ ರೂಪಾಯಿ ನಗದು, ಹಾಗೂ 12 ತೊಲ ಬಂಗಾರದ ಆಭರಣಗಳನ್ನು ಎಗರಿಸಿದ್ದಾರೆ. ತನ್ನ ತಾಯಿಗೆ ಹೃದ್ರೋಗ ಎಂಬಂಧಿಸಿದಂತೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಿದ್ದರಿಂದ ಕಳೆದ ಕೆಲ ತಿಂಗಳುಗಳಿಂದ ಹಣ ಹೊಂದಿಸಿ ಮನೆಯಲ್ಲಿಟ್ಟಿದ್ದರು. ಆದರೆ,ಮತಡರಾತ್ರಿ ಖದೀಮರು ಆ ಹಣವನ್ನು ಕದ್ದೊಯ್ದಿದ್ದಾರೆ ಅಂತಾರೆ ವಿಶಾಲ ಪಾಂಡ್ರೆ ಅಳಲು ತೋಡಿಕೊಂಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆ: ಕಳ್ಳತನದ ಸುದ್ದಿ ಬೆಳ್ಳಂ ಬೆಳಗ್ಗೆ ಊರಿನಲ್ಲಿ ಹಬ್ಬುತ್ತಿದ್ದಂತೆ ಕರೋಶಿ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದರು. ಇನ್ನು ಊರಿನೊಳಗೆ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಖದೀಮರ ಓಡಾಟದ ದೃಶ್ಯಾವಳಿಗಳು ಸೆರೆಯಾಗಿವೆ. ಕೀಲಿ ಹಾಕಿದ ಮನೆಗಳನ್ನೆ ಟಾರ್ಗೆಟ್ ಮಾಡಿರುವ ಖದೀಮರ ತಂಡ ಮನೆ ಬೀಗ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದೆ. ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಚಿಕ್ಕೋಡಿ ಡಿವೈಎಸ್ಪಿ ಬಸವರಾಜ್ ಎಲಿಗಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇತ್ತ ಹಣ ಕಳೆದುಕೊಂಡ ಜನ ರೋಧಿಸುತ್ತಿದ್ದಾರೆ.
ಚನ್ನಪಟ್ಟಣ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಓರ್ವ ಬಂಧನ, ನಾಲ್ವರು ಪರಾರಿ
ಕಳ್ಳರನ್ನು ಹಿಡಿದು ಹಣ ಕೊಡಿಸುವಂತೆ ಪೊಲೀಸರಿಗೆ ಮನವಿ: ಕಷ್ಟಪಟ್ಟು ಅಷ್ಟೊ ಇಷ್ಟೊ ಹಣ ಸೇರಿಸಿ ಅಮ್ಮನಿಗೆ ಶಸ್ತ್ರ ಚಿಕಿತ್ಸೆ ಕೊಡಿಸಬೇಕು ಅಂತ ಮಗ ಕೂಡಿಟ್ಟ ಹಣವನ್ನು ಖದೀಮರ ತಂಡ ಅಬೇಸ್ ಮಾಡಿಕೊಂಡು ಪರಾರಿಯಾಗಿದ್ದು ಶೀಘ್ರವೇ ಖದೀಮರನ್ನು ಹಡೆಮುರಿ ಕಟ್ಟುವಂತೆ ಕರೋಶಿ ಗ್ರಾಮದ ಜನ ಆಗ್ರಹಿಸುತ್ತಿದ್ದಾರೆ..