ಮೃತಪಟ್ಟಿರುವ ವ್ಯಕ್ತಿಯೊಬ್ಬರಿಗೆ ಅವರು ಹೊಂದಿರದ ವಾಹನಕ್ಕಾಗಿ ದಂಡ ವಿಧಿಸಿ ನೋಟಿಸ್‌ ಕಳುಹಿಸಿದ ಘಟನೆ ನಡೆದಿದೆ. ಶಾಮನೂರಿನ ವಾಮದೇವಪ್ಪಗೆ ಸೇರಿದ ಕೆಎ 17 ಜೆ 6851 ವಾಹನದ ಚಾಲಕ ಹೆಲ್ಮೆಟ್‌ ಧರಿಸಿಲ್ಲ ಎಂದು ಜಿಲ್ಲಾ ಪೊಲೀಸ್‌ ಸಂಚಾರ ವಿಭಾಗದಿಂದ ನೋಟಿಸ್‌ ಕಳಿಸಲಾಗಿದೆ. 

ದಾವಣಗೆರೆ (ನ.7): ಮೃತಪಟ್ಟಿರುವ ವ್ಯಕ್ತಿಯೊಬ್ಬರಿಗೆ ಅವರು ಹೊಂದಿರದ ವಾಹನಕ್ಕಾಗಿ ದಂಡ ವಿಧಿಸಿ ನೋಟಿಸ್‌ ಕಳುಹಿಸಿದ ಘಟನೆ ನಡೆದಿದೆ. ಶಾಮನೂರಿನ ವಾಮದೇವಪ್ಪಗೆ ಸೇರಿದ ಕೆಎ 17 ಜೆ 6851 ವಾಹನದ ಚಾಲಕ ಹೆಲ್ಮೆಟ್‌ ಧರಿಸಿಲ್ಲ ಎಂದು ಜಿಲ್ಲಾ ಪೊಲೀಸ್‌ ಸಂಚಾರ ವಿಭಾಗದಿಂದ ನೋಟಿಸ್‌ ಕಳಿಸಲಾಗಿದೆ.

ಹುಲಿ ರಸ್ತೆ ದಾಟಲು ಟ್ರಾಫಿಕ್ ನಿಲ್ಲಿಸಿದ ಪೊಲೀಸ್ : ವಿಡಿಯೋ ವೈರಲ್‌

2022ರ ಜೂನ್‌ 29ರಂದು ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸಿದ್ದೀರಿ. ಅಜಾದ್‌ ನಗರ ಮುಖ್ಯರಸ್ತೆಯಲ್ಲಿ ನಿಯಮ ಉಲ್ಲಂಘನೆ ಯಾಗಿದ್ದು, ಇದಕ್ಕಾಗಿ 500 ರೂ. ಗಳ ದಂಡ ಪಾವತಿಸಲು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೋಟಿಸ್‌ನ್ನು 2022ರ ಜು.8ರಂದು ಕಳಿಸಿರುವುದಾಗಿ ತಿಳಿಸಲಾಗಿದೆ. ಆದರೆ ಈ ನೋಟಿಸ್‌ ನ.2ರಂದು ತಲುಪಿದೆ. ಮಾವ ವಾಮದೇವಪ್ಪ 2022ರ ಮಾಚ್‌ರ್‍ 7ರಂದು ನಿಧನರಾಗಿದ್ದಾರೆ. ಅವರು ಹೊಂದಿರದೇ ಇರುವ ವಾಹನಕ್ಕೆ ಜೂ.2022ರಂದು ಹೆಲ್ಮೆಟ್‌ ಧರಿಸಿಲ್ಲ ಎಂಬ ನೋಟಿಸ್‌ ಕಳಿಸುವುದು ಯಾವ ನ್ಯಾಯ ಎಂದು ಮೃತರ ಅಳಿಯ ಮಹದೇವಪ್ಪ ದಿದ್ದಿಗೆ ಪ್ರಶ್ನಿಸಿದ್ದಾರೆ.

ಸಮಯ ಮೀರಿ ತೆರೆದಿದ್ದ ಹುಕ್ಕಾ ಬಾರ್‌ ಮೇಲೆ ದಾಳಿ

ಬೆಂಗಳೂರು: ನಿಗದಿತ ಸಮಯ ಮೀರಿ ಕಾರ್ಯ ನಿರ್ವಹಿಸುತ್ತಿದ್ದ ನಗರದ ಮೂರು ಹುಕ್ಕಾ ಬಾರ್‌ಗಳ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ. ಜೀವನಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ‘ಕಾಶೀಶ್‌ ಕೆಫೆ’, ಕಮರ್ಷಿಯಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ‘ಬರ್ನ್‌ ಔಟ್‌’, ಮಡಿವಾಳ ಪೊಲೀಸ್‌ ಠಾಣೆ ವ್ಯಾಪ್ತಿಯ ‘ದಿ ಎಮಿರೇಟ್ಸ್‌ ಶೇಷಾ ಹೋಟೆಲ್‌ ಆ್ಯಂಡ್‌ ರೆಸ್ಟೋರೆಂಟ್‌’ ಹೆಸರಿನ ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿದ್ದಾರೆ. .14 ಸಾವಿರ ನಗದು, ಹುಕ್ಕಾ ತಯಾರಿಸಲು ಬಳಸುವ ಸುಮಾರು .2.10 ಲಕ್ಷ ಮೌಲ್ಯದ ಪರಿಕರಗಳು, ವಿವಿಧ ಹುಕ್ಕಾ ಫ್ಲೇವರ್‌ಗಳನ್ನು ಜಪ್ತಿ ಮಾಡಲಾಗಿದೆ.

ಈ ಮೂರು ಹುಕ್ಕಾ ಬಾರ್‌ಗಳನ್ನು ಅವಧಿ ಮೀರಿ ತೆರೆದು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಯುವಕರಿಗೆ ಹುಕ್ಕಾ ಪೂರೈಸಿ ಮಾದಕ ವ್ಯಸನಿಗಳಾಗಿ ಪರಿವರ್ತಿತರಾಗಲು ಪ್ರೇರಣೆ ನೀಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಮೂರು ಹುಕ್ಕಾ ಬಾರ್‌ಗಳ ಮಾಲಿಕರು, ಮ್ಯಾನೇಜರ್‌ಗಳು, ಹುಕ್ಕಾ ಮೇಕರ್‌ಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.\

ತಲೆಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೇ ಚಾಕು ಇರಿದು ಎಸ್ಕೇಪ್ ಆಗಿದ್ದವರು ಆರೆಸ್ಟ್