Bengaluru Crime: ಮೀಸೆ ಚಿಗುರದ ಹುಡುಗರ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ : ಇಷ್ಟೇನಾ ಕಾರಣ?

ಶಾಲೆ-ಕಾಲೇಜುಗಳನ್ನು ಓದುತ್ತಿದ್ದ ಮೀಸೆ ಚಿಗುರದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಮೂವರು ಸೇರಿ ಒಬ್ಬ ಯುವಕನನನ್ನು ಕೊಲೆ ಮಾಡಿದ್ದಾರೆ. ಬಾಲಕರು ತಮ್ಮ ಜೊತೆಗಾರರನ್ನು ಕೊಲೆ ಮಾಡಿರುವುದಕ್ಕೆ ಇಷ್ಟೇನಾ ಕಾರಣ ಎಂದು ಆಶ್ಚರ್ಯವಾಗುವುದಂತೂ ನಿಜ. 

The riot of boys with mustache ends in the murder of one Is this the reason sat

ಬೆಂಗಳೂರು (ಡಿ.27): ಬೆಂಗಳೂರಿನಲ್ಲಿ ಶಾಲೆ-ಕಾಲೇಜುಗಳನ್ನು ಓದುತ್ತಿದ್ದ ಮೀಸೆ ಚಿಗುರದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಮೂವರು ಸೇರಿ ಒಬ್ಬ ಯುವಕನನನ್ನು ಕೊಲೆ ಮಾಡಿದ್ದಾರೆ. ಬಾಲಕರು ತಮ್ಮ ಜೊತೆಗಾರರನ್ನು ಕೊಲೆ ಮಾಡಿರುವುದಕ್ಕೆ ಇಷ್ಟೇನಾ ಕಾರಣ ಎಂದು ಆಶ್ಚರ್ಯವಾಗುವುದಂತೂ ನಿಜ. 

ಟೀನೇಜ್‌ನಲ್ಲಿ ಸಣ್ಣ ಪುಟ್ಟದ್ದಕ್ಕೂ ಜಗಳ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಅದೇ ಜಗಳ ಅತಿರೇಕಕ್ಕೆ ಹೋಗದಂತೆ ಪೋಷಕರು ಆಗಿಂದಾಗ್ಗೆ ಎಚ್ಚರಿಕೆವಹಿಸಿ ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗುತ್ತದೆ ಎನ್ನುವುದಕ್ಕೆ ಈ ಯುವಕನ ಕೊಲೆಯೇ ಸಾಕ್ಷಿಯಾಗಿದೆ. ಇಲ್ಲಿ ಕೊಲೆ ಮಾಡಲು ಕಾರಣವನ್ನು ಕೇಳಿದರೆ ತಮ್ಮ ನಡುವೆ ದೊಡ್ಡವರು ಚಿಕ್ಕವರು ಎಂಬ ಜಗಳ ನಡೆಯುತ್ತಿತ್ತು. ಯಾವಾಗಲೂ ತಾನು ದೊಡ್ಡವನೆಂದು ಹೇಳಿ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದನು. ಹೀಗಾಗಿ ಕೊಲೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ನಡುವಿದ್ದ ಕ್ಷುಲ್ಲಕ ಕಾರಣಕ್ಕೆ ಜೊತೆಗಿದ್ದವನನ್ನೇ ಕೊಲೆ ಮಾಡಿ ವಾರದ ಬಳಿಕ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ವೃದ್ಧ ಜೋಡಿಯ ಕೊಲೆ ಮಾಡಿದ್ದು 12 ವರ್ಷದ ಚಿಂದಿ ಆಯುವ ಬಾಲಕ

ಸಂಪಿಗೆಹಳ್ಳಿಯಲ್ಲಿ ನಡೆದ ಕೊಲೆ: ಇನ್ನು ಕೊಲೆಯಾದ ಯುವಕನನ್ನು ಸಲ್ಮಾನ್‌ (19) ಎಂದು ಗುರುತಿಸಲಾಗಿದೆ. ಡಿಸೆಂಬರ್ 20ರ ರಾತ್ರಿಯಂದು ಸಂಪಿಗೇಹಳ್ಳಿಯಲ್ಲಿ ಸಲ್ಮಾನ್ ನನ್ನು ಹತ್ಯೆಗೈದಿದ್ದ ಆರೋಪಿಗಳು. ಇನ್ನೂ ಮೀಸೆ ಚಿಗುರದೇ ಇದ್ದರೂ ತಮ್ಮ ನಡುವೆ ದ್ವೇಷವನ್ನು ದೊಡ್ಡದಾಗಿ ಬೆಳೆಸಿಕೊಂಡು ಗಲಾಟೆ ಮಾಡಿಕೊಂಡು ಓಡಾಡುತ್ತಿದ್ದರು. ಇದರಲ್ಲಿ ಒಬ್ಬ ಯುವಕ ಸೇರಿ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಅಭ್ಯಾಸ ಮಾಡಿ ಜೀವನ ರೂಪಿಸಿಕೊಳ್ಳಬೇಕಾದ ಬಾಲಕರು ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದ್ದಾರೆ. 

ಮಕ್ಕಳ ಮೇಲೆ ಪೋಷಕರು ನಿಗಾವಹಿಸಿ: ಸಲ್ಮಾನ್‌ನನ್ನು ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಸಂಪಿಗೇಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ತಾರುಣ್ಯಾವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಿ ಅವರು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಎಚ್ಚರವಹಿಸಬೇಕು. ಅವರು ಮಾಡಿದ್ದೇ ಸರಿ ಎಂದು ಅವರನ್ನು ಸ್ವೇಚ್ಛಾಚಾರದಿಂದ ಇರಲು ಕೈಬಿಟ್ಟರೆ ಕ್ಷುಲ್ಲಕ ಕಾರಣಕ್ಕಾಗಿ ಜೀವ ಕಳೆದುಕೊಂಡು ಮಕ್ಕಳು ಶಾಶ್ವತ ದೂರಾಗಬಹುದು. ಜೊತೆಗೆ ಅಮಾಯಕ ಜೀವಗಳು ಬದುಕುಳಿಯಲು ಸಾಧ್ಯವಾಗುತ್ತದೆ. 

ಮಗಳ ಅಶ್ಲೀಲ ವಿಡಿಯೋ ವೈರಲ್: ಕೇಳಲು ಹೋದ ಅಪ್ಪನ ಕೊಲೆ

ಸಾರಕ್ಕಿಯಲ್ಲಿ ಕಾರುಗಳ ನಡುವೆ ಡಿಕ್ಕಿ:  ಸಿಲಿಕಾನ್‌ ಸಿಟಿ ಬನಶಂಕರಿ ಬಳಿಯ ಸಾರಕ್ಕಿಯಲ್ಲಿ ನಿನ್ನೆ ರಾತ್ರಿ ವೇಳೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರುಗಳು ಡಿಕ್ಕಿ ಹೊಡೆದುಕೊಂಡರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಎರಡೂ ಕಾರಿನ ಮುಂಭಾಗ ಜನ್ನು ಗುಜ್ಜಾಗಿದೆ. ಘಟನೆ ನಡೆದ ಸ್ಥಳಕ್ಕೆ ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ವಿವರವನ್ನು ಕಲೆ ಹಾಕುತ್ತಿದ್ದಾರೆ. ಇನ್ನು ಇಬ್ಬರೂ ವಾಹನ ಚಾಲಕರು ಒಬ್ಬರ ಮೇಲೊಬ್ಬರು ಆಪಾದನೆ ಮಾಡುತ್ತಿದ್ದು, ಪೊಲೀಸರು ಅಕ್ಕಪಕ್ಕದ ಸಿಸಿಟಿವಿಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. 

Latest Videos
Follow Us:
Download App:
  • android
  • ios