ಸಾಲ ಮರಳಿಸದ ಕಾರಣಕ್ಕೆ ತನ್ನ ಪತ್ನಿಯನ್ನು ನಿಂದಿಸಿದ ಎಂದು ಕೋಪಗೊಂಡು ಕಾರ್ಪೆಂಟರ್‌ವೊಬ್ಬನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆತನ ಸ್ನೇಹಿತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಸಾಲ ಮರಳಿಸದ ಕಾರಣಕ್ಕೆ ತನ್ನ ಪತ್ನಿಯನ್ನು ನಿಂದಿಸಿದ ಎಂದು ಕೋಪಗೊಂಡು ಕಾರ್ಪೆಂಟರ್‌ವೊಬ್ಬನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆತನ ಸ್ನೇಹಿತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೀರಭದ್ರೇಶ್ವರ ನಗರದ ಎ.ದಿನೇಶ್‌ ಕುಮಾರ್‌ (46) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿದ್ದ ಮೃತನ ಸ್ನೇಹಿತ ಚೋಳನಾಯನಹಳ್ಳಿ ಸಮೀಪದ ಬಾಪೂಜಿ ನಗರದ ನಿವಾಸಿ ಅರುಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದಿನೇಶ್‌ ಕುಮಾರ್‌ (Dinesh Kumar) ಹಾಗೂ ಲಕ್ಷ್ಮಿ (Lakshmi) ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಐದು ವರ್ಷಗಳಿಂದ ತಮ್ಮ ಕುಟುಂಬದ ಜತೆ ವೀರಭದ್ರೇಶ್ವರ ನಗರದಲ್ಲಿ ನೆಲೆಸಿದ್ದ ದಿನೇಶ್‌, ಕಾರ್ಪೆಂಟರ್‌ (Carpenter) ಹಾಗೂ ಮನೆಗಳ ಬಾಡಿಗೆ ಕೊಡಿಸುವ ದಲ್ಲಾಳಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಬುಧವಾರ ರಾತ್ರಿ 9 ಗಂಟೆಗೆ ಸುಮಾರಿಗೆ ದಿನೇಶ್‌ ಅವರ ಮೊಬೈಲ್‌ಗೆ ಅರುಣ್‌ (Arun) ಕರೆ ಮಾಡಿದ್ದಾನೆ. ಈ ಕರೆ ಹಿನ್ನೆಲೆಯಲ್ಲಿ ತುರ್ತು ಕೆಲಸವಿದೆ ಎಂದು ಮನೆಯವರಿಗೆ ಹೇಳಿ ಹೊರಟ ದಿನೇಶ್‌ ಆನಂತರ ಹತ್ಯೆಗೀಡಾಗಿದ್ದಾರೆ. ವಿಶ್ವೇಶ್ವರಯ್ಯ ಲೇಔಟ್‌ನ (Visvesvaraya layout) ದೊಡ್ಡಬಸ್ತಿಗೆ ಮಾರ್ಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಿನೇಶ್‌ನನ್ನು ಕಂಡು ಆತನ ಪುತ್ರನಿಗೆ ಸ್ನೇಹಿತರು ಹೇಳಿದ ಕೂಡಲೇ ತಂದೆ ರಕ್ಷಣೆಗೆ ಧಾವಿಸಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ದಿನೇಶ್‌ ಕೊನೆಯುಸಿರೆಳೆದಿದ್ದಾನೆ.

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಹತ್ಯೆ ಮಾಡಿದ ವೈದ್ಯ: ಮತ್ತಿಬ್ಬರು ಜೈಲು ಪಾಲು..!

ಹಲವು ವರ್ಷಗಳಿಂದ ಕಾರ್ಪೆಂಟರ್‌ ದಿನೇಶ್‌ ಹಾಗೂ ಪೇಂಟರ್‌ ಅರುಣ್‌ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಎರಡು ವರ್ಷಗಳ ಹಿಂದೆ ಶೇ.10 ರಷ್ಟು ಬಡ್ಡಿಗೆ 1 ಲಕ್ಷ ರು. ಸಾಲವನ್ನು ದಿನೇಶ್‌ನಿಂದ ಅರುಣ್‌ ಪಡೆದಿದ್ದ. ಪೂರ್ವ ಒಪ್ಪಂದದಂತೆ ಗೆಳೆಯನಿಗೆ ಆರೋಪಿ ಬಡ್ಡಿ ಪಾವತಿಸುತ್ತಿದ್ದ. ಆದರೆ ಇತ್ತೀಚಿಗೆ ಹಣ ಮರಳಿಸದ ಕಾರಣ ಗೆಳೆಯರ ಮಧ್ಯೆ ಮನಸ್ತಾಪವಾಗಿತ್ತು. ಹೀಗಿರುವಾಗ ನಿನಗೆ ಸಾಲ ತೀರಿಸಲಾಗದೆ ಹೋದರೆ ಪತ್ನಿಯನ್ನು ಅಡಮಾನವಿಡು ಎಂದು ಅರುಣ್‌ಗೆ ದಿನೇಶ್‌ ನಿಂದಿಸಿದ್ದ. ಈ ಮಾತಿನಿಂದ ಕೆರಳಿದ ಅರಣ್‌, ಹಣಕಾಸು ಮಾತಿನ ನೆಪದಲ್ಲಿ ಕರೆಸಿ ಚಾಕುವಿನಿಂದ ಇರಿದು ದಿನೇಶ್‌ನನ್ನು ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೇರೊಬ್ಬನ ಜೊತೆ ಪತ್ನಿಯ ಸರಸ, ಪ್ರಶ್ನಿಸಿದ ಗಂಡ ಅತ್ತೆಯ ಹೈತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಚಾಲಕಿ ಸುಂದರಿ!