ಪಟ್ಟಣದ ಜವಳದ ನಗರದ ತೋಟವೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳನನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಕುಕನೂರು (ಅ.22) : ಪಟ್ಟಣದ ಜವಳದ ನಗರದ ತೋಟವೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳನನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ ಜವಳದ ನಗರ ಸೇರಿದಂತೆ ಸುತ್ತಮುತ್ತಲಿನ ತೋಟಗಳಲ್ಲಿ ಅನೇಕ ದಿನಗಳಿಂದ ಮೋಟಾರ್‌, ಕೇಬಲ್‌, ಪೈಪ್‌ಗಳು ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡುತ್ತಿದ್ದರು. ರೈತ ಶಿವಪ್ಪ ಸಂದಿಮನಿ ಅವರ ತೋಟಕ್ಕೆ ಕಳ್ಳತನ ಮಾಡಲು ಬಂದಿದ್ದ ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ.

Add Asianetnews Kannada as a Preferred SourcegooglePreferred

ತೋಟಗಳಲ್ಲಿ ಅನೇಕ ದಿನಗಳಿಂದ ಕಳ್ಳತನವಾಗುತ್ತಿತ್ತು. ಆದರೆ ಯಾರು ಕಳ್ಳತನ ಮಾಡುತ್ತಿದ್ದಾರೆ ಎನ್ನುವದು ನಮಗೆ ಸಮಸ್ಯೆಯಾಗಿತ್ತು. ಎಪಿಎಂಸಿಯಲ್ಲಿ ಗುಡಿಸಲು ಹಾಕಿಕೊಂಡಿರುವ ಕುಟುಂಬದವರ ಮಕ್ಕಳು ಇಂತಹ ಕಳ್ಳತನದ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಬಗ್ಗೆ ಪೊಲೀಸರು ಕಠಿಣ ಕ್ರಮತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ರೈತರು ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ. ರೈತರಾದ ಬಸವರಾಜ ಬಿನ್ನಾಳ, ರುದ್ರಪ್ಪ ಕೊಡ್ಲೂರು, ಸಿದ್ದಪ್ಪ ತಟ್ಟಿ, ಶಿವಪ್ಪ ಮುಂದಲಮನಿ, ಶಿವು ಕೂಡ್ಲೂರು ಅನೇಕ ರೈತರು ಇದ್ದರು.

ಇಲ್ಲಿ ಫೋನ್ ಎಗರಿಸಿದ್ದು ಕಳ್ಳ ಅಲ್ಲ ಪೊಲೀಸ್... ವಿಡಿಯೋ ವೈರಲ್